ವಿಜಯನಗರ (ಅ.8): ಕಂಪ್ಯೂಟರ್ ತರಬೇತಿ ಕೊಠಡಿಯಲ್ಲಿದ್ದ ಬ್ಯಾಟರಿಗಳನ್ನ ರಾತ್ರೋರಾತ್ರಿ ಕಳ್ಳತನ ಮಾಡಿದ ಘಟನೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೀರಾಕೊರನಹಳ್ಳಿ ಗ್ರಾಮದ ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಕಳ್ಳರು ಶಾಲೆಯ ಬಾಗಿಲನ್ನು ಮುರಿದು ಕಂಪ್ಯೂಟರ್ ತರಬೇತಿ ಕೊಠಡಿಯಿಂದ 16 ಬ್ಯಾಟರಿಗಳನ್ನು ಕಳ್ಳತನ ಮಾಡಿದ್ದಾರೆ.
ಇಗಾಗಲೆ ಹಡಗಲಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶಾಲೆಯ cc ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇಬ್ಬರು ಯುವಕರು ಬ್ಯಾಟರಿಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಸಿಕ್ಕಿದೆ. ಈ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಶುರುಮಾಡಿದ್ದಾರೆ.ಇದನ್ನು ಓದಿ: ಜಮ್ಮು& ಕಾಶ್ಮೀರ: ಹುರಿಯತ್, ಜಮಾತ್-ಇ-ಇಸ್ಲಾಮಿ ಸದಸ್ಯರ ಮನೆಗಳ ಮೇಲೆ ಪೊಲೀಸರ ದಾಳಿ
ಕಳ್ಳತನದ ಕೃತ್ಯವು ಶಾಲೆಯ ಭದ್ರತೆಯ ಕೊರತೆಯ ಬಗ್ಗೆ ಹಲವಾರು ಪ್ರಶ್ನೆಯನ್ನು ಉಂಟುಮಾಡಿದೆ. ಪೊಲೀಸರು ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಶಾಲಾ ಆಡಳಿತವು ಭದ್ರತೆಯನ್ನು ಬಲಪಡಿಸುವ ಬಗ್ಗೆ ಯೋಚನೆ ಮಾಡಿದೆ.Monte Carlo Mens Solid Lace Up Genuine Leather Casual Shoes (201803FW)