Skip to main content
ವಿಡಿಯೋ
1/2
general

ವ್ಯಕ್ತಿತ್ವ ಹಕ್ಕು ರಕ್ಷಣೆ: ಖ್ಯಾತನಾಮರು ದೆಹಲಿ ಹೈಕೋರ್ಟ್‌ಗೆ ಮಾತ್ರ ಅರ್ಜಿ ಸಲ್ಲಿಸುವುದೇಕೆ?

By Vinutha U
ವ್ಯಕ್ತಿತ್ವ ಹಕ್ಕು ರಕ್ಷಣೆ: ಖ್ಯಾತನಾಮರು ದೆಹಲಿ ಹೈಕೋರ್ಟ್‌ಗೆ ಮಾತ್ರ ಅರ್ಜಿ ಸಲ್ಲಿಸುವುದೇಕೆ?

.ಇವರಲ್ಲಿ ಬಹಳಷ್ಟು ಜನರು ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಿಲ್ಲದಿದ್ದರೂ, ದೆಹಲಿ ಹೈಕೋರ್ಟ್‌ಗೆ ಮಾತ್ರ ಅರ್ಜಿ ಸಲ್ಲಿಸುವುದು ಗಮನಾರ್ಹ. ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ದೆಹಲಿ ಹೈಕೋರ್ಟ್ ಆದ್ಯತೆಯ ನ್ಯಾಯಾಲಯವಾಗಿರಲು ಕಾರಣಗಳು ಇಲ್ಲಿವೆ:

ದೇಶದ ಚಿತ್ರರಂಗದ ಖ್ಯಾತನಾಮರಾದ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ನಾಗಾರ್ಜುನ, ಅನಿಲ್ ಕಪೂರ್, ಜಾಕಿ ಶ್ರಾಫ್... ಇವರೆಲ್ಲರೂ ಒಂದೇ ಚಿತ್ರದ ತಾರಾಗಣ ಎಂದು ತಿಳಿದಿದ್ದೀರಾ? ಆದರೆ, ಇತ್ತೀಚಿನ ದಿನಗಳಲ್ಲಿ ಇವರು ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಟರಷ್ಟೇ ಅಲ್ಲ, ನಿರ್ದೇಶಕ ಕರಣ್ ಜೋಹರ್, ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್, ಜಗ್ಗಿ ವಾಸುದೇವ್ ಹಾಗೂ ಪತ್ರಕರ್ತ ರಜತ್ ಶರ್ಮಾ ಕೂಡ ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗಾಗಿ ಇದೇ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.

ಡೀಪ್ಫೇಕ್, ಎಐ ಆಧಾರಿತ ವಿಷಯ ಮತ್ತು ಖ್ಯಾತನಾಮರ ಅಸ್ಮಿತೆಯ ದುರುಪಯೋಗದಿಂದ ಅಶ್ಲೀಲ ವಿಷಯವನ್ನು ಪ್ರಸಾರ ಮಾಡುವುದರ ವಿರುದ್ಧ ದೆಹಲಿ ಹೈಕೋರ್ಟ್ ವಿವಿಧ ಪೀಠಗಳು ಮಹತ್ವದ ಆದೇಶಗಳನ್ನು ನೀಡಿವೆ.ಇವರಲ್ಲಿ ಬಹಳಷ್ಟು ಜನರು ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಿಲ್ಲದಿದ್ದರೂ, ದೆಹಲಿ ಹೈಕೋರ್ಟ್ಗೆ ಮಾತ್ರ ಅರ್ಜಿ ಸಲ್ಲಿಸುವುದು ಗಮನಾರ್ಹ. ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗೆ ದೆಹಲಿ ಹೈಕೋರ್ಟ್ ಆದ್ಯತೆಯ ನ್ಯಾಯಾಲಯವಾಗಿರಲು ಕಾರಣಗಳು ಇಲ್ಲಿವೆ: SGF11 Women's Kanjivaram Pure Soft Silk Saree With Unstitched Blouse Piece

ದೆಹಲಿ ಹೈಕೋರ್ಟ್ ದೀರ್ಘಕಾಲದಿಂದ ಬೌದ್ಧಿಕ ಆಸ್ತಿ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುವ ಪ್ರಮುಖ ನ್ಯಾಯಾಲಯವಾಗಿದೆ. ಆನಂದ್ ಮತ್ತು ಆನಂದ್ ಕಾನೂನು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಪ್ರವೀಣ್ ಆನಂದ್ ಅವರ ಪ್ರಕಾರ, ಕ್ಷೇತ್ರಕ್ಕೆ ಸಂಬಂಧಿಸಿದ ಕಾನೂನು ವೃತ್ತಿಪರರಿಗೆ ದೆಹಲಿ ಅಗತ್ಯವಾದ ವ್ಯವಸ್ಥೆಯನ್ನು ಒದಗಿಸಿದೆ.

ಗಾಯಕ ದಲೇರ್ ಮೆಹಂದಿ ವ್ಯಕ್ತಿತ್ವ ಹಕ್ಕು ರಕ್ಷಣೆ ಮತ್ತು ಟೈಟಾನ್ ಇಂಡಸ್ಟ್ರೀಸ್ ಹಾಗೂ ರಾಮ್ಕುಮಾರ್ ಜ್ಯೂವೆಲರ್ಸ್ ಪ್ರಕರಣಕ್ಕೆ ಸಂಬಂಧಿಸಿದ ದೆಹಲಿ ಹೈಕೋರ್ಟ್ ತೀರ್ಪು, ಖ್ಯಾತನಾಮರು ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದೆ ಎಂದು ನಾಯಕ್ ನಾಯಕ್ ಅಂಡ್ ಕಂಪೆನಿಯ ಸಂಸ್ಥಾಪಕ ಅಮಿತ್ ನಾಯಕ್ ಹೇಳುತ್ತಾರೆ.ಇದನ್ನು ಓದಿ: ಮೈಸೂರು ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ: 13 ಹೊಸ ತಾಣಗಳು ಸೇರ್ಪಡೆ! ಯಾವ್ಯಾವು?

ಪೈರಸಿಯ ಯುಗ ಉತ್ತರ ಭಾರತದಲ್ಲಿ ಆರಂಭವಾಯಿತು, ಆದ್ದರಿಂದ ಇಂತಹ ಪ್ರಕರಣಗಳನ್ನು ದೆಹಲಿ ಹೈಕೋರ್ಟ್ ವಿಚಾರಣೆಗೆ ಒಳಪಡಿಸಿತು ಎಂಬುದು ಆನಂದ್ ಅವರ ವಾದ. 2021ರಿಂದ ದೆಹಲಿ ಹೈಕೋರ್ಟ್ನಲ್ಲಿ ಬೌದ್ಧಿಕ ಆಸ್ತಿ ಮತ್ತು ವ್ಯಕ್ತಿತ್ವ ಹಕ್ಕು ರಕ್ಷಣೆಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗವಿದ್ದು, ಇಂತಹ ಪ್ರಕರಣಗಳಲ್ಲಿ ತ್ವರಿತ ಮತ್ತು ನಿಪುಣ ತೀರ್ಪುಗಳನ್ನು ನೀಡುತ್ತಿದೆ.