Skip to main content
ವಿಡಿಯೋ
1/2
general

ರಮ್ಯಾಗೆ ಅಶ್ಲೀಲ ಕಮೆಂಟ್ ಹಾಕಿ ಬಂಧಿತರಾಗಿದ್ದ 6 ಮಂದಿಗೆ ಜಾಮೀನು!

By Shravanthi R
ರಮ್ಯಾಗೆ ಅಶ್ಲೀಲ ಕಮೆಂಟ್ ಹಾಕಿ ಬಂಧಿತರಾಗಿದ್ದ 6 ಮಂದಿಗೆ ಜಾಮೀನು!

ನಟಿ ರಮ್ಯಾ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಿದ ಆರೋಪಿಗಳಲ್ಲಿ ಆರು ಮಂದಿ ಹೈಕೋರ್ಟ್ ಜಾಮೀನು ಪಡೆದರು. ಮತ್ತೊಬ್ಬ ಆರೋಪಿ ನಿರೀಕ್ಷಣಾ ಜಾಮೀನು ಹೊಂದಿದ್ದು, ನ್ಯಾಯಾಲಯವು ಶರತ್ತುಬದ್ಧ ಬಾಂಡ್ ಮತ್ತು ಭದ್ರತಾ ಖಾತರಿ ನೀಡಲು ಸೂಚಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಕುರಿತು ನಟಿ ರಮ್ಯಾ ನೀಡಿದ್ದ ಹೇಳಿಕೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಆರು ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಒಬ್ಬ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ.

ಬೆಂಗಳೂರಿನಲ್ಲಿ (ಅ.11) ಹೈಕೋರ್ಟ್ ಈ ಆದೇಶ ಹೊರಡಿಸಿದ್ದು, ತನಿಖಾಧಿಕಾರಿಗಳು ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಕೆ. ಪ್ರಮೋದ್, ಮಂಜುನಾಥ್, ಸಿ.ವೈ. ರಾಜೇಶ್, ಟಿ. ಓಬಣ್ಣ, ಕೆ.ಎಂ. ಗಂಗಾಧರ್, ಮತ್ತು ಚಿನ್ಮಯ್ ಶೆಟ್ಟಿ ಅರ್ಜಿ ಸಲ್ಲಿಸಿದ್ದರು.

ಇದೇ ಪ್ರಕರಣದಲ್ಲಿ, ಮತ್ತೊಬ್ಬ ಆರೋಪಿ ಬಿ.ಎ. ವಿಕಾಸ್ ನಿರೀಕ್ಷಣಾ ಜಾಮೀನಿಗಾಗಿ ಮನವಿ ಮಾಡಿದ್ದರು.

ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರ ಪೀಠವು ಈ ಅರ್ಜಿಗಳನ್ನು ವಿಚಾರಣೆ ನಡೆಸಿ ತೀರ್ಪು ನೀಡಿದೆ. ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. Fujifilm Instax Mini LiPlay Hybrid Instant Camera (Green)

ಜಾಮೀನು ಪಡೆದ ಎಲ್ಲ ಬಂಧಿತ ಆರೋಪಿಗಳು ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತಾ ಖಾತರಿಯನ್ನು ಒದಗಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ನಿರೀಕ್ಷಣಾ ಜಾಮೀನು ಪಡೆದ ವಿಕಾಸ್, ಮುಂದಿನ ಎರಡು ವಾರಗಳೊಳಗೆ ತನಿಖಾಧಿಕಾರಿ ಅಥವಾ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿ, ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಭದ್ರತಾ ಖಾತರಿ ಸಲ್ಲಿಸಬೇಕು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಸಂದರ್ಭದಲ್ಲಿ, ನಟಿ ರಮ್ಯಾ ತಮ್ಮ ಅಭಿಪ್ರಾಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಅವರನ್ನು ಅವಹೇಳನಕಾರಿ ಪದಗಳಿಂದ ನಿಂದಿಸಿದ್ದರು. ಇದನ್ನೂ ಓದಿ: ಟ್ರಂಪ್–ಚೀನಾ ವ್ಯಾಪಾರ ಯುದ್ಧ ಮತ್ತೆ ಬಿರುಸು: 100% ಸುಂಕ, ಕ್ಸಿ ಜಿನ್‌ಪಿಂಗ್ ಭೇಟಿ ರದ್ದು!