ಉತ್ತರ ಬಂಗಾಳದ ಬೆಟ್ಟಗಾಡು ಮತ್ತು ಸಮತಟ್ಟಾದ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆವರೆಗೂ ಭಾರೀ ಮಳೆಯಾಗಿದ್ದು, ಭೂಕುಸಿತ, ಸೇತುವೆ ಕುಸಿತ ಮತ್ತು ಪ್ರವಾಹಕ್ಕೆ ಕಾರಣವಾಗಿದೆ. ಈ ದುರಂತದಲ್ಲಿ ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ, ಇವರಲ್ಲಿ ಹೆಚ್ಚಿನವರು ಮಿರಿಕ್ ಎಂಬ ಪ್ರವಾಸಿತಾಣದ ಜನರು ಹಲವರು ಕಾಣೆಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಡಾರ್ಜಿಲಿಂಗ್ ಭೂಪ್ರದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ರಕ್ಷಣಾ ತಂಡಗಳು ಸತತ ಕಾರ್ಯಾಚರಣೆ ನಡೆಸಿದೆ.
ಮಿರಿಕ್‌ನಲ್ಲಿ ತೀವ್ರ ಹಾನಿ -
ಮಿರಿಕ್ ಪಟ್ಟಣದಲ್ಲಿ 13 ಶವಗಳು ಪತ್ತೆಯಾಗಿವೆ. ಈ ಪ್ರವಾಸಿ ತಾಣವು ಸುಮೇಂದು ಸರೋವರ ಮತ್ತು ಕಾಂಚನಜಂಗಾ ಶಿಖರದ ನೋಟಕ್ಕೆ ಹೆಸರುವಾಸಿಯಾಗಿದೆ ಎನ್ನಲಾಗಿದೆ. ಕೋಲ್ಕತ್ತಾದ ಪ್ರವಾಸಿತಾಣ ಹಿಮಾದ್ರಿ ಪುರ್ಕಾಯತ್ ಎಂಬಲ್ಲಿ 10 ಮಂದಿ ಇನ್ನೂ ಕಾಣೆಯಾಗಿದ್ದಾರೆ. ರಕ್ಷಣಾ ತಂಡಗಳು ಎತ್ತರದ ಬೆಟ್ಟ ಪ್ರದೇಶಗಳಿಗೆ ತಲುಪಿದ ಪರಿಣಾಮವಾಗಿ ಶೋಧ ನಡೆಸಿದ್ದಾರೆ. ಈ ಮಧ್ಯೆ ಸಾವಿನ ಸಂಖ್ಯೆ ಏರಿಕೆಯಾಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. boAt Wave Call 2 Plus Smart Watch w/Bilingual Support (Hindi/English), 1.96”(4.97 cm) HD Display, BT Calling, 100+Sports Modes, Animated Watch Faces, Voice Assistant(Active Black)
ಮಳೆಯ ತೀವ್ರತೆ -
ಡಾರ್ಜಿಲಿಂಗ್ 24 ಗಂಟೆಗಳಲ್ಲಿ 261 ಮಿಮೀ ಮಳೆಯಾಗಿದ್ದು, ಇದನ್ನು 'ಅತ್ಯಂತ ಭಾರೀ ಮಳೆ' ಎನ್ನಲಾಗಿದೆ. ಕೂಚ್ ಬೆಹಾರ್‌ನಲ್ಲಿ 192 ಮಿಮೀ ಮತ್ತು ಜಲ್ಪಾಯ್‌ಗುರಿಯಲ್ಲಿ 172 ಮಿಮೀ ಮಳೆ ದಾಖಲಾಗಿದೆ. ಗಜೋಲ್ಡೋಬಾದಲ್ಲಿ 300 ಮಿಮೀ ಮಳೆ ಬಿದ್ದಿದೆ. ಅಲ್ಲಿನ ಮೂಲಸೌಕರ್ಯಕ್ಕೆ ಹಾನಿಯುಂಟಾಗಿದ್ದು, ಬಾಲಾಸನ್ ನದಿಯ ಸಿಲಿಗುರಿ ಮತ್ತು ಮಿರಿಕ್‌ಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯ ಸೇತುವೆ ಕುಸಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡ ಪರಿಣಾಮಕ್ಕೆ ಒಳಗಾಗಿವೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತುರ್ತು ವರ್ಚುವಲ್ ಸಭೆ ನಡೆಸಿ, ಸೋಮವಾರ ದುರಂತ ಪ್ರದೇಶಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಎಲ್ಲಾ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದ್ದು, ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ರಕ್ಷಣಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಭರವಸೆ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಹಾರ ಚುನಾವಣೆ: 17 ಹೊಸ ಉಪಕ್ರಮಗಳೊಂದಿಗೆ ಚುನಾವಣಾ ಆಯೋಗದ ಕ್ರಾಂತಿಕಾರಿ ಹೆಜ್ಜೆ