ಅಮೆರಿಕ: 2025ರ ನೊಬೆಲ್ ಪ್ರಶಸ್ತಿ ಅನೌನ್ಸ್ ಆಗಿದ್ದು ವೆನೆಜುವೆಲಾದ ವಿರೋಧಪಕ್ಷದ(Vente Venezuela party) ನಾಯಕಿಯಾದ ಮರಿಯ ಕೊರಿನ ಮಚಾಡೊ ಅವರಿಗೆ ದೊರೆತಿದೆ. ಮತ್ತು ಮಚಾಡೊ ಅವರಿಗೆ ಹಲವು ಬಾರಿ ನಾನೇ ಸಹಾಯ ಮಾಡಿದ್ದು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಮುಂದುವರೆದು ಮಾತನಾಡಿದ ಟ್ರಂಪ್ ಮರಿಯ ಮಚಾಡೊ ಗೌರವಾರ್ಥಕ್ಕಾಗಿ ಮಾತ್ರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ನನ್ನ ಜೊತೆ ಮಾತನಾಡಿದ ಅವರು ನೀವು ನಿಜವಾಗಿಯೂ ಇದಕ್ಕೆ ಅರ್ಹರು ಎಂದು ಹೇಳಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.ಇದನ್ನು ಓದಿ: ಸಂಕಷ್ಟದಲ್ಲಿ ಗಿರೀಶ್ ಮಟ್ಟಣ್ಣವರ್, ಶಾಸಕರ ಭವನದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಮತ್ತೆ ಮರುಜೀವ
ಹಿಂದೆ ನೊಬೆಲ್ ಪ್ರಶಸ್ತಿಯನ್ನು ಗೆಲ್ಲಲು ನೇರಾ ನೇರ ಹಲವು ಹೇಳಿಕೆಗಳನ್ನು ನೀಡಿದ ಟ್ರಂಪ್ ಈಗ ಉಲ್ಟಾ ಹೊಡೆದಿದ್ದಾರೆ. ಇವರ ಈ ಹೇಳಿಕೆಗೆ ಬೀಕಾರಿ ದೇಶವಾದ ಪಾಕಿಸ್ತಾನವು ಸಹ ಬೆಂಬಲ ನೀಡಿತ್ತು. ಪಾಕಿಸ್ತಾನದ ಅಧ್ಯಕ್ಷ ತುಂಬಿದ ಸಭೆಯಲ್ಲಿ ನೊಬೆಲ್ ಪ್ರಶಸ್ತಿಗೆ ಟ್ರಂಪ್ ಅರ್ಹರು ಏಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದಿದ್ದರು.Vogaan Men's T-Shirt and Shorts Set | Top & Shorts Night Suits Set | Night Wear for Men
ಆದರೆ ನನಗೆ ನೊಬೆಲ್ ಕೊಡಿ ಎಂದು ನಾನೆಂದು ಹೇಳಿರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ವಿಪತ್ತಿನ ಸಮಯದಲ್ಲಿ ವೆನೆಜುವೆಲಾದ ಜನರಿಗೆ ಬಹಳಷ್ಟು ಸಹಾಯದ ಅಗತ್ಯವಿತ್ತು. ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದರಿಂದ ನನಗೆ ಸಂತೋಷವಾಗಿದೆ, ಈ ಎಲ್ಲ ಹೇಳಿಕೆಗಳನ್ನು ಟ್ರಂಪ್ ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜ್ಜಮೀನ್ ನೇತನ್ಯಾವು ಕೂಡ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಅರ್ಹರು ಎಂದು ಹೇಳಿದ್ದರು. ಮಚಾಡೊ 2025ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದ ನಂತರ ಶ್ವೇತ ಭವನ ಸ್ವಲ್ಪ ಖಾರವಾದ ಹೇಳಿಕೆಯನ್ನು ನೀಡಿದ್ದು, ಸಮಿತಿಯು ಶಾಂತಿ ವಿಚಾರದ ಮೇಲೆ ರಾಜಕೀಯವನ್ನು ಮಾಡುತ್ತದೆ ಎಂದು ಸಾಬೀತುಪಡಿಸಿದೆ. ಹೀಗಂತ ಶ್ವೇತ ಭವನದ ಅಧಿಕಾರಿಯೊಬ್ಬರು ಶುಕ್ರವಾರ ಸಂಜೆ ಹೇಳಿಕೆ ನೀಡಿದ್ದಾರೆ.
ಟ್ರಂಪ್ ಪ್ರಶಸ್ತಿಯ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರು ಶಾಂತಿ ಪ್ರಿಯ ಎಂದು ಸಕ್ರಿಯವಾಗಿ ಪ್ರಚಾರ ಮಾಡಿಕೊಂಡಿದ್ದರು. ಅವರ 20 ಅಂಶಗಳ ಗಾಜಾ ಶಾಂತಿ ಯೋಜನೆಯನ್ನು ಎತ್ತಿ ತೋರಿಸಿದ್ದರು. ಹಲವಾರು ಯುದ್ಧಗಳನ್ನು ಕೊನೆಗೊಳಿಸಿದ ಕೀರ್ತಿಯನ್ನು ತಾವೇ ಕೊಟ್ಟು ಕೊಂಡಿದ್ದರು. ಹೀಗಾಗಿ ಇಷ್ಟು ದಿನ ಮಾಡಿದ್ದೆಲ್ಲವೂ ಬರಿ ನೋಬೆಲ್ಗಾಗಿಯೇ ಅಥವಾ ನಿಜವಾದ ಶಾಂತಿಗಾಗಿಯೇ ಎಂಬುದು ಪ್ರಶ್ನೆಯಾಗಿದೆ. ಟ್ರಂಪ್ ಇನ್ನು ಮುಂದೆ ಹೀಗೆ ಸಾಮಾಜಿಕ ಸೇವೆ ಮಾಡುತ್ತಾರೋ ಇಲ್ಲವೋ ಎಂಬುದು ಸಹ ವ್ಯಾಪಕ ಚರ್ಚೆಗೊಳಗಾಗಿದೆ.