ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹದ ಹಾನಿಯಿಂದ ತತ್ತರಿಸಿವೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಹಾನಿ ಅಧ್ಯಯನ ನಡೆಸುತ್ತಿದ್ದಾರೆ. ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸುವ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳ ಮುಂದೆ ಮಾತನಾಡಿದ ಆರ್.ಅಶೋಕ್ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ಮತ್ತು ಸಚಿವರನ್ನು ತೀವ್ರವಾಗಿ ಟೀಕಿಸಿದರು. ಪ್ರವಾಹ ಪೀಡಿತ ರೈತರು ಸಚಿವರು ನಮ್ಮ ಬಳಿ ಬಂದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಪರಿಹಾರ ನೀಡಿ ಅಥವಾ ಅಧಿಕಾರ ಬಿಟ್ಟು ತೊಲಗಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಇದನ್ನು ಓದಿ: ಮಹಾರಾಷ್ಟ್ರ ಕರಾವಳಿಗೆ ‘ಶಕ್ತಿ’ ಚಂಡಮಾರುತ ಭೀತಿ - ಕರ್ನಾಟಕದಲ್ಲಿಯೂ ಭಾರಿ ಮಳೆ ಸಾಧ್ಯತೆ.!
ಬಿಜೆಪಿ ನಡೆಸುತ್ತಿರುವ ಪ್ರವಾಹ ಅಧ್ಯಯನವನ್ನು ಸಚಿವ ಎಂ.ಬಿ. ಪಾಟೀಲ್ ಟೀಕಿಸಿ, ಟ್ರೈನ್ ಹೋದ ಮೇಲೆ ಬಿಜೆಪಿ ಟಿಕೆಟ್ ತೆಗೆದುಕೊಂಡಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಕಾಂಗ್ರೆಸ್‌ಗೆ ಟ್ರೈನ್ ಇಲ್ಲ. ಕಾಂಗ್ರೆಸ್ ಟ್ರೈನ್ ನಿಂತು ಕೆಟ್ಟು ಹೋಗಿದೆ. ಅದನ್ನು ರಿಪೇರಿ ಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ANAYRA 925 Sterling Silver Floral Pendant Set for Women | Hallmark Certified Silver Pendant Set | Silver Jewellery for Women |Great for Gifting
ಮುಖ್ಯಮಂತ್ರಿ ಬದಲಾವಣೆ ಮತ್ತು ಮಂತ್ರಿ ಮಂಡಲದ ಬದಲಾವಣೆಯ ಗೊಂದಲದಲ್ಲಿ ಸರ್ಕಾರವಿದೆ. ನಮ್ಮ ಟ್ರೈನ್ ಹೋದ ಮೇಲೆ ಬಂದಿದ್ದಾರೆ ಎಂದು ಹೇಳುತ್ತಾರೆ, ಆದರೆ ಅವರಿಗೆ ಟ್ರೈನೇ ಇಲ್ಲ. ಕಾಂಗ್ರೆಸ್‌ನ ಟ್ರೈನ್ ಕೇವಲ ಲೂಟಿ ಮಾಡುವ ಟ್ರೈನ್ ಎಂದು ಅವರು ಟೀಕಿಸಿದರು.