ಕೆಲವೊಮ್ಮೆ ಜೀವನದಲ್ಲಿ ಹಲವಾರು ಅಗತ್ಯ ವಿಚಾರಗಳನ್ನು ಮತ್ತು ವ್ಯಕ್ತಿಗಳನ್ನು ಕಳೆದುಕೊಂಡಿರುತ್ತೇವೆ. ಅದಕ್ಕೆ ಕಾರಣ ಕೆಲಸದ ಒತ್ತಡ, ಸಂಬಳ ಹಾಗೂ ಇನ್ನಿತರ ಕಾರಣಗಳಾಗಿರಬಹುದು. ಆದರೆ ಇಲ್ಲೊಬ್ಬ ಮಹಿಳೆ ತನ್ನ ಪ್ರೇಮಿಯ ಜೊತೆ ಸಮಯವನ್ನು ಕಳೆಯಲು ಭಾರಿ ಸಂಬಳದ ಕೆಲಸವನ್ನೇ ಬಿಟ್ಟಿದ್ದಾರೆ.
ಗೂಗಲ್‌ನ 37 ವರ್ಷದ ಸೀನಿಯರ್ ಪ್ರೋಗ್ರಾಂ ಮ್ಯಾನೇಜರ್ ತನ್ನ ಉನ್ನತ ಉದ್ಯೋಗ ಮತ್ತು ವಾರ್ಷಿಕ 3.4 ಕೋಟಿ ರೂಪಾಯಿಗಳ (390,000 ಡಾಲರ್) ಭಾರೀ ವೇತನವನ್ನು ಬಿಟ್ಟು, ತನ್ನ 55 ವರ್ಷದ ಬಾಯ್ಫ್ರೆಂಡ್ ಜೊತೆಗಿನ ಕ್ಷಣಗಳನ್ನು ಆನಂದಿಸಲು ಆದ್ಯತೆ ನೀಡಿದ್ದಾಳೆ.ಇದನ್ನು ಓದಿ: ಸಚಿವ ಸ್ಥಾನದ ಭವಿಷ್ಯ ಬಿಹಾರ ಚುನಾವಣೆ ನಂತರ ಗೊತ್ತಾಗುತ್ತೆ: ಮಾರ್ಮಿಕವಾಗಿ ನುಡಿದ ಕೆ.ಎನ್ ರಾಜಣ್ಣ!
ಫ್ಲಾರೆನ್ಸ್ ಪಾಯಿರೆಲ್, ಡಬ್ಲಿನ್ ಮತ್ತು ಜ್ಯೂರಿಚ್ನ ಗೂಗಲ್‌ನ ಯುರೋಪಿಯನ್ ಕಚೇರಿಗಳಲ್ಲಿ ಒಂದು ದಶಕಕ್ಕೂ(10 ವರ್ಷಕ್ಕೂ) ಹೆಚ್ಚು ಕಾಲ ಕೆಲಸ ಮಾಡಿದವರು, CNBC ಜೊತೆಗಿನ ಸಂದರ್ಶನದಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. "ಕೆಲಸದ ದಿನ ಚೆನ್ನಾಗಿತ್ತು " ಎಂದರೂ, ಅವರು ವೃತ್ತಿಪರ ಯಶಸ್ಸಿಗಿಂತ ಹೆಚ್ಚು ನೆಮ್ಮದಿಯ ಜೀವನವನ್ನು ಬಯಸಿದ್ದರು. "ನಾನು ನನಗೆ ಬೇಕಿದ್ದ ಮತ್ತು ಸಮತೋಲನದ ಜೀವನವನ್ನು ಬಯಸಿದೆ," ಎಂದು ಅವರು ವಿವರಿಸಿದ್ದಾರೆ. 37ನೇ ವಯಸ್ಸಿನಲ್ಲಿ, ತಮ್ಮ ಒತ್ತಡದ ಕೆಲಸವು ಪ್ರೀತಿಪಾತ್ರರ ಜೊತೆ, ವಿಶೇಷವಾಗಿ ಹಲವು ವರ್ಷಗಳಿಂದ ತಮ್ಮ ಜೊತೆಗಿರುವ ನನ್ನ ಪ್ರಿಯಕರನೊಂದಿಗಿನ ಸಮಯವನ್ನು ಕಸಿದುಕೊಳ್ಳುತ್ತಿತ್ತು ಎಂದು ಅವರು ಅರಿತರು.Monte Carlo Mens Solid Lace Up Genuine Leather Casual Shoes (201803FW)
2024ರ ಆರಂಭದ ವೇಳೆಗೆ, ಪಾಯಿರೆಲ್ 1.5 ಮಿಲಿಯನ್ ಡಾಲರ್ (ಸುಮಾರು 12.6 ಕೋಟಿ ರೂಪಾಯಿ) ಉಳಿತಾಯ ಮಾಡಿದ್ದರು, ಇದು ಅವರಿಗೆ "ಮಿನಿ-ರಿಟೈರ್ಮೆಂಟ್" ಎಂದು ಕರೆಯಲ್ಪಡುವ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿತು. 2024ರ ಏಪ್ರಿಲ್ನಲ್ಲಿ, ಅವರು ಮತ್ತು ಅವರ ಬಾಯ್ಫ್ರೆಂಡ್ ಇಬ್ಬರೂ ತಮ್ಮ ಕೆಲಸವನ್ನು ತೊರೆದು, 18 ತಿಂಗಳ ಪ್ರಯಾಣ, ಪಾದಯಾತ್ರೆ ಮತ್ತು ಜೀವನದ ಆನಂದವನ್ನು ಅನುಭವಿಸಲು ಹೊರಟರು. "ಕಚೇರಿ ಕೆಲಸದ ಒತ್ತಡವಿಲ್ಲದೆ, ನಮ್ಮದೇ ಆದ ರೀತಿಯಲ್ಲಿ ಜೀವನ ನಡೆಸಲು ಬಯಸಿದೆವು," ಎಂದು ಅವರು ತಿಳಿಸಿದರು. ಪ್ರಿತಿಗಾಗಿ ತ್ಯಾಗ ಮಾಡಿದ ಇವರಿಗೆ ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದು ಕೇವಲ ಪ್ರೀತಿಯ ಬಗ್ಗೆ ಮಾತ್ರವಲ್ಲ—ಪಾಯಿರೆಲ್ ಈಗ ತಮ್ಮ ಪರಿಣತಿಯನ್ನು ಕೆರಿಯರ್ ಕೋಚಿಂಗ್‌ಗೆ ಬಳಸಿಕೊಳ್ಳುತ್ತಿದ್ದಾರೆ, ಇತರರಿಗೆ ಆಯಾಸವನ್ನು ತಪ್ಪಿಸಲು ಮತ್ತು ವೃತ್ತಿಜೀವನದ ಬದಲಾವಣೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದಾರೆ, ಜೊತೆಗೆ AI ಉಪಕರಣಗಳೊಂದಿಗೆ ಪ್ರಯೋಗ ಮಾಡುತ್ತಿದ್ದಾರೆ ಮತ್ತು ಹೊಸ ಕೌಶಲ್ಯಗಳನ್ನು ಕಲಿಯುತ್ತಿದ್ದಾರೆ.