Skip to main content
ವಿಡಿಯೋ
1/3
general

ಅಪ್ಪ: ನಿನ್ನ ಜೀವನವೇ ಕತ್ತಲಲ್ಲಿ ಮುಳುಗಿದಾಗ ಸೂರ್ಯನ ಬೆಳಕಂತೆ ಬರುವ ಶಕ್ತಿ: ಆತ ಇರದಿದ್ದರೆ?

By Gireesh Vasishta
ಅಪ್ಪ: ನಿನ್ನ ಜೀವನವೇ ಕತ್ತಲಲ್ಲಿ ಮುಳುಗಿದಾಗ ಸೂರ್ಯನ ಬೆಳಕಂತೆ ಬರುವ ಶಕ್ತಿ: ಆತ ಇರದಿದ್ದರೆ?

ಹೀಗಿರುವಾಗ ಬೇರೆ ಕುಟುಂಬದ ಮಕ್ಕಳು ಅವರ ತಂದೆಯ ಜೊತೆ ಬೈಕಿನಲ್ಲಿ ಹೋಗುವಾಗ ಇಲ್ಲಿ ತಂದೆ ಇರದ ಆ ಹುಡುಗನಿಗೆ ಮನಸ್ಸಿನಲ್ಲಿ ಏನೋ ಸಂಕಟ. ನನಗೂ ತಂದೆ ಇದ್ದಿದ್ದರೆ ಹೀಗೆ ಹೋಗಬಹುದಿತ್ತೇನೋ ಎನ್ನುವ ಕಲ್ಪನೆ. ಅಲ್ಲಿ ಕಣ್ಣಂಚು ತುಸು ಒದ್ದೆಯಾಗುತ್ತದೆ...

ಹೌದು, ಅಪ್ಪ- ಅಮ್ಮ ನಮ್ಮ ಎರಡು ಕಣ್ಣುಗಳು ಎಂದೇ ಹೇಳಬಹುದು. ಏಕೆಂದರೆ ಅಪ್ಪ ನಮ್ಮ ಜನ್ಮಕ್ಕೆ ಕಾರಣನಾದರೆ ಅಮ್ಮ ಜನ್ಮದ ಅಭ್ಯುದಯಕ್ಕೆ ಶ್ರಮಿಸುವ ಮಹಾತಾಯಿ. ನೀವು ಗಮನಿಸಿರಬಹುದು ಕೆಲವೊಬ್ಬರು ಅವರ ಶಾಲಾ ಕಾಲೇಜು ದಿನದಲ್ಲಿ, ಹದಿಹರೆಯದ ದಿನದಲ್ಲಿ ಜವಾಬ್ದಾರಿಯೇ ಇಲ್ಲದ ಹಾಗೆ ಬದುಕಿರುತ್ತಾರೆ. ಏಕೆಂದರೆ ಮನೆಯ ಮತ್ತು ಅವರ ಸಂಸಾರದ ಎಲ್ಲ ಜವಾಬ್ದಾರಿಯನ್ನು ತಂದೆ ಎನ್ನುವ ವ್ಯಕ್ತಿ ನಿರ್ವಹಿಸುತ್ತಿರುತ್ತಾರೆ.

ಇದರಿಂದ ಕಷ್ಟ ಎಂದರೇನು ಎಂಬುದೇ ನಮಗೆ ತಿಳಿಯುವುದಿಲ್ಲ, ಹೀಗೆ ಅಪ್ಪ ತನ್ನ ಮಕ್ಕಳು ಬೆಳೆದು ದೊಡ್ಡವರಾಗುವವರೆಗೂ ತನ್ನ ಕೈಲಾಗುವ ಎಲ್ಲಾ ಸಹಾಯವನ್ನು ಮಾಡುತ್ತಾನೆ. ಹೀಗೆ ಕುಟುಂಬದಲ್ಲಿ ತಂದೆ ತಾಯಿ ಇಬ್ಬರು ಇರುವವರ ಕಥೆ ಇದಾದರೆ ತಂದೆ ಇಲ್ಲದವರ ಕಥೆ ಬೇರೆಯೇ ಇದೆ. ಶಾಲ ಕಾಲೇಜಿನ ದಿನಗಳಲ್ಲೇ ತಂದೆಯನ್ನು ಕಳೆದುಕೊಂಡ ಅದೇಷ್ಟೋ ಜನರನ್ನು ನಾವು ನೋಡಿದ್ದೇವೆ, ಮನೆಯಲ್ಲಿ ಅಪ್ಪ ತೀರಿಕೊಂಡರೆ ಅಲ್ಲಿ ಒಬ್ಬ ವ್ಯಕ್ತಿ ತೀರಿಕೊಂಡಂತಲ್ಲ ಮನೆಯ ಶಕ್ತಿಯೇ ತೀರಿಹೋದಂತೆ. ಇದಕ್ಕೆ ಕೆಲವೊಂದು ಒಳನೋಟವೂ ಇದೆ.ಇದನ್ನು ಓದಿ: ರೋಹಿತ್ & ಕೊಹ್ಲಿ ಆಡಬಹುದು, ಅವರ ಪ್ರದರ್ಶನವೇ(2027ರ ವರ್ಡ್‌ಕಪ್‌ಗೆ) ಅವರ ಅವಧಿಯನ್ನು ನಿರ್ಧರಿಸುತ್ತದೆ: ಅಜಿತ್‌ ಅಗರ್ಕರ್‌

ಉದಾಹರಣೆಗೆ ಮನೆಯಲ್ಲಿ ಹಣಕಾಸಿನ ಭದ್ರತೆ ಇದ್ದರೆ ಮನೆಗೆ ವ್ಯಕ್ತಿಯ ಕೊರತೆ ಉಂಟಾಗುತ್ತದೆ ವಿನಃ ಅವಮಾನದ, ಬಡತನದ ಕೊರತೆ ಉಂಟಾಗುವುದು ತುಸು ಕಡಿಮೆ. ಏಕೆಂದರೆ ಈಗಿನ ವಿದ್ಯಮಾನದಲ್ಲಿ ಹಣವಿರುವ ಜನರಿಗೆ ಎಲ್ಲರೂ ಗೌರವ ಸಲ್ಲಿಸುತ್ತಾರೆ. ಆದರೆ ಹಣವಿಲ್ಲದ ಮನೆ ಮತ್ತು ಮನೆಯಲ್ಲಿ ದೊಡ್ಡವರಿಲ್ಲದಿದ್ದರೆ ಯಾರು ಗೌರವಿಸುವುದಿಲ್ಲ.   ಇದನ್ನು ಓದಿ: ಕಾಂತಾರ- ಚಾಪ್ಟರ್ 1: ಬಾಕ್ಸ್ ಆಫೀಸ್ ಕಲೆಕ್ಷನ್ ಡೇ 3: ₹160 ಕೋಟಿ ಗಡಿ ದಾಟಿದ ರಿಷಭ್ ಚಿತ್ರ

ಕೆಲವೊಂದು ಕಡೆ ತಂದೆಯನ್ನು ಕಳೆದುಕೊಂಡ ಮಕ್ಕಳು ಹಣಕಾಸಿನ ವಿಚಾರದಲ್ಲಿ ಮತ್ತು ಪರಿಸ್ಥಿತಿಯ ವಿಚಾರದಲ್ಲಿ ಬಲು ಸಂಕಷ್ಟಕ್ಕೆ ಸಿಲುಕುತ್ತಾರೆ. ಒಂದು ಕಡೆ ಅವರ ಜೀವನವನ್ನು ನೋಡಬೇಕು, ಮನೆಯನ್ನು ಸಂಭಾಳಿಸಬೇಕು, ಅಕ್ಕ ತಂಗಿಯರ ಜೀವನವನ್ನು ನೋಡಬೇಕು ಮತ್ತು ತಮ್ಮ ಕನಸುಗಳನ್ನೆಲ್ಲ ಗಂಟು ಕಟ್ಟಿ ಮನೆಗೋಸ್ಕರ ದುಡಿಯಬೇಕು ಏಕೆಂದರೆ ದುಡಿಯದೇ ಇದ್ದರೆ ಬೇರೆ ದಾರಿ ಇಲ್ಲ... ಹೀಗಿರುವಾಗ ಬೇರೆ ಕುಟುಂಬದ ಮಕ್ಕಳು ಅವರ ತಂದೆಯ ಜೊತೆ ಬೈಕಿನಲ್ಲಿ ಹೋಗುವಾಗ ಇಲ್ಲಿ ತಂದೆ ಇರದ ಆ ಹುಡುಗನಿಗೆ ಮನಸ್ಸಿನಲ್ಲಿ ಏನೋ ಸಂಕಟ. ನನಗೂ ತಂದೆ ಇದ್ದಿದ್ದರೆ ಹೀಗೆ ಹೋಗಬಹುದಿತ್ತೇನೋ ಎನ್ನುವ ಕಲ್ಪನೆ. ಅಲ್ಲಿ ಕಣ್ಣಂಚು ತುಸು ಒದ್ದೆಯಾಗುತ್ತದೆ...BULLMER Striped Textured Printed Polo Neck Fullsleeve T-Shirt with Rib for Men

ಬೇರೆ ಊರಿನಿಂದ ತನ್ನ ಊರಿಗೆ ಬರುವಾಗ ಸಮಯ ರಾತ್ರಿ ಆಗಿರುತ್ತದೆ,, ಬೇರೆ ಮಕ್ಕಳು ಅವರ ತಂದೆಗೆ ಕರೆ ಮಾಡಿ ಬಂದು ಕರೆದುಕೊಂಡು ಹೋಗು ಎನ್ನುತ್ತಾರೆ ಆದರೆ ತಂದೆ ಇಲ್ಲದ ಈ ವ್ಯಕ್ತಿ ಯಾರನ್ನು ಕರೆಯಬೇಕು ಆಗಲು ಮನಸ್ಸು ಭಾರವಾಗುತ್ತದೆ. ಮನೆಯಲ್ಲಿ ಜವಾಬ್ದಾರಿಯುತಸ್ಥಾನದಲ್ಲಿರಬೇಕಾದ ತಂದೆ ಇಲ್ಲದಿರುವಾಗ ಊರಿನ ದಾರಿಹೋಕರೆಲ್ಲ ಮನೆಗೆ ನುಗ್ಗಿ ಅಗತ್ಯವಿಲ್ಲದಿದ್ದರೂ ಬಾಯಿಗೆ ಬಂದಂತೆ ಹರಟುತ್ತಾರೆ. ಅವರ ಮೇಲೆ ಆ ಹುಡುಗ ರೇಗಿದರೆ ಇವನನ್ನು ಅವರ ವಿರೋಧಿಯನ್ನಾಗಿ ನೋಡುತ್ತಾರೆ ಏಕೆಂದರೆ ತಂದೆ ಇಲ್ಲ ಎಂಬ ಕಾರಣಕ್ಕೆ..

ಇನ್ನೂ ಕೆಲವೊಂದು ಸಂದರ್ಭದಲ್ಲಿ ಪರಿಸ್ಥಿತಿಯ ಹೊಡೆತಕ್ಕೆ ಸಿಕ್ಕಿ, ತನ್ನ ಜೀವನವನ್ನೇ ಹಾಳು ಮಾಡಿಕೊಂಡಿರುವ ಅದೆಷ್ಟು ತಂದೆ ಇಲ್ಲದ ಹುಡುಗರು ಇದ್ದಾರೆ. ಹೀಗೆ ತಂದೆ ಇಲ್ಲದ ಮನೆ ಬೆಳೆಯುವುದು ಬಲು ಕಷ್ಟ. ನಿಮಗೆ ತಂದೆ ಇದ್ದರೆ ಅವರನ್ನು ಅರ್ಥ ಮಾಡಿಕೊಳ್ಳಿ ಅವರ ಜೊತೆ ಚೆನ್ನಾಗಿರಿ, ನೀವೆ ಸೋಲಿ, ಕೆಲವೊಮ್ಮೆ ಅವರು ತಪ್ಪು ಮಾಡುವುದು ಸಹಜ ಆಗ ತಿದ್ದಲು ಪ್ರಯತ್ನಿಸಿ. ಜೀವನ ಚೆನ್ನಾಗಿರುತ್ತದೆ. ಏಕೆಂದರೆ ತಂದೆ ಎನ್ನುವ ಶಕ್ತಿ ಒಮ್ಮೆ ಕಳೆದುಹೋದರೆ ಮತ್ತೆ ಸಿಗುವುದಿಲ್ಲ.