Skip to main content
ವಿಡಿಯೋ
1/2
crime

ಆಂಧ್ರಪ್ರದೇಶದ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ...6 ಮಂದಿ ಸಜೀವ ದಹನ, 8 ಮಂದಿಗೆ ಗಾಯ!

By Gireesh Vasishta
ಆಂಧ್ರಪ್ರದೇಶದ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ...6 ಮಂದಿ ಸಜೀವ ದಹನ, 8 ಮಂದಿಗೆ ಗಾಯ!

ಆಂಧ್ರಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ರಾಯವರಂ ಲೋಕೇಶ್ವರ ಪಟಾಕಿ ಘಟಕದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಆರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಂಟು ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಧ್ರಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ನಡೆದ ಭೀಕರ ದುರಂತದಲ್ಲಿ ಆರು ಮಂದಿ ಜೀವಂತ ದಹನವಾಗಿದ್ದಾರೆ. ರಾಯವರಂ ಮಂಡಲದ ಲಕ್ಷ್ಮಿ ಗಣಪತಿ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ಈ ಘಟನೆ ನಡೆದಿದೆ. ಘಟಕದಲ್ಲಿ ಪಟಾಕಿ ತಯಾರಿಸುವಾಗ ಈ ಅವಘಡ ಸಂಭವಿಸಿದೆ.Levi's Men's Slim Fit Mid Rise 511 Mid-Rise Jeans

 

ಪಟಾಕಿ ಘಟಕದೊಳಗೆ ಕೆಲಸ ಮಾಡುತ್ತಿದ್ದ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದ್ದಾರೆ. ರಕ್ಷಣಾ ಕಾರ್ಯಗಳು ಪ್ರಸ್ತುತ ನಡೆಯುತ್ತಿವೆ.ಇದನ್ನು ಓದಿ: ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಮುಂಬೈನಲ್ಲಿ: ದಾಖಲೆಯ ವಾಣಿಜ್ಯ ಒಪ್ಪಂದಕ್ಕೆ ಚಾಲನೆ

 

ಈ ದುರ್ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರೆಲ್ಲರೂ ಕಾರ್ಖಾನೆಯ ಕಾರ್ಮಿಕರು ಎಂದು ಜಿಲ್ಲಾ ಡಿಎಸ್‌ಪಿ ರಾಹುಲ್ ಮೀನಾ ಮಾಹಿತಿ ನೀಡಿದ್ದಾರೆ. ಈ ಸಂಬಂಧ ತೆಲುಗು ಫೀಡ್ ತನ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.