Skip to main content
ವಿಡಿಯೋ
1/2
spirituality

ಕರ್ತವ್ಯ ಲೋಪ ಹಿನ್ನೆಲೆ; ಹಾಸನಾಂಭ ದೇವಿ ಮಹೋತ್ಸವದಲ್ಲಿ ಇಬ್ಬರು ಅಧಿಕಾರಿಗಳ ಅಮಾನತು

By Gireesh Vasishta
ಕರ್ತವ್ಯ ಲೋಪ ಹಿನ್ನೆಲೆ; ಹಾಸನಾಂಭ ದೇವಿ ಮಹೋತ್ಸವದಲ್ಲಿ ಇಬ್ಬರು ಅಧಿಕಾರಿಗಳ ಅಮಾನತು

ಇದಕ್ಕೆ ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಲು ಉಲ್ಲೇಖ 1ರ ರೀತಿ ಆಡಳಿತ ಅಧಿಕಾರಿಗಳು, ಶ್ರೀ ಹಾಸನಾಂಬ ದೇವಾಲಯ ಹಾಗೂ ಉಪ ವಿಭಾಗಾಧಿಕಾರಿ ಹಾಸನ ವಿಭಾಗದವರು ತಿಳಿಸಿರುವ ಮೇರೆ ಉಲ್ಲೇಖದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲು ಆದೇಶಿಸಲಾಗಿರುತ್ತದೆ. ಹಾಗೂ ಸಿಬ್ಬಂದಿಗಳಿಂದ ಯಾವುದೇ ರೀತಿಯ ಕರ್ತವ್ಯ ಲೋಪವಾಗದಂತೆ ಕರ್ತವ್ಯ ನಿರ್ವಹಿಸಲು ಸೂಚನೆಯನ್ನು ಸಹ ನೀಡಲಾಗಿದೆ.

ಹಾಸನ: ದಿನಾಂಕ 09-10-2025 ರಿಂದ ದಿನಾಂಕ 23 10-2025 ರವರೆಗೆ ನಡೆಯುವ ಶ್ರೀ ಹಾಸನಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಮಹೋತ್ಸವವು ಜಿಲ್ಲೆಯ ಪ್ರತಿಷ್ಠಿತ ಮಹೋತ್ಸವವಾಗಿದ್ದು ಸದರಿ ಮಹೋತ್ಸವಕ್ಕೆ ಬೇರೆ ಬೇರೆ ರಾಜ್ಯ ಜಿಲ್ಲೆಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುವುದರಿಂದ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಯಾವುದೇ ಅಡ್ಡಿ ಬಾರದಂತೆ ಜಿಲ್ಲಾಡಳಿತವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿತ್ತು.Handcuffs Backpacks Vegan Leather Casual Backpack Multipurpose Travelling Bags Daypacks For Men And Women


ಇದಕ್ಕೆ
ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಲು ಉಲ್ಲೇಖ 1ರ ರೀತಿ ಆಡಳಿತ ಅಧಿಕಾರಿಗಳು, ಶ್ರೀ ಹಾಸನಾಂಬ ದೇವಾಲಯ ಹಾಗೂ ಉಪ ವಿಭಾಗಾಧಿಕಾರಿ ಹಾಸನ ವಿಭಾಗದವರು ತಿಳಿಸಿರುವ ಮೇರೆ ಉಲ್ಲೇಖದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲು ಆದೇಶಿಸಲಾಗಿರುತ್ತದೆ. ಹಾಗೂ ಸಿಬ್ಬಂದಿಗಳಿಂದ ಯಾವುದೇ ರೀತಿಯ ಕರ್ತವ್ಯ ಲೋಪವಾಗದಂತೆ ಕರ್ತವ್ಯ ನಿರ್ವಹಿಸಲು ಸೂಚನೆಯನ್ನು ಸಹ ನೀಡಲಾಗಿದೆ.ಇದನ್ನು ಓದಿ: ಲೋಕನಾಯಕ ಶ್ರೀ ಜಯಪ್ರಕಾಶ ನಾರಾಯಣ ಅವರ 124ನೇ ಜನ್ಮದಿನ: ಶಿವಮೊಗ್ಗ ನಗರ ಅಧ್ಯಕ್ಷರಾದ ದೀಪಕ್ ಸಿಂಗ್ ಅವರ ನೇತೃತ್ವದಲ್ಲಿಆಚರಣೆ

ಶ್ರೀ ಆನಂದ್ (ವಾರ್ಡನ್‌) ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ದೊಡ್ಡಬೆಮ್ಮತ್ತಿ, ಅರಕಲಗೂಡು ತಾಲೂಕು ಹಾಗೂ ಶ್ರೀ ರಮೇಶ್ (ವಾರ್ಡನ್‌) ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಹಳೇಬೀಡು, ಬೇಲೂರು ತಾಲೂಕು, ಅವರನ್ನು ಉಲ್ಲೇಖ 2ರ ಪ್ರಕಾರ ಸ್ವಚ್ಛತೆಯ ಮೇಲ್ವಿಚಾರಣೆಯ ಕರ್ತವ್ಯ ನಿರ್ವಹಣೆ ಮಾಡಲು ನಿಯೋಜಿಸಲಾಗಿದ್ದು ಗುರುತಿನ ಚೀಟಿಯನ್ನು ವಿತರಿಸಲಾಗಿರುತ್ತದೆ. ಆದರೆ ಇವರುಗಳು ತಮ್ಮ ಗುರುತಿನ ಚೀಟಿಯನ್ನು ದಿನಾಂಕ ಬೇರೆಯವರಿಗೆ ನೀಡಿ ಅನ್ಯ ವ್ಯಕ್ತಿಗಳು ದೇವಾಲಯದ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದಾರೆ  ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.

ಶ್ರೀ ಕೆ.ಎಸ್. ಲತಾ ಕುಮಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹಾಸನ ಜಿಲ್ಲೆ ಇವರ ಆದೇಶದಂತೆ ಶ್ರೀ ಆನಂದ್ ಮತ್ತು ಶ್ರೀ ರಮೇಶ್ ಇವರನ್ನು ದಿನಾಂಕ 10-10-2025 ರಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತಿನಲ್ಲಿರಲು ಆದೇಶಿಸಿದ್ದಾರೆ.