ಮಲೆನಾಡಿನ ಹಸಿರು ಬೆಟ್ಟಗಳ ನಡುವೆ, ಶಿವಮೊಗ್ಗ, ಉತ್ತರ ಕನ್ನಡದ ಗ್ರಾಮಗಳಲ್ಲಿ ದೀಪಾವಳಿಗೂ ಮುಂಚಿತವಾಗಿ ಬರುವ ಭೂಮಿ ಹುಣ್ಣಿಮೆ ಹಬ್ಬವು ರೈತ ಕುಟುಂಬಗಳಿಗೆ ಅನನ್ಯ ಸಂಭ್ರಮದ ಸಂದರ್ಭ. ಆಶ್ವಿಜ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಆಚರಿಸುವ ಈ ಹಬ್ಬವು ಭೂಮಿಯನ್ನು ಗರ್ಭಿಣಿ ತಾಯಿಯಂತೆ ಪೋಷಿಸಿ, ಸೀಮಂತದಂತೆ ಆರೈಕೆ ಮಾಡುವ ಸಂಪ್ರದಾಯವನ್ನು ಈ ಹಬ್ಬವು ಹೊಂದಿದೆ.
ದೀವರು ಜನಾಂಗದ ರೈತರಿಗೆ ಇದು ಭೂಮಾತೆಗೆ ಕೃತಜ್ಞತೆಯ ಸಲ್ಲಿಕೆಯಾಗಿದ್ದು, ಬಯಲುಸೀಮೆಯಲ್ಲಿ ಸೀಗೆ ಹುಣ್ಣಿಮೆ ಎಂದೂ ಕರೆಯಲ್ಪಡುತ್ತದೆ. ಹಬ್ಬದ ಸಿದ್ಧತೆ ದೀಪಾವಳಿಗೂ15 ದಿನ ಮೊದಲೇ ಆರಂಭವಾಗುತ್ತದೆ. ಮಹಿಳೆಯರು ರಾತ್ರಿಪೂರ್ತಿ ಅಡುಗೆಯಲ್ಲಿ ತೊಡಗುತ್ತಾರೆ. ಹತ್ತಾರು ರೊಟ್ಟಿ, ತಿಂಡಿಗಟ್ಟುಗಳಂತಹ 10-15 ಬಗೆಯ ರುಚಿಕರವಾದ ಪದಾರ್ಥಗಳನ್ನು ತಯಾರಿಸುತ್ತಾರೆ.realme NARZO 80 Lite 5G (Crystal Purple, 6GB+128GB) | 6000mAh Long-Lasting Battery | MediaTek Dimensity 6300 5G | AI Assist | IP64 Rated Water & Dust Resistance | Military-Grade Durability
ಭೂಮಿ ಹುಣ್ಣಿಮೆ ಹಬ್ಬದಲ್ಲಿ ಮುಖ್ಯವಾಗಿ ಸಿಹಿ ತಿಂಡಿಗಳಲ್ಲದೆ, ವಿವಿಧ ತರಹದ ಪಲ್ಯಗಳು, ಕಡುಬು, ಕಜ್ಜಾಯಗಳು, ಮತ್ತು ಗಿಡಬಳ್ಳಿಗಳ ಸೊಪ್ಪುಗಳ ಪಲ್ಯವನ್ನು ರೈತರು ತಯಾರಿಸುತ್ತಾರೆ. ಎಣ್ಣೆಯಲ್ಲಿ ಬೇಯಿಸಿದ ಕಜ್ಜಾಯ, ಸೌತೆಕಾಯಿ ಕಡುಬು, ಬಾಳೆದಿಂಡು, ಹೀರೇಕಾಯಿ ಪಲ್ಯ, ಕೊಟ್ಟೆ ಕಡುಬು ಮುಂತಾದವುಗಳನ್ನು ಭೂಮಿತಾಯಿಗೆ ಅರ್ಪಿಸಲಾಗುತ್ತದೆ .ಇನ್ನು ಹಲವು. ಇದರಲ್ಲಿ ಗರ್ಭಿಣಿಯರ ಸೀಮಂತದಂತೆ ಭೂಮಿ ತಾಯಿಯ ಬಯಕೆ ತೀರಿಸುವ ಭಾವನೆಯಿದೆ. ಮುಂಜಾನೆಯೇ ಬಾಂಬು ಹೊಡೆದು, ದೊಡ್ಡ ಬುಟ್ಟಿಯಲ್ಲಿ ಭೂಮಣ್ಣಿ ಬುಟ್ಟಿ ಸಿದ್ಧಪಡಿಸಿ, ಕೆಮ್ಮಣ್ಣು ಮೆತ್ತಿ ಬಿಳಿ ಬಣ್ಣ ಹಚ್ಚುತ್ತಾರೆ. ಅಕ್ಕಿ ಹಿಟ್ಟು, ಗುರಿಗೆ ಎಳ್ಳಿನಿಂದ ಹಳದಿ ಬಣ್ಣದ ಚಿತ್ತಾರಗಳನ್ನು ಗಣಪತಿ, ಲಕ್ಷ್ಮೀ, ಸರಸ್ವತಿ, ಚಂದ್ರಮಾ, ಸೂರ್ಯ ಇತ್ಯಾದಿ ಚಿತ್ರಗಳನ್ನು ರಚಿಸುತ್ತಾರೆ.
ಈ ಕರಕುಶಲ ಕಲೆಯು ದೇಸೀ ಶೈಲಿಯಲ್ಲಿದ್ದು, ಕೃಷಿ ಸಂಪನ್ಮೂಲಗಳ ಗೌರವವನ್ನು ಸೂಚಿಸುತ್ತದೆ. ಮಧ್ಯಾಹ್ನದಲ್ಲಿ ಕುಟುಂಬಸ್ಥರು ಈ ಬುಟ್ಟಿಯಲ್ಲಿ ತಯಾರಿಸಿದ ಎಲ್ಲ ಪದಾರ್ಥಗಳನ್ನು ಒಟ್ಟುಗೂಡಿಸಿ, ಜಮೀನಿನ ಬಳಿ ಹೊರಬರುತ್ತಾರೆ. ಭೂಮಿಯ ಮೇಲೆ ಬುಟ್ಟಿಯನ್ನು ಇಟ್ಟು, ದೀಪ ಪ್ರಜ್ವಲಿಸಿ, ಧೂಪ-ದೀಪ-ನೈವೇದ್ಯ ಸಲ್ಲಿಸುತ್ತಾರೆ.ಇದನ್ನು ಓದಿ:5ನೇ ಬಾರಿ ಪರೀಕ್ಷೆಗೆ MBBS ವಿದ್ಯಾರ್ಥಿನಿ ಸಿದ್ದತೆ; ಬೇಡವೆಂದ ಹೈಕೋರ್ಟ್; ಕಾರಣ ಹೀಗಿದೆ
ಭೂಮಿ ತಾಯಿ, ನೀನೇ ನಮ್ಮ ಮಡಿಲು ತುಂಬುವವಳು ಎಂದು ಪ್ರಾರ್ಥಿಸಿ, ಕೃತಜ್ಞತೆಯೊಂದಿಗೆ ಊಟ ಮಾಡುತ್ತಾರೆ. ಈ ಆಚರಣೆಯು ಭೂಮಿಯ ಫಲವತ್ತತೆಗೆ, ಉತ್ತಮ ಬೆಳೆಗೆ ಬರವಣಿಗೆಯಾಗುತ್ತದೆ ಎಂಬ ನಂಬಿಕೆಯನ್ನು ಬೆಳೆಸುತ್ತದೆ.
ಈ ಹಬ್ಬದ ಸೊಬಗು ಮಲೆನಾಡಿನ ಸಾಂಸ್ಕೃತಿಕ ಐಡೆಂಟಿಟಿಯನ್ನು ಪ್ರತಿಬಿಂಬಿಸುತ್ತದೆ. ಆಧುನಿಕತೆಯ ದಂಢೆಯಲ್ಲಿ ಕೂಡ ಈ ಸಂಪ್ರದಾಯ ಚುರುಕು ಹೊಂದಿದ್ದು, ಯುವಕರು ಚಿತ್ತಾರ ಕಲೆಯನ್ನು ಕಲಿಯುತ್ತಿದ್ದಾರೆ. ಭೂಮಿ ಹುಣ್ಣಿಮೆಯು ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಉತ್ಸವವಾಗಿ ಮಿಗಿಲಿದೆ.ಇದನ್ನು ಓದಿ:4 ಲಕ್ಷ ಮಹಿಳೆಯರ ಮೇಲೆ ಅತ್ಯಾ**ಚಾರ ಮಾಡಿಸಿದ ಪಾಕ್: ಇವರಿಂದ ಪಾಠ ಬೇಕಿಲ್ಲ; ವಿಶ್ವಸಂಸ್ಥೆಯಲ್ಲಿ ಭಾರತ ಗುಡುಗು..!