Skip to main content
ವಿಡಿಯೋ
1/3
general

ಧರ್ಮಸ್ಥಳ ಪ್ರಕರಣ: ಗೃಹ ಇಲಾಖೆ, ಐಟಿ, ಇಡಿ, ಎಸ್‌ಐಟಿ ಸೇರಿದಂತೆ ಅಗ್ರ ಅಧಿಕಾರಿಗಳಿಗೆ ನೋಟಿಸ್ ಜಾರಿ!

By Gireesh Vasishta
ಧರ್ಮಸ್ಥಳ ಪ್ರಕರಣ: ಗೃಹ ಇಲಾಖೆ, ಐಟಿ, ಇಡಿ, ಎಸ್‌ಐಟಿ ಸೇರಿದಂತೆ ಅಗ್ರ ಅಧಿಕಾರಿಗಳಿಗೆ ನೋಟಿಸ್ ಜಾರಿ!

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಆರೋಪದ ಹಿನ್ನೆಲೆ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇನ್ನಿತರರ ಹಣಕಾಸಿನ ಮೂಲ ಹಾಗೂ ಸಂಪರ್ಕ ಜಾಲಗಳ ತನಿಖೆಗೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅದರ ಧರ್ಮಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಹಿನ್ನೆಲೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್ ಮತ್ತು ಎಂ.ಡಿ. ಸಮೀರ್ ಅವರ ಚಟುವಟಿಕೆಗಳು ಹಾಗೂ ಹಣಕಾಸಿನ ಮೂಲಗಳ ತನಿಖೆಗೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಬೆಂಗಳೂರಿನ ತೇಜಸ್ ಎ. ಗೌಡ, ಬೆಳ್ತಂಗಡಿಯ ಭಾಸ್ಕರ್ ಬಡೆಕೊಟ್ಟು, ಧರ್ಮಸ್ಥಳದ ಸುರೇಂದ್ರ ಪ್ರಭು ಮತ್ತು ಧನಕೀರ್ತಿ ಅರಿಗ ಅವರು ಸಂಯುಕ್ತವಾಗಿ ಸಲ್ಲಿಸಿದ್ದು, ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠದಲ್ಲಿ ವಿಚಾರಣೆ ನಡೆಯಿತು.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women

 

ಪೀಠವು ಪ್ರಾಥಮಿಕ ವಾದವನ್ನು ಆಲಿಸಿ, ರಾಜ್ಯ ಸರ್ಕಾರದ ಗೃಹ ಇಲಾಖೆ, ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಪಿ, ಎಸ್‌ಐಟಿ, ಮಂಗಳೂರು ಆದಾಯ ತೆರಿಗೆ ಅಧಿಕಾರಿಗಳು ಹಾಗೂ ಇಡಿ ಮಂಗಳೂರು ಉಪ ವಲಯ ಕಚೇರಿಯ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದೆ. ಪ್ರತಿವಾದಿಗಳು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು, ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಲಾಗಿದೆ. ಇದೇ ವೇಳೆ ಗೃಹ ಸಚಿವ ಪರಮೇಶ್ವರ್ ಅವರು ಧರ್ಮಸ್ಥಳ ಪ್ರಕರಣಗಳ ತನಿಖೆ ಶೀಘ್ರ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದನ್ನು ಓದಿ: ಮೈಸೂರಿನಲ್ಲಿ ಬಾಲಕಿ ಮೇಲೆ ಅ*ತ್ಯಾಚಾರ ಮತ್ತು ಕೊ*ಲೆ ಕೇಸ್: ಸರ್ಕಾರದ ವಿರುದ್ದ ಪ್ರತಾಪ್ ಸಿಂಹ ಆಕ್ರೋಶ

 

ತೇಜಸ್ ಗೌಡ ತಮ್ಮ ಮನವಿಯಲ್ಲಿ, ಮಹೇಶ್ ಶೆಟ್ಟಿ ತಿಮರೋಡಿ ಅವರು ಸೌಜನ್ಯಾ ಹೆಸರಿನಲ್ಲಿ ನಡೆಸುತ್ತಿರುವ ಹೋರಾಟಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವಕೀಲರ ಶುಲ್ಕವಾಗಿ ಪಾವತಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಹೋರಾಟದಲ್ಲಿ ಭಾಗಿಯಾದ ಸೌಜನ್ಯ ಅವರ ತಾಯಿ ಸೇರಿದಂತೆ ಕೆಲವರು ಕೋಟಿಗಟ್ಟಲೆ ಆಸ್ತಿ ಖರೀದಿಸಿರುವ ಕುರಿತು ಮಾಹಿತಿ ನೀಡಿದ್ದು, ಈ ಹಣದ ಮೂಲದ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

 

ಅರ್ಜಿದಾರ ಧನಕೀರ್ತಿ ಅವರ ಪ್ರಕಾರ, ಯೂಟ್ಯೂಬರ್ “ಕುಡ್ಲ ರ್ಯಾಂಪೇಜ್ ಸಂಪಾದಕರು ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಷಡ್ಯಂತ್ರದ ವರದಿಗಳನ್ನು ಪ್ರಕಟಿಸುತ್ತಿದ್ದಾರೆ. ಈ ವರದಿಗಳ ಮೂಲವನ್ನು ಪತ್ತೆಹಚ್ಚುವಂತೆ ಅವರು ಮನವಿ ಸಲ್ಲಿಸಿದ್ದಾರೆ. ತನಿಖೆ ನಡೆಯುತ್ತಿದ್ದ ಸಮಯದಲ್ಲಿ, ಈ ಯೂಟ್ಯೂಬರ್ ತಮ್ಮದೇ ವರದಿಗಳನ್ನು ಎಸ್‌ಐಟಿ ವರದಿ ಎಂದು ಬಿಂಬಿಸಿ ಪ್ರಸಾರ ಮಾಡಿದ್ದಾಗಿ ಆರೋಪಿಸಲಾಗಿದ್ದು, ಈ ವಿಷಯದ ನಿಜಾಸ್ತಿ ಪತ್ತೆ ಮಾಡಲು ಧನಕೀರ್ತಿ ಎಸ್‌ಐಟಿಗೆ ವಿನಂತಿ ಮಾಡಿದ್ದಾರೆ.