Skip to main content
ವಿಡಿಯೋ
1/2
general

ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ನಾಪತ್ತೆ ಪ್ರಕರಣ: SIT ತನಿಖೆಗೆ ಆದೇಶಿಸಿದ ಕೇರಳ ಹೈಕೋರ್ಟ್

By Gireesh Vasishta
ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ನಾಪತ್ತೆ ಪ್ರಕರಣ: SIT ತನಿಖೆಗೆ ಆದೇಶಿಸಿದ ಕೇರಳ ಹೈಕೋರ್ಟ್

ಶಬರಿಮಲೆ ದೇವಸ್ಥಾನದಲ್ಲಿ 'ದ್ವಾರಪಾಲಕ ಮೂರ್ತಿಗಳಿಗೆ ಹೊದಿಸಲಾದ ಚಿನ್ನ ಲೇಪಿತ ತಾಮ್ರದ ತಗಡುಗಳಿಂದ ಚಿನ್ನದ ಅಂಶ ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು. ಚಿನ್ನ ಲೇಪನ ಕೆಲಸ ವಹಿಸಿಕೊಂಡಿದ್ದ ವ್ಯಕ್ತಿಯೊಬ್ಬರು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷರಿಗೆ ಇಮೇಲ್ ಕಳುಹಿಸಿ ಉಳಿದ ಚಿನ್ನವನ್ನು ಮದುವೆಗೆ ಬಳಸಬಹುದೇ ಎಂದು ಕೇಳಿರುವುದು ಬಹಿರಂಗವಾಗಿತ್ತು.

ಕೇರಳ: ಶಬರಿಮಲೆ ದೇವಸ್ಥಾನದಲ್ಲಿ 'ದ್ವಾರಪಾಲಕ ಮೂರ್ತಿಗಳಿಗೆ ಹೊದಿಸಲಾದ ಚಿನ್ನ ಲೇಪಿತ ತಾಮ್ರದ ತಗಡುಗಳಿಂದ ಚಿನ್ನ ಕಾಣೆಯಾಗಿರುವ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಿ ಕೇರಳ ಹೈಕೋರ್ಟ್ಸೋಮವಾರ ಆದೇಶಿಸಿದೆ [ಸ್ವಯಂಪ್ರೇರಿತ ಪ್ರಕರಣ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

ಕಾನೂನು ಹಾಗೂ ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) H. ವೆಂಕಟೇಶ್ ಅವರಿಗೆ SIT ತನಿಖೆಯ ನೇತೃತ್ವ ವಹಿಸಿದ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ .ವಿ ಮತ್ತು ಕೆ ವಿ. ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ IPS ಅಧಿಕಾರಿ ಶಶಿಧರನ್ಎಸ್ಅವರು ತನಿಖೆಯನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿತು. ಅವರಿಗೆ ವಿವಿಧ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳು ಮತ್ತು ಸಹಾಯಕ ಸಬ್-ಇನ್ಸ್ಪೆಕ್ಟರ್ಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಹಾಯ ಮಾಡುವಂತೆ ಆದೇಶಿಸಲಾಗಿದೆ.ಇದನ್ನು ಓದಿ: ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲನ ವಿಚಾರ: 3 ಗಂಟೆಗಳ ಬಳಿಕ ರಿಲೀಸ್‌

ತನಿಖೆಯ ವೇಳೆ ಮಾಧ್ಯಮ ಅಥವಾ ಸಾರ್ವಜನಿಕರೊಂದಿಗೆ ಯಾವುದೇ ಸಂಪರ್ಕ ಇರಿಸಿಕೊಳ್ಳುವಂತಿಲ್ಲ ಎಂದು ಎಸ್ಐಟಿಗೆ ಅದು ಸೂಚಿಸಿದ್ದು 1 ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಗಡುವು ವಿಧಿಸಿದೆ.

ಹಿನ್ನೆಲೆ ಹೀಗಿದೆ:

ಶಬರಿಮಲೆ ದೇವಸ್ಥಾನದಲ್ಲಿ 'ದ್ವಾರಪಾಲಕ ಮೂರ್ತಿಗಳಿಗೆ ಹೊದಿಸಲಾದ ಚಿನ್ನ ಲೇಪಿತ ತಾಮ್ರದ ತಗಡುಗಳಿಂದ ಚಿನ್ನದ ಅಂಶ ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು. ಚಿನ್ನ ಲೇಪನ ಕೆಲಸ ವಹಿಸಿಕೊಂಡಿದ್ದ ವ್ಯಕ್ತಿಯೊಬ್ಬರು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷರಿಗೆ ಇಮೇಲ್ ಕಳುಹಿಸಿ ಉಳಿದ ಚಿನ್ನವನ್ನು ಮದುವೆಗೆ ಬಳಸಬಹುದೇ ಎಂದು ಕೇಳಿರುವುದು ಬಹಿರಂಗವಾಗಿತ್ತು. ಬಳಿಕ ನ್ಯಾಯಾಲಯ ಆದೇಶ ನೀಡಿದೆ. ಮುಖ್ಯ ವಿಚಕ್ಷಣಾ ಅಧಿಕಾರಿ ಪ್ರಕರಣದ ಸಂಬಂಧ ಶುಕ್ರವಾರ ವರದಿ ಸಲ್ಲಿಸಿದ್ದರು. ನಂತರ ಇಂದು ನ್ಯಾಯಾಲಯ ಎಸ್ಐಟಿ ತನಿಖೆಗೆ ಆದೇಶಿಸಿದೆ.

ಸ್ಮಾರ್ಟ್ ಕ್ರಿಯೇಷನ್ಸ್ಗೆ 42.8 ಕೆಜಿ ತೂಕದ ವಸ್ತು ಹಸ್ತಾಂತರಿಸಲಾಗಿದ್ದರೂ ಕೇವಲ 38 ಕೆಜಿ ತೂಕದ ವಸ್ತುಗಳನ್ನು ವಾಪಸ್‌ ಹಸ್ತಾಂತರಿಸಲಾಗಿದೆ ಎಂದು ದಾಖಲಿಸಲಾಗಿತ್ತು. ಸುಮಾರು 4.54 ಕೆಜಿ ವ್ಯತ್ಯಾಸ ಇದ್ದುದನ್ನು ನ್ಯಾಯಾಲಯ ಕಳೆದ ವಿಚಾರಣೆ ವೇಳೆ ಗಂಭೀರವಾಗಿ ಪರಿಗಣಿಸಿತ್ತು. ಸೆಪ್ಟೆಂಬರ್ 17 ರಂದು ನ್ಯಾಯಾಲಯ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಮುಖ್ಯ  ವಿಚಕ್ಷಣಾ ಅಧಿಕಾರಿ ನಂತರ ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಿದ್ದರು.