Skip to main content
ವಿಡಿಯೋ
1/2
general

ಆಧಾರ್‌ ಕಾರ್ಡ್‌ನಲ್ಲಿ ಮಕ್ಕಳ ಬಯೋಮೆಟ್ರಿಕ್‌ ಅಪ್‌ಡೇಟ್‌ಗೆ ಶುಲ್ಕ ಮನ್ನಾ..!

By Sushmitha R
ಆಧಾರ್‌ ಕಾರ್ಡ್‌ನಲ್ಲಿ ಮಕ್ಕಳ ಬಯೋಮೆಟ್ರಿಕ್‌ ಅಪ್‌ಡೇಟ್‌ಗೆ ಶುಲ್ಕ ಮನ್ನಾ..!

ನವದೆಹಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಯುಐಡಿಎಐ ಮಕ್ಕಳ ಆಧಾರ್‌ ಕಾರ್ಡ್‌ನ ಬಯೋಮೆಟ್ರಿಕ್‌ ನವೀಕರಣಕ್ಕೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಒಂದು ವರ್ಷದ ಮಟ್ಟಿಗೆ ಮನ್ನಾ ಮಾಡಿದೆ.

ನವದೆಹಲಿ: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಯುಐಡಿಎಐ ಮಕ್ಕಳ ಆಧಾರ್‌ ಕಾರ್ಡ್‌ನ ಬಯೋಮೆಟ್ರಿಕ್‌ ನವೀಕರಣಕ್ಕೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಒಂದು ವರ್ಷದ ಮಟ್ಟಿಗೆ ಮನ್ನಾ ಮಾಡಿದೆ. ಈ ನಿಯಮವು ಅಕ್ಟೋಬರ್‌ 1, 2025ರಿಂದ ಜಾರಿಗೆ ಬಂದಿದ್ದು, ಒಂದು ವರ್ಷದವರೆಗೆ ಚಾಲ್ತಿಯಲ್ಲಿರಲಿದೆ ಎಂದು ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನು ಓದಿ :ಭಾರತ ನನ್ನ ಮಾತೃಭೂಮಿ: ಪೌರತ್ವಕ್ಕಾಗಿ ಈ ಹೇಳಿಕೆಯಲ್ಲ, ದೇಶಭಕ್ತಿಗಾಗಿ ಎಂದ ಪಾಕ್ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ!

ಈ ಯೋಜನೆಯಿಂದ ಸುಮಾರು 6 ಕೋಟಿ ಮಕ್ಕಳಿಗೆ ಪ್ರಯೋಜನವಾಗಲಿದೆ ಎಂದು ಯುಐಡಿಎಐ ಹೇಳಿದೆ. 5 ವರ್ಷದೊಳಗಿನ ಮಕ್ಕಳ ಆಧಾರ್‌ ನೋಂದಣಿಗೆ ಭಾವಚಿತ್ರ, ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಜನನ ಪ್ರಮಾಣ ಪತ್ರವನ್ನು ಒದಗಿಸಬೇಕು. ಈ ವಯಸ್ಸಿನ ಮಕ್ಕಳ ಬೆರಳಚ್ಚು ಮತ್ತು ಕಣ್ಣಿನ ಪಾಪೆ (ಐರಿಸ್‌) ಸಂಪೂರ್ಣವಾಗಿ ಪಕ್ವವಾಗಿರುವುದಿಲ್ಲ. Orient Electric Newly Launched 1200 mm Aeon BLDC PRO, Anti-Dust Designer Ceiling fan with Remote & 5 yrs Warranty by Orient, Boost mode for Quick Cooling & High Air Delivery - Pixel White

ಹೀಗಾಗಿ, ಈ ವಯಸ್ಸಿನಲ್ಲಿ ಬಯೋಮೆಟ್ರಿಕ್‌ ದಾಖಲಿಸಲಾಗುವುದಿಲ್ಲ. ಪ್ರಸ್ತುತ ನಿಯಮದ ಪ್ರಕಾರ, ಮಕ್ಕಳಿಗೆ 5 ವರ್ಷ ತುಂಬಿದ ನಂತರ ಬೆರಳಚ್ಚು, ಕಣ್ಣಿನ ಪಾಪೆ ಮತ್ತು ಭಾವಚಿತ್ರವನ್ನು ಆಧಾರ್‌ನಲ್ಲಿ ನವೀಕರಿಸಬೇಕು.

ಇದೇ ರೀತಿ, 15 ರಿಂದ 17 ವರ್ಷ ವಯಸ್ಸಿನ ಮಕ್ಕಳು ಎರಡನೇ ಬಾರಿಗೆ ತಮ್ಮ ಬಯೋಮೆಟ್ರಿಕ್‌ ವಿವರಗಳನ್ನು ಅಪ್‌ಡೇಟ್‌ ಮಾಡಬೇಕು. ಈಗ, 5 ರಿಂದ 7 ಮತ್ತು 15 ರಿಂದ 17 ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್‌ ಅಪ್‌ಡೇಟ್‌ಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.ಇದನ್ನು ಓದಿ:ಮುಜರಾಯಿ ಇಲಾಖೆಯಿಂದ ಬಿಗ್‌ ಶಾಕ್‌..ದೇವಸ್ಥಾನದ ಜಾಗದಲ್ಲಿದ್ದ 10 ಕ್ಕೂ ಹೆಚ್ಚು ಅಂಗಡಿಗಳು ಜಪ್ತಿ….!!

ಆದರೆ, ಈ ಉಚಿತ ಅವಧಿಯ ನಂತರ ಪ್ರತಿ ಬಯೋಮೆಟ್ರಿಕ್‌ ಅಪ್‌ಡೇಟ್‌ಗೆ 125 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. ಈ ಶುಲ್ಕ ಮನ್ನಾದಿಂದ ಮಕ್ಕಳ ಆಧಾರ್‌ ನವೀಕರಣವು ಆರ್ಥಿಕವಾಗಿ ಸುಲಭವಾಗಲಿದೆ.

ಇದರಿಂದ ಕುಟುಂಬಗಳಿಗೆ ಆರ್ಥಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ, ಆಧಾರ್‌ ಕಾರ್ಡ್‌ನ ಬಯೋಮೆಟ್ರಿಕ್‌ ದಾಖಲೆಗಳು ನವೀಕೃತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಸಹಾಯವಾಗಲಿದೆ. ಈ ಕ್ರಮವು ಆಧಾರ್‌ ವ್ಯವಸ್ಥೆಯ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲಿದೆ ಎಂದು ಪ್ರಾಧಿಕಾರ ತಿಳಿಸಿದೆ.ಇದನ್ನು ಓದಿ:ಜಾತಿ ಗಣತಿಗೆ ಹೋಗಿದ್ದ ಶಿಕ್ಷಕಿ ಅಪಘಾತದಲ್ಲಿ ಸಾವು..!