Skip to main content
ವಿಡಿಯೋ
1/2
politics

ಮಲ್ಲಿಕಾರ್ಜುನ್‌ ಖರ್ಗೆ ಆರೋಗ್ಯ ಚೇತರಿಕೆಗೆ ವಿಶ್ರಾಂತಿ ಸಲಹೆ: ಪಕ್ಷಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ - ಕೆ. ಸಿ. ವೇಣುಗೋಪಾಲ್‌

By Shravanthi R
ಮಲ್ಲಿಕಾರ್ಜುನ್‌ ಖರ್ಗೆ ಆರೋಗ್ಯ ಚೇತರಿಕೆಗೆ ವಿಶ್ರಾಂತಿ ಸಲಹೆ: ಪಕ್ಷಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ -  ಕೆ. ಸಿ. ವೇಣುಗೋಪಾಲ್‌

ಶಸ್ತ್ರಚಿಕಿತ್ಸೆಗೊಳಗಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಅವರ ಪರಿಶ್ರಮ ಹಾಗೂ ಪಕ್ಷನಿಷ್ಠೆಯಿಂದ ಕಾಂಗ್ರೆಸ್ ನಾಯಕರು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಪ್ರತಿನಿತ್ಯ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಇತ್ತೀಚೆಗೆ ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಆರೋಗ್ಯದಲ್ಲಿ ವೈಪರೀತ್ಯ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಆರೋಗ್ಯ ಸಮಸ್ಯೆಯಿಂದ ಶಸ್ರ್ತಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಎಎಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದೇ ವೇಳೆ ಪಕ್ಷಕ್ಕೆ ಯಾವಾಗ ತೀರ್ಮಾನ ತೆಗೆದುಕೊಳ್ಳುವ ಅಗತ್ಯವಿರುತ್ತದೆ ಆವಾಗ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ. ಆ ಸಾಮರ್ಥ್ಯವು ಪಕ್ಷಕ್ಕಿದೆ. ಕಾಂಗ್ರೆಸ್‌ಗೆ ತಮ್ಮ ಪಕ್ಷದಲ್ಲಿ ಏನಾಗಬೇಕೆಂಬ ಬಗ್ಗೆ ನಿರ್ಧರಿಸಲು ಶಕ್ಯವಾಗಿದೆ ಎಂದಿದ್ದಾರೆ.

ಶುಕ್ರವಾರ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ವಿಚಾರಿಸಲು ಭೇಟಿಯಾಗಿದ್ದರು. ಬಳಿಕ ಚಿಕಿತ್ಸೆ ಪಡೆದಿರುವ ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಅವರ ಆರೋಗ್ಯವು ಸುಧಾರಿಸುತ್ತಿದೆ. ಅವರು ವಿಶ್ರಾಂತಿ ಪಡೆಯಲಿ ಎಂದು ಮನವಿ ಮಾಡಿಕೊಂಡಿದ್ದೇವೆ ಬೆಂಗಳೂರಿನಲ್ಲಿ ತಿಳಿಸಿದರು. ಅವರು ಶ್ರಮಜೀವಿ, ದಿನದ 24 ತಾಸು ಪಕ್ಷಕ್ಕಾಗಿ ದುಡಿಯುತ್ತಾರೆ. ಯಾವುದೇ ಸಂದರ್ಭದಲ್ಲಿ ಅವರ ಉಪಸ್ಥಿತಿ ಕಾರ್ಯಕ್ರಮಗಳಲ್ಲಿ ಇರುತ್ತಿತ್ತು ಎಂದಿದ್ದಾರೆ. realme NARZO 80 Lite 5G (Crystal Purple, 6GB+128GB) | 6000mAh Long-Lasting Battery | MediaTek Dimensity 6300 5G | AI Assist | IP64 Rated Water & Dust Resistance | Military-Grade Durability

ಈಶಾನ್ಯ ರಾಜ್ಯಗಳಾಗಲಿ ಯಾವುದೇ ಭಾಗದ ಕಾರ್ಯಕ್ರಮಗಳಾಗಲಿ ಅವರು ತೆರಳುತ್ತಿದ್ದರು. ಪಕ್ಷದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸದಾ ಉತ್ಸುಕರಾಗಿದ್ದು, ಇದೀಗ ಅವರ ಆರೋಗ್ಯವನ್ನು ಗಮನಿಸಿಕೊಂಡು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದರೊಟ್ಟಿಗೆ ಪ್ರತಿನಿತ್ಯ ಅವರ ಆರೋಗ್ಯವನ್ನು ವಿಚಾರಿಸುತ್ತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಸಹ ಖರ್ಗೆಯವರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ: ಕೋಟಿ ಮೌಲ್ಯದ ಗಾಂಜಾ ಜಪ್ತಿ!