ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಹೆಚ್ಚಳ, 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನು 5% ಹೆಚ್ಚಿಸಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ. ಈ ಆದೇಶದಂತೆ, 2025-26ರಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳಿಗೆ ಪ್ರಸ್ತುತ ಶುಲ್ಕಕ್ಕೆ 5% ಹೆಚ್ಚಳವನ್ನು ವಿಧಿಸಲಾಗುವುದು.
ಪರಿಷ್ಕೃತ ಪರೀಕ್ಷಾ ಶುಲ್ಕ ವಿವರ: ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು
ಪರೀಕ್ಷಾ ಶುಲ್ಕ: ₹676 ರಿಂದ ₹710ಕ್ಕೆ ಹೆಚ್ಚಳ. Shoetopia Women's Block Heel Sandals
ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ:
ಹೊಸದಾಗಿ ನೋಂದಾಯಿಸುವ ಖಾಸಗಿ ಅಭ್ಯರ್ಥಿಗಳ ನೋಂದಣಿ ಮತ್ತು ಅರ್ಜಿ ಶುಲ್ಕ: ₹236 ರಿಂದ ₹248ಕ್ಕೆ ಹೆಚ್ಚಳ.
ಈಗಾಗಲೇ ನೋಂದಾಯಿಸಿ ಪರೀಕ್ಷಾ ಶುಲ್ಕ ಪಾವತಿಸಿದ ಖಾಸಗಿ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ: ₹69 ರಿಂದ ₹72ಕ್ಕೆ ಹೆಚ್ಚಳ. ಕೊಪ್ಪಳದಲ್ಲಿ ಭಯಾನಕ ದುರಂತ: ಪಾದಯಾತ್ರೆ ಹೋಗುತ್ತಿದ್ದವರ ಮೇಲೆ ಸ್ಲೀಪರ್ ಬಸ್ ಹರಿದು ಮೂವರು ಸಾ**ವು
ಪುನರಾವರ್ತಿತ ಶಾಲಾ/ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ:
ಒಂದು ವಿಷಯ: ₹427 ರಿಂದ ₹448ಕ್ಕೆ ಹೆಚ್ಚಳ.
ಎರಡು ವಿಷಯಗಳು: ₹532 ರಿಂದ ₹559ಕ್ಕೆ ಹೆಚ್ಚಳ.
ಮೂರು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳು: ₹716 ರಿಂದ ₹752ಕ್ಕೆ ಹೆಚ್ಚಳ.