Skip to main content
ವಿಡಿಯೋ
1/3
cinema

ಕಾಕ್ರೋಚ್ ಸುಧೀರ್ ಮನೆಯಿಂದ ಹೊರ ಕಳಿಸಲು ಡೋರ್ ಓಪನ್ ಮಾಡಿಸಿದ ಸುದೀಪ್! ಅಷ್ಟಕ್ಕೂ ಆದ ತಪ್ಪೇನು?

By Ram Chethan
ಕಾಕ್ರೋಚ್ ಸುಧೀರ್ ಮನೆಯಿಂದ ಹೊರ ಕಳಿಸಲು ಡೋರ್ ಓಪನ್ ಮಾಡಿಸಿದ ಸುದೀಪ್! ಅಷ್ಟಕ್ಕೂ ಆದ ತಪ್ಪೇನು?

ಈ ವಾರದ ‘ಅಸುರ’ ಟಾಸ್ಕ್ ಮತ್ತು ಸ್ಪರ್ಧಿಗಳ ನಡುವಿನ ವಾದಗಳು ಬಿಗ್ ಬಾಸ್ ಮನೆಯನ್ನು ಸದ್ದುಮಾಡಿದವು. ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಮತ್ತು ರಕ್ಷಿತಾ ಸೇರಿದಂತೆ ಸ್ಪರ್ಧಿಗಳ ವರ್ತನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ 12 ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚಿನ ವಾರದಲ್ಲಿ, ಸ್ಪರ್ಧಿಗಳು ಎರಡು ದಿನಗಳ ಕಾಲ ಮನೆಯಿಂದ ಹೊರಗಿದ್ದರು. ಈ ಅವಧಿಯಲ್ಲಿ ನಡೆದ 'ಅಸುರ' ಟಾಸ್ಕ್ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

ಈ ವಾರ ಮನರಂಜನೆಗಿಂತ ಸ್ಪರ್ಧಿಗಳ ನಡುವಿನ ಜಗಳಗಳೇ ಹೆಚ್ಚು ಸದ್ದು ಮಾಡಿದವು. ಗಿಲ್ಲಿ ನಟ, ಜಾಹ್ನವಿ, ಅಶ್ವಿನಿ ಗೌಡ, ರಕ್ಷಿತಾ, ಕಾವ್ಯ ಶೈವ ಮತ್ತು ಮಲ್ಲಮ್ಮ ಅವರ ಮಾತುಗಳು ಟಾಸ್ಕ್ ಮುಗಿದ ನಂತರವೂ ಚರ್ಚೆಯ ವಿಷಯವಾಗಿದ್ದವು.

ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು 'ಅಸುರನ ಆಟ ಹೇಗಿತ್ತು?' ಎಂದು ಪ್ರಶ್ನಿಸಿದರು. ಇದಕ್ಕೆ ಜಾಹ್ನವಿ, 'ಕ್ರೌರ್ಯ ಅಟ್ಟಹಾಸ ಮೇಕಪ್‌ಗೆ ಸಿಕ್ಕಿತ್ತು' ಎಂದು ಉತ್ತರಿಸಿದರು. ರಕ್ಷಿತಾ ಶೆಟ್ಟಿ ಅವರು, ಅದು 'ಜೋಕರ್‌ಥರ ಕಾಣುತ್ತಿತ್ತು' ಎಂದು ಹೇಳಿದರು. ಕಾಕ್ರೋಚ್ ಸುಧಿ ಅವರು, 'ಕಾಲಿಗೆ ಒಂದು ಬಿದ್ದಿಲ್ಲ ನಾನು, ಇನ್ನು ಏನು ಮಾಡಬೇಕು? ಇವರ ಹತ್ರ ಇನ್ನು ಏನೂ ಆಗುತ್ತೆ? ಇನ್ನು ಹೇಗೆ ಬದುಕಬೇಕು?' ಎಂದು ಅಸಮಾಧಾನ ವ್ಯಕ್ತಪಡಿಸಿದರು.Tommy Hilfiger Quartz Multifunction Black dial Leather Strap Watch for Men-TH1710566

ಸೀರಿಯಸ್‌ನೆಸ್ ಕುರಿತು ಸುದೀಪ್, 'ಕೆಲವೊಂದು ನಿಯಂತ್ರಿಸಲು ಆಗುವುದಿಲ್ಲ ಅಂದರೆ ಬಾಗಿಲು ತೆರೆದಿರುತ್ತದೆ, ಈಗಲೇ ಹೊರಗೆ ಕಳುಹಿಸುತ್ತೇನೆ' ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಶಿಸ್ತಿನ ಮಹತ್ವವನ್ನು ಸ್ಪರ್ಧಿಗಳಿಗೆ ಮನದಟ್ಟು ಮಾಡಿಸಿದರು.

ವೀಕ್ಷಕರು ಸಹ ಈ ವಾರದ ಘಟನೆಗಳ ಬಗ್ಗೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಶ್ವಿನಿ 'ಪ್ರಿ-ಪ್ರಾಡಕ್ಟ್' ಮತ್ತು 'ಕಾರ್ಟೂನ್' ಎಂಬ ಪದಗಳನ್ನು ಬಳಸಿದ್ದರ ಬಗ್ಗೆ ಕಿಚ್ಚ ಸುದೀಪ್ ಮಾತನಾಡಬೇಕು ಎಂದು ಅನೇಕರು ಒತ್ತಾಯಿಸಿದರು. ಅಲ್ಲದೆ, ಜಾಹ್ನವಿ ಅಥವಾ ಅಶ್ವಿನಿ ಈ ವಾರ ಮನೆಯಿಂದ ಹೊರಹೋಗಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಒಂದೆಡೆ, 'ಕಾಕ್ರೋಚ್ ಚೆನ್ನಾಗಿಯೇ ಆಡಿದ್ದಾರೆ' ಎಂದು ಕೆಲವು ವೀಕ್ಷಕರು ಅಭಿಪ್ರಾಯಪಟ್ಟರೆ, ಇನ್ನೊಂದೆಡೆ, 'ದಯವಿಟ್ಟು ಆದಷ್ಟು ಬೇಗನೆ ಈ ಒಂಟಿ-ಜಂಟಿ ಕಾನ್ಸೆಪ್ಟ್ ತೆಗೆಯಿರಿ. ಪ್ರತಿ ಸ್ಪರ್ಧಿಗಳ ಸಾಮರ್ಥ್ಯ ಏನು ಎಂದು ಗೊತ್ತಾಗಬೇಕು' ಎಂಬ ಬೇಡಿಕೆ ಬಲವಾಗಿ ಕೇಳಿಬಂತು. 'ಅಸುರ ಕಾಲಿಗೆ ಬೀಳುವ ಸನ್ನಿವೇಶ ಬರುತ್ತಾ?' ಎಂಬ ಪ್ರಶ್ನೆಯೂ ಇತ್ತು.ಕೌನ್ ಬನೇಗಾ ಕರೋಡ್‌ಪತಿಯಲ್ಲಿ ರಿಷಬ್ ಶೆಟ್ಟಿ..ಬಿಗ್‌ಬಿ ಅಮಿತಾಭ್ ಬಚ್ಚನ್‌ ಜನ್ಮದಿನಕ್ಕೆ ಶುಭಾಷಯ ಕೋರಿದ ಕಾಂತಾರ ಟೀಮ್!

ಕಾವ್ಯ ಶೈವ ಬಗ್ಗೆಯೂ ವೀಕ್ಷಕರು ಮಾತನಾಡಿದ್ದಾರೆ. 'ಜಾಹ್ನವಿ ಸುಮ್ಮನೆ ಇರುತ್ತಾರೆ, ಆಟ ಆಡಲ್ಲ, ಬರಿ ಮಾತು' ಎಂದು ಕೆಲವರು ಹೇಳಿದರೆ, ಬಿಗ್ ಬಾಸ್‌ನ ಈ ಸೀಸನ್‌ನಲ್ಲಿ ಧನುಷ್ ಅವರ ವ್ಯಕ್ತಿತ್ವ ಬಹಳ ಇಷ್ಟವಾಯಿತು, ಅವರು ಎಷ್ಟು ಬೇಕೋ ಅಷ್ಟು ಮಾತನಾಡುತ್ತಾರೆ, ಆಟ ಚೆನ್ನಾಗಿ ಆಡುತ್ತಾರೆ, ತಪ್ಪು ಇದ್ದಲ್ಲಿ ಮಾತನಾಡುತ್ತಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಶ್ವಿನಿ ಗೌಡ ಬಗ್ಗೆ ಮಾತನಾಡುವಾಗ, ಕಾವ್ಯ ಶೈವ ಮನೆಯಲ್ಲಿ ಏನು ಮಾಡುತ್ತಾರೆ, ಒಂದು ಟಾಸ್ಕ್ ವಿನ್ ಆಗಿಲ್ಲ, ಸ್ವಲ್ಪ ಫುಟೇಜ್ ಸಿಗಲಿ ಎಂದು ಗಿಲ್ಲಿ ಜೊತೆ ಜಂಟಿ ಮಾಡಿದ್ದಾರೆ, ಬರೀ ಗಿಲ್ಲಿ ಹಿಂದೆ ತಿರುಗುತ್ತಾರೆ ಅಷ್ಟೇ ಎಂಬ ಅಭಿಪ್ರಾಯಗಳೂ ವ್ಯಕ್ತವಾದವು.

ಈ ವಾರ ಕಿಚ್ಚ ಸುದೀಪ್ ಯಾವ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂಬ ಕುತೂಹಲವಿದೆ. ರಕ್ಷಿತಾ ಅವರ ಕೂಗಾಟ, ಮಲ್ಲಮ್ಮ ಅವರು ಕಾವ್ಯ ಶೈವ ವಿರುದ್ಧ ಮಾತನಾಡಿದ್ದು, ಮತ್ತು ಮಂಜುಭಾಷಿಣಿ-ರಕ್ಷಿತಾ ಜಗಳದ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ.