ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1' ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕಾಗಿ ರಿಷಬ್ ಮತ್ತು ಅವರ ತಂಡ ಸುಮಾರು ಮೂರು ವರ್ಷಗಳ ಕಾಲ ಶ್ರಮಿಸಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಚಿತ್ರದ ಸುತ್ತ ಕೆಲವು ವಿವಾದಗಳು ಸೃಷ್ಟಿಯಾಗಿವೆ.
ಕೆಲವು ದೈವಾರಾಧಕರು ಮತ್ತು ದೈವನರ್ತಕರು ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೈವದ ಅನುಗ್ರಹವಿಲ್ಲದ ಕಾರಣ ಚಿತ್ರೀಕರಣದ ವೇಳೆ ಅವಘಡಗಳು ಸಂಭವಿಸಿವೆ ಎಂಬ ಮಾತುಗಳೂ ಕೇಳಿಬಂದಿವೆ. ಆದರೆ, ಇಂತಹ ಘಟನೆಗಳ ಬಗ್ಗೆ ದೈವವು ರಿಷಬ್‌ಗೆ ಮೂರು ವರ್ಷಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.HAMMONDS FLYCATCHER Genuine Leather Office Bag for Men, 15.6" Professional Leather Laptop Bag for Men for Office, Travel, Daily Use, Adjustable Strap & Multi Compartments - 1 Year Warranty - Brown
'ಕಾಂತಾರ' ಸಿನಿಮಾ ಸೂಪರ್ ಹಿಟ್ ಆದ ನಂತರ 2022ರಲ್ಲಿ ರಿಷಬ್ ಶೆಟ್ಟಿ, 'ಕಾಂತಾರ: ಚಾಪ್ಟರ್ 1' ಚಿತ್ರ ನಿರ್ಮಾಣಕ್ಕೆ ದೈವದ ಅನುಮತಿ ಕೇಳಿದ್ದರು. ಆಗ, ಮಂಗಳೂರಿನ ಬಂದಲೆಯ ಮಡಿವಾಳಬೆಟ್ಟು ದೈವದ ನರ್ತನ ಸೇವೆಯ ವೇಳೆ ಅಣ್ಣಪ್ಪ ಪಂಜುರ್ಲಿ ದೈವವು ಎಚ್ಚರಿಕೆ ನೀಡಿದೆ.
"ಈಗ ಹತ್ತು ಹೆಜ್ಜೆ ಇಟ್ಟು ಆ ಸಿನಿಮಾ ಮಾಡಿದ್ದೀರಿ, ಇದಕ್ಕೆ ನೂರು ಹೆಜ್ಜೆ ಇಡಿ," ಎಂದು ದೈವ ಸೂಚ್ಯವಾಗಿ ನುಡಿದಿತ್ತು. ಮೊದಲ ಭಾಗದ ಹರಕೆ ನೇಮ ಸಲ್ಲಿಸಲು ಬಂದಿದ್ದ ರಿಷಬ್ ಶೆಟ್ಟಿ, ಎರಡನೇ ಭಾಗದ ಬಗ್ಗೆ ಕೇಳಿದಾಗ, ಎರಡನೇ ಭಾಗ ಮಾಡುವ ಮೊದಲು ಧರ್ಮಸ್ಥಳ ಮಂಜುನಾಥೇಶ್ವರನ ಒಪ್ಪಿಗೆ ಕೇಳುವಂತೆ ದೈವ ಸೂಚಿಸಿತ್ತು.ಈ ಕಾರಣದಿಂದಲೇ ಕೆಲವು ಚಿತ್ರಗಳಿಂದ ಹಿಂದೆ ಸರಿದ ದೀಪಿಕಾ ಪಡುಕೋಣೆ...ಅಷ್ಟಕ್ಕೂ ಏನದು?
ಅಲ್ಲದೆ, "ಬಹಳ ಆಲೋಚನೆಯಲ್ಲಿ ಮುಂದಿನ ಸಿನಿಮಾ ಮಾಡಿ. ಮೊದಲ ಚಿತ್ರದಲ್ಲಿ ಒಳ್ಳೆಯದೂ ಆಗಿದೆ, ಅಪವಾದವೂ ಬಂದಿದೆ. ಧರ್ಮ ಪ್ರಕಾರ, ಆಚಾರ ವಿಚಾರದಲ್ಲಿ ಹೋಗಿ," ಎಂದು ದೈವ ಹೇಳಿತ್ತು. ಇದರ ನಂತರ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥಸ್ವಾಮಿಯ ದರ್ಶನ ಪಡೆದು, ವೀರೇಂದ್ರ ಹೆಗ್ಗಡೆಯವರನ್ನು ಸಹ ಭೇಟಿ ಮಾಡಿದ್ದರು.
'ಕಾಂತಾರ: ಚಾಪ್ಟರ್ 1' ಚಿತ್ರೀಕರಣದ ಸಮಯದಲ್ಲಿ ರಿಷಬ್ ಮತ್ತು ಅವರ ತಂಡ ಅನೇಕ ನೇಮ-ನಿಷ್ಠೆಗಳನ್ನು ಪಾಲಿಸಿತ್ತು. ಆದರೂ, ಚಿತ್ರೀಕರಣದ ವೇಳೆ ಕೆಲವು ಅವಘಡಗಳು ಸಂಭವಿಸಿವೆ. ಸಿನಿಮಾಕ್ಕಾಗಿ ದುಡಿದ ಕೆಲವರು ಅಕಸ್ಮಾತ್ತಾಗಿ ನಿಧನರಾಗಿದ್ದರು. ಸೆಟ್‌ನಲ್ಲಿಯೂ ಕೆಲವು ಅವಘಡಗಳು ನಡೆದು, ಒಮ್ಮೆ ಬೋಟ್ ಅನಾಹುತವೂ ಸಂಭವಿಸಿತ್ತು.
ಸದ್ಯ, ಕೆಲವು ದೈವಾರಾಧಕರು ಮತ್ತು ದೈವನರ್ತಕರು, "ನಮ್ಮ ನಂಬಿಕೆಯಾದ ದೈವಾರಾಧನೆಯನ್ನು ಹಣಕ್ಕಾಗಿ ಬಳಸಿಕೊಂಡಿದ್ದಾರೆ," ಎಂದು ಆರೋಪಿಸಿ ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.