ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳಕ್ಕೆ ಅಕ್ರಮ ವಲಸಿಗರ ಒಳನುಸುಳುವಿಕೆಯೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಇದೇ ಕಾರಣಕ್ಕೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ದೈನಿಕ್ ಜಾಗರಣ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಶಾ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಹೆಚ್ಚಳಕ್ಕೆ ಒಳನುಸುಳುವಿಕೆ ಮುಖ್ಯ ಕಾರಣ ಎಂದು ಹೇಳಿದ್ದಾರೆ. ಸ್ವಾತಂತ್ರ್ಯದ ನಂತರದ ಜನಗಣತಿ ಅಂಕಿಅಂಶಗಳನ್ನು ಉಲ್ಲೇಖಿಸಿ ಅವರು ಈ ಅಂಶವನ್ನು ವಿವರಿಸಿದ್ದಾರೆ.
1951ರ ಜನಗಣತಿಯ ಪ್ರಕಾರ, ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಶೇ. 84ರಷ್ಟಿದ್ದರೆ, ಮುಸ್ಲಿಮರ ಜನಸಂಖ್ಯೆ ಶೇ. 9.8ರಷ್ಟಿತ್ತು. 1971ರ ಹೊತ್ತಿಗೆ, ಹಿಂದೂಗಳ ಪ್ರಮಾಣ ಶೇ. 82ಕ್ಕೆ ಇಳಿದು, ಮುಸ್ಲಿಮರ ಪ್ರಮಾಣ ಶೇ. 11ಕ್ಕೆ ಏರಿತು ಎಂದು ಶಾ ಮಾಹಿತಿ ನೀಡಿದರು.
1991ರಲ್ಲಿ ಹಿಂದೂಗಳ ಸಂಖ್ಯೆ ಶೇ. 81ಕ್ಕೆ ಕುಸಿದರೆ, ಮುಸ್ಲಿಮರ ಸಂಖ್ಯೆ ಶೇ. 12.21ಕ್ಕೆ ಏರಿಕೆಯಾಯಿತು. 2011ರ ಜನಗಣತಿಯಲ್ಲಿ ಹಿಂದೂಗಳ ಪ್ರಮಾಣ ಶೇ. 79ಕ್ಕೆ ಇಳಿದು, ಮುಸ್ಲಿಮರ ಪ್ರಮಾಣ ಶೇ. 14.2ಕ್ಕೆ ತಲುಪಿರುವುದನ್ನು ಅವರು ವಿವರಿಸಿದರು. SilverArrow Women's Knotco Fashion Block Heel Sandals with Ankle Buckle Strap|Fusion Wear
2011ರ ಜನಗಣತಿಯ ಪ್ರಕಾರ, ಮುಸ್ಲಿಂ ಜನಸಂಖ್ಯೆಯ ಏರಿಕೆ ಪ್ರಮಾಣ ಶೇ. 24.6ರಷ್ಟಿದ್ದರೆ, ಹಿಂದೂಗಳ ಜನಸಂಖ್ಯೆಯ ಏರಿಕೆ ಪ್ರಮಾಣ ಶೇ. 16.8ರಷ್ಟಿತ್ತು ಎಂದು ಶಾ ತಿಳಿಸಿದರು. ಅಸ್ಸಾಂ ಮತ್ತು ಬಂಗಾಳದಂತಹ ಗಡಿ ಪ್ರದೇಶಗಳಲ್ಲಿ ಮುಸ್ಲಿಂ ಜನಸಂಖ್ಯೆಯ ಹೆಚ್ಚಳ ತೀವ್ರವಾಗಿದೆ ಎಂದು ಅವರು ಹೇಳಿದರು.
ಒಳನುಸುಳುವಿಕೆ ಇಲ್ಲದೆ ಇದು ಸಾಧ್ಯವಿಲ್ಲ. ಕೆಲವು ಪಕ್ಷಗಳ ಮತಬ್ಯಾಂಕ್ ರಾಜಕೀಯ ಇದಕ್ಕೆ ಕಾರಣ ಎಂದು ಅಮಿತ್ ಶಾ ಆರೋಪಿಸಿದರು. ಇದರೊಂದಿಗೆ, ಗಡಿಗಳನ್ನು ಸರಿಯಾಗಿ ಕಾಯದ ಬಿಎಸ್‌ಎಫ್‌ನ ನಿರ್ಲಕ್ಷ್ಯವೇ ಒಳನುಸುಳುವಿಕೆಗೆ ಕಾರಣ ಎಂಬ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯ ಹೇಳಿಕೆಗೆ ಅವರು ತಿರುಗೇಟು ನೀಡಿದರು. ಸಂಕಷ್ಟದಲ್ಲಿ ಗಿರೀಶ್ ಮಟ್ಟಣ್ಣವರ್, ಶಾಸಕರ ಭವನದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಮತ್ತೆ ಮರುಜೀವ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು, ಏಕೆಂದರೆ ಇದು ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಆಂದೋಲನ. ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗುತ್ತದೆ, ಮಾತ್ರವಲ್ಲದೆ ಅವರನ್ನು ದೇಶದಿಂದಲೇ ಗಡೀಪಾರು ಮಾಡಲಾಗುತ್ತದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.