ಪಣಜಿ- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರದಂದು ಆತ್ಮನಿರ್ಭರ ಭಾರತದ ಉದ್ದೇಶವನ್ನು ಬಲಪಡಿಸಲು, ಈ ದೀಪಾವಳಿಯಲ್ಲಿ 140 ಕೋಟಿ ಭಾರತೀಯರು ವಿದೇಶಿ ಉತ್ಪನ್ನಗಳನ್ನು ಅಗತ್ಯವಿಲ್ಲದಿದ್ದರೆ ಖರೀದಿಸದಿರಲು ಪ್ರತಿಜ್ಞೆ ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ. ಇದರಿಂದ ದೇಶವು "ಮಹಾನ್" (ಶ್ರೇಷ್ಠ) ಆಗಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.
ಪಣಜಿಯ ಸಮೀಪದ ಸೇಂಟ್ ಕ್ರೂಜ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ, ಸ್ವದೇಶಿ ಮನೋಭಾವವನ್ನು ಆರ್ಥಿಕತೆಯನ್ನು ಪರಿವರ್ತಿಸುವ ಸಾಮೂಹಿಕ ಸಂಕಲ್ಪವೆಂದು ಬಣ್ಣಿಸಿದರು. "ಈ ದೀಪಾವಳಿಯಲ್ಲಿ ನಾವೆಲ್ಲರೂ ಸಂಕಲ್ಪ ಮಾಡಬೇಕು, ನಮ್ಮ ದೇಶದಲ್ಲಿ ತಯಾರಾದ ಉತ್ಪನ್ನವಲ್ಲದ ವಿದೇಶಿ ಉತ್ಪನ್ನವನ್ನು, ಅಗತ್ಯವಿಲ್ಲದಿದ್ದರೆ ಮನೆಗೆ ತರಬಾರದು," ಎಂದು ಅವರು ಹೇಳಿದರು. ಇದನ್ನು ಓದಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ದಾಳಿ ಮಾಡಿದ ವಕೀಲ ಅರೆಸ್ಟ್!
ವ್ಯಾಪಾರಿಗಳು ಕೇವಲ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಗ್ರಾಹಕರು ಅದನ್ನೇ ಖರೀದಿಸಲು ಬದ್ಧರಾದರೆ, ಭಾರತವು ಶೀಘ್ರ ಆರ್ಥಿಕ ಬೆಳವಣಿಗೆ ಸಾಧಿಸಿ, ನಿರುದ್ಯೋಗದಂತಹ ಸವಾಲುಗಳನ್ನು ಎದುರಿಸಬಹುದು ಎಂದು ಅವರು ಒತ್ತಿ ಹೇಳಿದರು. ಗೋವಾ ಸರ್ಕಾರದ ‘ಮ್ಹಾಜೆ ಘರ್ ಯೋಜನೆʼ ಯ ಉದ್ಘಾಟನೆಯ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ ಶಾ, ಈ ಯೋಜನೆಯು ಕಾನೂನು ವಿವಾದಗಳಲ್ಲಿ ಸಿಲುಕಿರುವ ಲಕ್ಷಾಂತರ ನಿವಾಸಿಗಳಿಗೆ ಒಡೆತನದ ಹಕ್ಕು ನೀಡುವ ಮಹತ್ವದ ಹೆಜ್ಜೆ ಎಂದು ಶ್ಲಾಘಿಸಿದರು. Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಆಡಳಿತವನ್ನು ಕೊಂಡಾಡಿದ ಅವರು, 2035-37ರ ವೇಳೆಗೆ ಗೋವಾವು ಪೂರ್ಣ ಪ್ರಮಾಣದಲ್ಲಿ ವಿಕಸಿತವಾಗಲಿದೆ ಎಂದು ಭವಿಷ್ಯ ನುಡಿದರು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ 2047ರ ‘ವಿಕಸಿತ ಭಾರತ’ ಗುರಿಗಿಂತ ಮುಂಚಿತವಾಗಿರಲಿದೆ ಎಂದರು.