Skip to main content
ವಿಡಿಯೋ
1/2
politics

ಕರೂರ್‌ ಕಾಲ್ತುಳಿತ ಪ್ರಕರಣ: ಸ್ಥಳದಿಂದ ನಾಪತ್ತೆಯಾದ ವಿಜಯ್‌ & TVK ನಾಯಕರಿಗೆ ಮದ್ರಾಸ್‌ ಹೈಕೋರ್ಟ್‌ ತರಾಟೆ

By Gireesh Vasishta
ಕರೂರ್‌ ಕಾಲ್ತುಳಿತ ಪ್ರಕರಣ: ಸ್ಥಳದಿಂದ ನಾಪತ್ತೆಯಾದ ವಿಜಯ್‌ & TVK ನಾಯಕರಿಗೆ ಮದ್ರಾಸ್‌ ಹೈಕೋರ್ಟ್‌ ತರಾಟೆ

“ಸಭೆಯನ್ನು ಆಯೋಜಿಸಿದ ನಾಯಕ ವಿಜಯ್ ಮತ್ತು ಅವರ ರಾಜಕೀಯ ಪಕ್ಷದ ಸದಸ್ಯರು ಘಟನೆಯ ಸ್ಥಳದಿಂದ ಪಲಾಯನ ಮಾಡಿರುವುದು ನಿಜಕ್ಕೂ ವಿಷಾದನೀಯ... ಘಟನೆಯ ನಂತರ ಘಟನಾ ಸ್ಥಳದಿಂದ ಪಲಾಯನಗೈದ ಕಾರ್ಯಕ್ರಮದ ಆಯೋಜಕರು, ವಿಜಯ್ ಮತ್ತು ರಾಜಕೀಯ ಪಕ್ಷದ ಸದಸ್ಯರ ನಡವಳಿಕೆಯನ್ನು ನ್ಯಾಯಾಲಯವು ಬಲವಾಗಿ ಖಂಡಿಸುತ್ತದೆ" ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ತಮಿಳುನಾಡು: ಕರೂರಿನಲ್ಲಿ ಸೆಪ್ಟೆಂಬರ್ 27 ರಂದು ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದ ಸ್ಥಳದಿಂದ 'ಪಲಾಯನ' ಮಾಡಿದ್ದಕ್ಕಾಗಿ, ಅದರ ಸ್ಥಾಪಕ, ನಟ-ರಾಜಕಾರಣಿ ವಿಜಯ್ ಸೇರಿದಂತೆ TVK ನಾಯಕತ್ವವನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ಕಟುವಾಗಿ ಟೀಕಿಸಿದೆ. ಘಟನೆಯಲ್ಲಿ 41 ಜನರು ಸಾವನ್ನಪ್ಪಿದರು. ಕಾಲ್ತುಳಿತದಂತಹ ಪರಿಸ್ಥಿತಿಯನ್ನು ನಿಭಾಯಿಸಲು TVK ತಕ್ಷಣದ ರಕ್ಷಣೆ ಮತ್ತು ಸಹಾಯದ ಪ್ರಯತ್ನಗಳನ್ನು ಮಾಡಬೇಕಾಗಿತ್ತು ಎಂದು ನ್ಯಾಯಮೂರ್ತಿ ಎನ್ ಸೆಂಥಿಲ್ಕುಮಾರ್ಹೇಳಿದರು.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+

“ಸಭೆಯನ್ನು ಆಯೋಜಿಸಿದ ನಾಯಕ ವಿಜಯ್ ಮತ್ತು ಅವರ ರಾಜಕೀಯ ಪಕ್ಷದ ಸದಸ್ಯರು ಘಟನೆಯ ಸ್ಥಳದಿಂದ ಪಲಾಯನ ಮಾಡಿರುವುದು ನಿಜಕ್ಕೂ ವಿಷಾದನೀಯ... ಘಟನೆಯ ನಂತರ ಘಟನಾ ಸ್ಥಳದಿಂದ ಪಲಾಯನಗೈದ ಕಾರ್ಯಕ್ರಮದ ಆಯೋಜಕರು, ವಿಜಯ್ ಮತ್ತು ರಾಜಕೀಯ ಪಕ್ಷದ ಸದಸ್ಯರ ನಡವಳಿಕೆಯನ್ನು  ನ್ಯಾಯಾಲಯವು ಬಲವಾಗಿ ಖಂಡಿಸುತ್ತದೆ" ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.ಇದನ್ನು ಓದಿ: ಕನ್‌ಫರ್ಮ್‌: ನಿಶ್ಚಿತಾರ್ಥ ಮಾಡಿಕೊಂಡ ರಶ್ಮಿಕಾ ಮಂದಣ್ಣ & ವಿಜಯ್ ದೇವರಕೊಂಡ; ವಿವಾಹ ದಿನಾಂಕ ಯಾವಾಗ?

"ಆಘಾತಕಾರಿ ಸಂಗತಿಯೆಂದರೆ, ರಾಜಕೀಯ ಪಕ್ಷದ ನಾಯಕ ಸೇರಿದಂತೆ ಕಾರ್ಯಕ್ರಮದ ಆಯೋಜಕರು ತಮ್ಮದೇ ಕಾರ್ಯಕರ್ತರು, ಅನುಯಾಯಿಗಳು, ಅಭಿಮಾನಿಗಳನ್ನು ತ್ಯಜಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಯಾವುದೇ ಪಶ್ಚಾತ್ತಾಪ, ಜವಾಬ್ದಾರಿ ಅಥವಾ ವಿಷಾದದ ಅಭಿವ್ಯಕ್ತಿಯೂಅವರಿಗೆ ಇಲ್ಲ" ಎಂದು ವಿಮರ್ಶಿಸಿತು. ವಿಷಯದಲ್ಲಿ ರಾಜ್ಯದ ತನಿಖೆ ಸರಿಯಾಗಿ ನಡೆದಿಲ್ಲ ಎಂದು ನ್ಯಾಯಮೂರ್ತಿ ಸೆಂಥಿಲ್ಕುಮಾರ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಕುರಿತು ತನಿಖೆ ನಡೆಸಲು ರಚಿಸಿರುವ SIT ನೇತೃತ್ವವನ್ನು ಪೊಲೀಸ್ ಮಹಾನಿರ್ದೇಶಕ (ಉತ್ತರ ವಲಯ) ಆಸ್ರಾ ಗಾರ್ಗ್ವಹಿಸಲಿದ್ದಾರೆ. ತಂಡದ ಇತರ ಸದಸ್ಯರಾಗಿ ನಾಮಕ್ಕಲ್ ಪೊಲೀಸ್ ವರಿಷ್ಠಾಧಿಕಾರಿ ವಿಮಲಾ (ಐಪಿಎಸ್) ಮತ್ತು CSCID ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮಲಾದೇವಿ ಇರಲಿದ್ದಾರೆ. ಗಾರ್ಗ್ಅವರು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಸದಸ್ಯರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ನ್ಯಾಯಾಲಯವು ಹೇಳಿಕೆ ನೀಡಿದೆ.