ಮೈಸೂರು: ಹುಡುಗಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡುವ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ ಪೊಲೀಸರು ಅದೆಷ್ಟೇ ಜಾಗೃತರಾಗಿದ್ದರು ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಅಮಾಯಕ ಹೆಣ್ಣು ಮಕ್ಕಳ ಮೇಲೆ ವಿಕೃತರು ಅಟ್ಟಹಾಸ ಮೆರೆದಿರುತ್ತಾರೆ. ಇದೇ ರೀತಿಯ ಘಟನೆ ಮೈಸೂರಿನಲ್ಲಿ ನಡೆದಿದ್ದು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women
ಬಲೂನ್ ಮಾರುವ ಕುಟುಂಬದ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಾಪತೆಯಾಗಿದ್ದ ಅವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನಲ್ಲಿ ನಡೆದ ಪ್ರಕರಣ ಇದಾಗಿದ್ದು ಮೈಸೂರಿನಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಆರೋಪಿ ಕೊಳ್ಳೆಗಾಲಕ್ಕೆ ಎಸ್ಕೇಪ್ ಆಗಿದ್ದ. ಇದಾದ ನಂತರ ಪೊಲೀಸರು ಸಾಕಷ್ಟು ಪ್ರಯತ್ನ ಮಾಡಿ ಕೇವಲ 24 ಗಂಟೆ ಒಳಗಾಗಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.ಇದನ್ನು ಓದಿ: ಬೆಂಗಳೂರು ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ವೇತನ ಸಹಿತ ಮುಟ್ಟಿನ ರಜೆ ನೀಡಲು ಸರ್ಕಾರ ಚಿಂತನೆ! ಎಷ್ಟು ದಿನ?
ಬಂಧಿಸುವ ವೇಳೆ ಆರೋಪಿ ಸೈಕೊ ಕಾರ್ತಿಕ್ ಪೊಲೀಸರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಲು ಮುಂದಾದ ಆಗ ವಿಜಯನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಜೈ ಕೀರ್ತಿ ಆರೋಪಿ ಕಾಲಿಗೆ ಗುಂಡನ್ನು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಸದ್ಯ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಉಪನಿರೀಕ್ಷಕರ ಈ ನಡೆಗೆ ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.