Skip to main content
ವಿಡಿಯೋ
1/2
sports

ಮಹಿಳಾ ವಿಶ್ವಕಪ್ 2025: ಭಾರತ vs ಆಸ್ಟ್ರೇಲಿಯಾ: ಕಳಪೆ ಬೌಲಿಂಗ್‌, ಭಾರತಕ್ಕೆ ಹೀನಾಯ ಸೋಲು

By Gireesh Vasishta
ಮಹಿಳಾ ವಿಶ್ವಕಪ್ 2025: ಭಾರತ vs ಆಸ್ಟ್ರೇಲಿಯಾ: ಕಳಪೆ ಬೌಲಿಂಗ್‌, ಭಾರತಕ್ಕೆ ಹೀನಾಯ ಸೋಲು

ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಓಪನರ್ ಬ್ಯಾಟ್ಸ್ಮನ್‌ಗಳಾದ ಪ್ರತಿಕಾ 75 ರನ್ 96 ಬಾಲ್‌ಗಳು ಮತ್ತು ಒಂದು ಸಿಕ್ಸರ್, 10 ಫೋರ್ಸ್‌ ಸಮೇತ ಮತ್ತು ಸ್ಮೃತಿ ಮಂದಣ್ಣ 80 ರನ್‌, 66 ಎಸೆತ 9 ಫೋರ್ಗಳು ಮತ್ತು 3 ಸಿಕ್ಸರ್ ಸಮೇತ ಹೀಗೆ ಉತ್ತಮ ಆರಂಭವನ್ನು ನೀಡಿದರು.

ವಿಶಾಖಪಟ್ಟಣಂ: ನೆನ್ನೆ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳೆಯರ ವಿಶ್ವಕಪ್ 13ನೇ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ಗೆ ಶರಣಾಗಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ವಿಶಾಖಪಟ್ಟಣಂನ ACA-VDCA ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯ ಇದಾಗಿದ್ದು 2 ತಂಡಗಳಿಂದ ರನ್ಗಳ ಮಳೆಯೆ ಹರಿಯಿತು.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+


ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಓಪನರ್ ಬ್ಯಾಟ್ಸ್ಮನ್‌ಗಳಾದ ಪ್ರತಿಕ 75 ರನ್ 96 ಬಾಲ್‌ಗಳು ಮತ್ತು ಒಂದು ಸಿಕ್ಸರ್, 10 ಫೋರ್ಸ್‌ ಸಮೇತ ಮತ್ತು ಸ್ಮೃತಿ ಮಂದಣ್ಣ 80 ರನ್‌, 66 ಎಸೆತ 9 ಫೋರ್ಗಳು ಮತ್ತು 3 ಸಿಕ್ಸರ್ ಸಮೇತ ಹೀಗೆ ಉತ್ತಮ ಆರಂಭವನ್ನು ನೀಡಿದರು. ನಂತರ ಬಂದ ಮಿಡಿಲಾಡರ್ ಬ್ಯಾಟರ್‌ಗಳು ಉತ್ತಮ ಕೊಡುಗೆಯನ್ನು ನೀಡಿದರು. ಹರ್ಲಿನ್ ಡಿಯೋಲ್ 38 ರನ್ ನಾಯಕಿ ಹರ್ಮನ್ ಪ್ರೀತ್ ಕೌರ್ 22ರನ್‌, ಜೆಮಿಯಾ 33 ರನ್, ರಿಚ 32, ಅಮನ್ಜೋತ್ ಕೌರ್ 16 ರನ್ ಹೀಗೆ ಎಲ್ಲರ ಕೊಡುಗೆಯಿಂದ ಭಾರತದ ಮಹಿಳಾ ತಂಡ 48.5 ಓವರುಗಳಲ್ಲಿ 330 ಕ್ಕೆ 10 ವಿಕೆಟ್ಗಳನ್ನು ಕಳೆದುಕೊಂಡಿತು.ಇದನ್ನು ಓದಿ: ಅರಟ್ಟೈ vs ವಾಟ್ಸಾಪ್: ಸೆಪ್ಟೆಂಬರ್‌ನಲ್ಲಿ ಡೌನ್‌ಲೋಡ್‌ಗಳು 100 ಪಟ್ಟು ಏರಿಕೆ: ವಾಟ್ಸ್‌ಆಪ್‌ ದೈತ್ಯನಿಗೆ ಸವಾಲು!


ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ನಾಯಕಿ ಹಾಗೂ ಒಪನಿಂಗ್‌ ಬ್ಯಾಟರ್‌ ಅದ ಅಲಿಸಾ ಹೇಲೀ 142 ರನ್ 107 ಬಾಲ್ಗಳಿಗೆ ಅದರಲ್ಲಿ 21 ಫೋರ್‌ಗಳು ಮತ್ತು 3 ಸಿಕ್ಸ್‌ಗಳು ಹೀಗೆ ಭಾರತದ ಬೌಲರ್ಗಳ ಬೆವರಿಳಿಸಿದರು. ಮತ್ತೊಬ್ಬ ಓಪನಿಂಗ್ ಬ್ಯಾಟರಾದ ಲಿಚ್ ಫೀಲ್ಡ್ 40 ರನ್ ಗಳಿಸಿ ನಿರ್ಗಮಿಸಿದರು. ನಂತರ ಬಂದ ಎಲಿಸಾ ಪೆರ್ರಿ 47 ರನ್ ಗಳಿಸಿ ಕೊನೆಯ ಹಂತದವರೆಗೂ ಇದ್ದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಯಾವುದೇ ಕೊಡುಗೆ ನೀಡದೆ ಇದ್ದರೂ ಆಶ್ಲೇ 45 ರನ್ಗಳ ಅತಿ ಅಮೂಲ್ಯ ಕೊಡುಗೆ ನೀಡಿದರು. ಹೀಗಾಗಿ ಆಸ್ಟ್ರೇಲಿಯಾ ಆರು ಬಾಲ್ ಬಾಕಿ ಇರುವಂತೆ 330 ರನ್‌ಗಳ ಗುರಿ ಮುಟ್ಟಿ 331-7 ರನ್ ಗಳಿಸಿತು. ಒಟ್ಟಾರೆ ಬೃಹತ್ ಮೊತ್ತವನ್ನೇ ಪೇರಿಸಿದ ಭಾರತ ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಹೀಗಾಗಿ 13ನೇ ಮ್ಯಾಚ್‌ನಲ್ಲಿ ಸೋಲುಂಟಾಯಿತು.