Skip to main content
ವಿಡಿಯೋ
1/2
politics

ಅರಣ್ಯ ಇಲಾಖೆಯ ರಾಯಭಾರಿಯಾಗಿ ಅನಿಲ್ ಕುಂಬ್ಳೆ ಅಧಿಕೃತ ನೇಮಕ

By Gireesh Vasishta
ಅರಣ್ಯ ಇಲಾಖೆಯ ರಾಯಭಾರಿಯಾಗಿ ಅನಿಲ್ ಕುಂಬ್ಳೆ ಅಧಿಕೃತ ನೇಮಕ

ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಅನಿಲ್ ಕುಂಬ್ಳೆ ವಿಶ್ವದಾದ್ಯಂತ ಖ್ಯಾತಿ ಹೊಂದಿದ್ದು, ಅರಣ್ಯ ಸಂರಕ್ಷಣೆ, ವೃಕ್ಷ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಬೆಂಗಳೂರು: ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮ ನಿರ್ದೇಶನ ಮಾಡಲಾಗುವುದುʼ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಈ ಹಿಂದೆ ತಿಳಿಸಿದ್ದರು. ಅದೆ ರೀತಿ ಈಗ ಅವರನ್ನು ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕಮಾಡಲಾಗಿದೆ.

 ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಅನಿಲ್ ಕುಂಬ್ಳೆ ವಿಶ್ವದಾದ್ಯಂತ ಖ್ಯಾತಿ ಹೊಂದಿದ್ದು, ಅರಣ್ಯ ಸಂರಕ್ಷಣೆ, ವೃಕ್ಷ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+


ಅದಕ್ಕೆ ಸಂಬಂಧಿಸಿದ ಮಾಹಿತಿ ಹೀಗಿದೆ:

ಅನಿಲ್ ಕುಂಬ್ಳೆ ಅವರ ಹೇಳಿಕೆ:

ನನಗೆ ಈ ಅವಕಾಶ ಕೊಟ್ಟಿದ್ದಕ್ಜೆ ಧನ್ಯವಾದಗಳು. ಇದು ಕೇವಲ ಸಪ್ತಾಹ ಮಾತ್ರ ಆಗಬಾರದು, ಇದು ಸಂಕಲ್ಪ ಆಗಬೇಕು.

-ನೇಮಕದ ಉದ್ದೇಶ: ಅರಣ್ಯ ಸಂರಕ್ಷಣೆ, ಮರ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಕುಂಬ್ಳೆ ಅವರು ಈ ಪಾತ್ರದಲ್ಲಿ ಯಾವುದೇ ಶುಲ್ಕ ಅಥವಾ ಗೌರವಧನವನ್ನು ಸ್ವೀಕರಿಸುತ್ತಿಲ್ಲ; ಇದು ಅವರ ಪ್ಯಾಶನ್‌ ಮತ್ತು ಹಿಂದಿನ ಅನುಭವಕ್ಕೆ ಆಧಾರಿತವಾಗಿದೆ.ಇದನ್ನು ಓದಿ: 5ನೇ ಬಾರಿ ಪರೀಕ್ಷೆಗೆ MBBS ವಿದ್ಯಾರ್ಥಿನಿ ಸಿದ್ದತೆ; ಬೇಡವೆಂದ ಹೈಕೋರ್ಟ್‌; ಕಾರಣ ಹೀಗಿದೆ

-ಹಿಂದಿನ ಅನುಭವ: ಕುಂಬ್ಳೆಯು ಹಿಂದೆ ಕರ್ನಾಟಕ ವೈಲ್ಡ್‌ಲೈಫ್ ಬೋರ್ಡ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಇದು ಈ ನೇಮಕಕ್ಕೆ ಸಹಾಯಕವಾಗಿದೆ.

ಪ್ರತಿಕ್ರಿಯೆ: ನೇಮಕದ ನಂತರ, ಕುಂಬ್ಳೆಯು X (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ, "ಕರ್ನಾಟಕ ಸರ್ಕಾರ ಮತ್ತು ಸಚಿವ ಈಶ್ವರ್ ಖಂಡ್ರೆಗೆ ಧನ್ಯವಾದಗಳು. ನಾನು ರಾಜ್ಯದ ವನ್ಯಜೀವಿ ಮತ್ತು ಅರಣ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಂರಕ್ಷಣೆಗೆ ಕೆಲಸ ಮಾಡುತ್ತೇನೆ" ಎಂದು ಹೇಳಿದ್ದಾರೆ.