ಪ್ರಶಾಂತ್ ಸಂಬರಗಿ ಅವರು 2003ರ ಶಾಸಕರ ಭವನದಲ್ಲಿ ನಡೆದ ಬಾಂಬ್ ಪ್ರಕರಣದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. 2005ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣ್ಣವರ್ ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು. ಆದರೆ, 2016ರಲ್ಲಿ ಬಾಂಬ್ ಕೇಸಿನಿಂದ ಅವರನ್ನು ಕೈಬಿಡಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಮಟ್ಟಣ್ಣವರ್ ಅವರ ಯೂಟ್ಯೂಬ್ ಮತ್ತು ಫೇಸ್‌ಬುಕ್ ಚಟುವಟಿಕೆಗಳನ್ನು ತಾವೆಲ್ಲಾ ಕೂಲಂಕಷವಾಗಿ ಪರಿಶೀಲಿಸಿರುವುದಾಗಿ ಸಂಬರಗಿ ಹೇಳಿದ್ದಾರೆ. ಅಲ್ಲಿ ಅವರು ಬಾಂಬ್ ತಯಾರಿಕೆಯ ಕುರಿತು ಮಾತನಾಡಿದ್ದಾರೆ. ಬಾಂಬ್ ಎಸ್ ಐ ಅಂದ್ರೆ ನಾನೇ, ನನ್ನನ್ನು ಬಾಂಬ್ ಎಸ್ ಐ ಅಂತಾನೇ ಕರೆಯುತ್ತಾರೆ. ಬಾಂಬ್ ಮಾಡೋದು ಈಸಿ, ನಾನು ನಿಮಗೆ ಹೇಳಿಕೊಡಬಲ್ಲೆ, ಎಂದು ಅವರು ಅನೇಕ ವಿಡಿಯೋಗಳಲ್ಲಿ ಹೇಳಿಕೊಂಡಿದ್ದಾರೆ ಎಂದು ಸಂಬರಗಿ ಉಲ್ಲೇಖಿಸಿದರು. Invicta Analogue Black Dial Men's Watch-26970
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿಯೂ ಗಿರೀಶ್ ಮಟ್ಟಣ್ಣವರ್ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ತನಿಖೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿರುವುದಾಗಿ ಮಾಹಿತಿ ಹೊರಬಂದಿದೆ. ಸೌಜನ್ಯ ಕೊಲೆ ಪ್ರಕರಣದಲ್ಲಿಯೂ ನಿರಂತರವಾಗಿ ಧರ್ಮಸ್ಥಳವನ್ನು ಗುರಿಯಾಗಿಸಿ ಹಲವು ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಪ್ರಶಾಂತ್ ಸಂಬರಗಿ ತಿಳಿಸಿದರು.
ಮಂಗಳೂರು ಬ್ಲಾಸ್ಟ್, ಶಾಸಕರ ಭವನದಲ್ಲಿನ ಬಾಂಬ್ ಸ್ಫೋಟ ಮತ್ತು ಗಿರೀಶ್ ಮಟ್ಟಣ್ಣವರ್ ಅವರ ತರಬೇತಿಗಳ ನಡುವೆ ಸಂಬಂಧವಿದೆಯೇ ಎಂದು ಅವರು ಪ್ರಶ್ನಿಸಿದರು. "ನನ್ನನ್ನು ಬಾಂಬ್ ಎಸ್ ಐ ಎಂದು ಕರೆದುಕೊಳ್ಳುವ ಗಿರೀಶ್ ಮಟ್ಟಣ್ಣವರ್ ಅವರನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು" ಎಂದು ಸಂಬರಗಿ ಆಗ್ರಹಿಸಿದರು. ಬಿಹಾರ ಚುನಾವಣೆ 2025: ರಾಜಕೀಯ ಉತ್ಸಾಹದಲ್ಲಿ ಪಪ್ಪು ಯಾದವ್‌ರ ಕಾರ್ಯತಂತ್ರ..!
ಎಲ್ಲಿ ಜಿಲೆಟಿನ್ ತರಬೇಕು, ಹೇಗೆ ಬಾಂಬ್ ಮಾಡಬೇಕು ಎಂಬುದನ್ನು ನಾನು ಹೇಳಿಕೊಡುತ್ತೇನೆ. ಬಾಂಬ್ ಇಟ್ಟ ನಂತರ ಪೊಲೀಸರು ಏನು ಮಾಡಲು ಸಾಧ್ಯವಿಲ್ಲ, ಎಂದು ಹೇಳುವ ಮೂಲಕ ಯುವಕರನ್ನು ಪ್ರಚೋದಿಸುವ ಕೆಲಸವನ್ನು ಮಟ್ಟಣ್ಣವರ್ ಮಾಡುತ್ತಿದ್ದಾರೆ ಎಂದು ಸಂಬರಗಿ ದೂರಿದರು. ಅವರು ಕ್ರಿಮಿನಲ್ ಮನಸ್ಥಿತಿಯ ವ್ಯಕ್ತಿ ಎಂದು ಬಣ್ಣಿಸಿ, ತನಿಖೆ ನಡೆಯಲೇಬೇಕು ಮತ್ತು ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ, ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.