Skip to main content
ವಿಡಿಯೋ
1/2
general

ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಹಿಂದೆ ರಾಜಕೀಯ ಕಾಳಗ! ನವೆಂಬರ್ ಕ್ರಾಂತಿಯ ಎಚ್ಚರಿಕೇನಾ?

By Vinutha U
ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಹಿಂದೆ ರಾಜಕೀಯ ಕಾಳಗ! ನವೆಂಬರ್ ಕ್ರಾಂತಿಯ ಎಚ್ಚರಿಕೇನಾ?

ಕರ್ನಾಟಕ ರಾಜಕೀಯದಲ್ಲಿ ಕುರ್ಚಿ ಅಲುಗಾಡುವ ಭೀತಿ ತೀವ್ರವಾಗಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರೊಂದಿಗೆ ನಡೆಸಿದ ಡಿನ್ನರ್ ಮೀಟಿಂಗ್ ಸಂಪುಟ ಪುನಾರಚನೆಯ ಪೂರ್ವಭಾವಿಯಾಗಿದೆಯಾ? ಕಾಂಗ್ರೆಸ್ ಒಳಕಲಹಕ್ಕೆ ಬಿಜೆಪಿ ವ್ಯಂಗ್ಯ, ಹೈಕಮಾಂಡ್ ಕಾದಿದೆ ಅಂತಿಮ ನಿರ್ಧಾರಕ್ಕೆ.

ಕರ್ನಾಟಕ ರಾಜಕೀಯದಲ್ಲಿ ಈಗ ಎಲ್ಲೆಡೆ ಕೇಳಿಬರುತ್ತಿರುವ ಪ್ರಶ್ನೆಗಳು ಒಂದೇ... ಯಾರ ಕುರ್ಚಿ ಅಲುಗಾಡಲಿದೆ? ಯಾರಿಗೆ ಕೊಕ್ ಕಾದಿದೆ? ಯಾವ ಹಿರಿಯ ನಾಯಕರಿಗೆ ಶಾಕ್ ಎದುರಾಗಲಿದೆ? ನವೆಂಬರ್ ತಿಂಗಳು ಕ್ರಾಂತಿಯನ್ನೇ ತರಲಿದೆಯಾ ಅಥವಾ ಇದು ಕೇವಲ ಬ್ರಾಂತಿಯೇ? ಈ ಎಲ್ಲ ಊಹಾಪೋಹಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರೊಂದಿಗೆ ಇಂದು ವಿಶೇಷ ಡಿನ್ನರ್ ಮೀಟಿಂಗ್ ನಡೆಸಲಿದ್ದಾರೆ. ಈ ಸಭೆ ಕೇವಲ ಸ್ನೇಹಭೋಜನವಲ್ಲ, ಬದಲಾವಣೆಯ ಲೆಕ್ಕಾಚಾರ ನಡೆಯುವ ವೇದಿಕೆಯೂ ಆಗಬಹುದು ಎಂಬ ರಾಜಕೀಯ ವಲಯದ ಅಂದಾಜು ಇದೆ.

ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ, ಅಧಿಕಾರ ಹಂಚಿಕೆ ಕುರಿತ ಅಸಹಕಾರ ಈಗ ಎಲ್ಲರಿಗೂ ಗೊತ್ತಾದ ಸಂಗತಿ. ಇಂತಹ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಔತಣ ಕೂಟ ಏರ್ಪಡಿಸಿರುವುದು ವಿಶಿಷ್ಟ ಮಹತ್ವ ಪಡೆದಿದೆ. ಪಕ್ಷದ ಒಳಗಿನ ಶಾಂತಿ ಕಾಪಾಡಲು ಮತ್ತು ಪುನಾರಚನೆಯ ತಂತ್ರ ರೂಪಿಸಲು ಈ ಸಭೆ ಆಯೋಜನೆಯಾಗಿದೆ ಎನ್ನಲಾಗುತ್ತಿದೆ. ಆದರೆ ಕೆಲವರ ಪ್ರಕಾರ, ಈ ಭೋಜನದ ಹಿಂದೆ ರಾಜಕೀಯ ಲೆಕ್ಕಾಚಾರ ಮಾತ್ರವಲ್ಲದೆ, ಯಾರು ಉಳಿಯುತ್ತಾರೆ, ಯಾರು ಹೊರಗುಳಿಯುತ್ತಾರೆ ಎಂಬ ನಿರ್ಧಾರಕ್ಕೂ ಪೂರ್ವಭಾವಿಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ.

ಸಂಪುಟ ಬದಲಾವಣೆ ಕುರಿತ ಕ್ರಾಂತಿಯ ಮಾತುಗಳು ಪಕ್ಷದೊಳಗಿಂದಲೇ ಹೊರಬಿದ್ದರೂ, ಸಿಎಂ ಬಣವು ಅದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದೆ. ಯಾವ ಕ್ರಾಂತಿಯೂ ಇಲ್ಲ, ಎಲ್ಲವನ್ನೂ ಹೈಕಮಾಂಡ್ ತೀರ್ಮಾನಿಸುತ್ತದೆ, ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ. ಆದರೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಡಿಸೆಂಬರ್‌ನಲ್ಲಿ ನನಗೆ ಶುಕ್ರದಶೆ ಶುರುವಾಗುತ್ತದೆ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ. ಅವರು ಸಚಿವ ಸ್ಥಾನಕ್ಕೆ ಅವಕಾಶ ಸಿಗುವ ನಿರೀಕ್ಷೆ ವ್ಯಕ್ತಪಡಿಸಿರುವುದಾಗಿ ಅಂದಾಜಿಸಲಾಗಿದೆ. Marc Loire Women's Slip on Casual Solid Pumps Heels

ಕಾಂಗ್ರೆಸ್‌ನ ಒಳಗಿನ ಈ ಗೊಂದಲ, ಪ್ರತಿಪಕ್ಷ ಬಿಜೆಪಿಗೆ ಹೊಸ ಶಸ್ತ್ರವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಿದ್ದರಾಮಯ್ಯ ಸರ್ಕಾರದೊಳಗೆ ಅಸ್ತವ್ಯಸ್ತತೆ ತೀವ್ರವಾಗಿದೆ ಎಂದು ಟೀಕಿಸಿದ್ದಾರೆ. ಅದೇ ರೀತಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಡಿನ್ನರ್ ಮೀಟಿಂಗ್ ಎಂದರೆ ಮೋಜಿನ ಸಭೆ ಎಂದು ವ್ಯಂಗ್ಯವಾಡಿದ್ದಾರೆ.