ಮೈಸೂರು: ನಾಡಹಬ್ಬ ದಸರಾದ ಜಂಬೂಸವಾರಿ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ, ಗಜಪಡೆಯು ಮೈಸೂರು ಅರಮನೆ ಆವರಣದಲ್ಲಿರುವ ಆನೆ ಬಿಡಾರದಲ್ಲಿ ವಿಶ್ರಾಂತಿ ಪಡೆಯಿತು. ವಿಜಯದಶಮಿ ಮೆರವಣಿಗೆಯಲ್ಲಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ದಸರಾ ಆನೆಗಳು ಸಂಪೂರ್ಣ ವಿಶ್ರಾಂತಿ ಮನಸ್ಥಿತಿಯಲ್ಲಿದ್ದವು.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಈ ಗಜಪಡೆಯು, ಲಕ್ಷಾಂತರ ಜನರ ನಡುವೆ ಯಾವುದೇ ಅಳುಕಿಲ್ಲದೆ ಸಾಗಿ, ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸತತ ಆರನೇ ಬಾರಿಗೆ ಅಂಬಾರಿ ಹೊತ್ತ ಅಭಿಮನ್ಯು ಆನೆಯನ್ನು ನೋಡಲು ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಮಾವುತರು ಮತ್ತು ಕಾವಾಡಿಗಳು ಜನರನ್ನು ಆನೆಗಳ ಹತ್ತಿರ ಬರದಂತೆ ಎಚ್ಚರಿಕೆ ನೀಡಿದರು.ಇದನ್ನು ಓದಿ: ಭೂಪಟದಲ್ಲಿ ಇರಬೇಕಾದರೆ ಭಯೋತ್ಪಾದನೆಯನ್ನು ಬಿಡಿ: ಪಾಕ್‌ಗೆ ಸೇನಾ ಜನರಲ್ ಉಪೇಂದ್ರ ದ್ವಿವೇದಿ ನೇರ ಎಚ್ಚರಿಕೆ
ಅನೇಕರು ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯ ಬಳಿ ತೆರಳಿ ಫೋಟೊ ತೆಗೆದುಕೊಳ್ಳಲು ಅವಕಾಶ ಕೇಳುತ್ತಿದ್ದು ಸಾಮಾನ್ಯ ಸಂಗತಿಯಾಗಿತ್ತು.
ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಸತತ ಆರನೇ ಬಾರಿಗೆ ಹೊತ್ತ ಅಭಿಮನ್ಯು ಆನೆಗೆ ಅದರ ಮಾವುತ ವಸಂತ ಪ್ರೀತಿಯ ಮುತ್ತು ನೀಡಿ ಮುದ್ದಾಡಿದರು. ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ದೂರ ಮೆರವಣಿಗೆಯಲ್ಲಿ ಸಾಗಿ ದಣಿದಿದ್ದ ಅಭಿಮನ್ಯುವನ್ನು ಮಾವುತ ವಸಂತ ತಬ್ಬಿಕೊಂಡು ಮುತ್ತಿಕ್ಕಿದರು.BULLMER Striped Textured Printed Polo Neck Fullsleeve T-Shirt with Rib for Men
ಇನ್ನೂ ಬಿಡಾರದಲ್ಲಿ ಉಳಿದಿದ್ದ ಭೀಮಾ, ಲಕ್ಷ್ಮಿ, ರೂಪಾ, ಏಕಲವ್ಯ ಆನೆಗಳು ಮೇವು ಮೇಯುತ್ತಾ ವಿಶ್ರಾಂತಿ ಪಡೆಯುತ್ತಿದ್ದವು. ಅವುಗಳ ಮುಂದೆ ಮಾವುತರು, ಕಾವಾಡಿಗಳು, ಮತ್ತು ಅವರ ಮಕ್ಕಳು ವಿಶ್ರಾಂತಿ ಪಡೆಯುತ್ತಿದ್ದರು. ಮಾವುತರು, ಕಾವಾಡಿಗಳ ಕುಟುಂಬಗಳು ಮತ್ತೆ ಕಾಡಿಗೆ ಹೋಗಲು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದವು.