Skip to main content
ವಿಡಿಯೋ
1/2
politics

ಗಡಿ ಲಾಂಚ್‌ಪ್ಯಾಡ್‌ಗಳಲ್ಲಿ ಭಯೋತ್ಪಾದಕರು ಸಕ್ರಿಯ: ಚಳಿಗಾಲದಲ್ಲಿ ಕಾಶ್ಮೀರ ಗಡಿಗೆ ಭದ್ರತೆ ತೀವ್ರ!

By Gireesh Vasishta
ಗಡಿ ಲಾಂಚ್‌ಪ್ಯಾಡ್‌ಗಳಲ್ಲಿ ಭಯೋತ್ಪಾದಕರು ಸಕ್ರಿಯ: ಚಳಿಗಾಲದಲ್ಲಿ ಕಾಶ್ಮೀರ ಗಡಿಗೆ ಭದ್ರತೆ ತೀವ್ರ!

ಗುಪ್ತಚರ ವರದಿಗಳ ಪ್ರಕಾರ ಗಡಿಯಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚುತ್ತಿದ್ದು, ಬಿಎಸ್‌ಎಫ್‌ ಹಗಲು-ರಾತ್ರಿ ಕಣ್ಗಾವಲು, ಡ್ರೋನ್ ನಿಗಾ ಮೂಲಕ ತೀವ್ರ ಭದ್ರತೆ ಜಾರಿ ಮಾಡಿದ್ದಾರೆ. ಚಳಿಗಾಲದಲ್ಲಿ ನುಸುಳುವಿಕೆ ತಡೆಯಲು ಸಂಪೂರ್ಣ ಸಜ್ಜುಗೊಂಡಿದೆ.

ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರರ ಲಾಂಚ್‌ಪ್ಯಾಡ್‌ಗಳು ಸಕ್ರಿಯವಾಗಿರುವ ಬಗ್ಗೆ ಗುಪ್ತಚರ ವರದಿಗಳು ಬಂದ ನಂತರ, ಕಾಶ್ಮೀರ ಕಣಿವೆಯಲ್ಲಿ ಚಳಿಗಾಲದ ನುಸುಳುವಿಕೆ ತಡೆಯಲು ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಗಡಿ ಭದ್ರತಾ ಪಡೆ (BSF) ಸಂಪೂರ್ಣ ಕಟ್ಟೆಚ್ಚರ ವಹಿಸಿದ್ದು, ಗಡಿಯುದ್ದಕ್ಕೂ ಉಗ್ರರ ಚಲನವಲನಗಳ ಮೇಲೆ ನಿರಂತರ ನಿಗಾ ಇಡಲಾಗಿದೆ. ಹಲವಾರು ಲಾಂಚ್‌ಪ್ಯಾಡ್‌ಗಳಲ್ಲಿ ಭಯೋತ್ಪಾದಕರು ಕಣಿವೆಯೊಳಗೆ ನುಸುಳಲು ಸಿದ್ಧರಾಗಿ ಕಾಯುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ.

 

ಬಿಎಸ್‌ಎಫ್ ಮೂಲಗಳ ಪ್ರಕಾರ, ಚಳಿಗಾಲದಲ್ಲಿ ಇಂತಹ ನುಸುಳುವಿಕೆ ಪ್ರಯತ್ನಗಳು ಸಾಮಾನ್ಯವಾಗಿದ್ದು, ಅದಕ್ಕೂ ಮುನ್ನವೇ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ. ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದ 'ವುಲರ್ 2.0' ಮ್ಯಾರಥಾನ್ ಸಂದರ್ಭದಲ್ಲಿ ಬಿಎಸ್‌ಎಫ್‌ನ ಹೆಚ್ಚುವರಿ ಮಹಾನಿರ್ದೇಶಕ (ADG) ಸತೀಶ್ ಎಸ್. ಖಂಡ್ರೆ ಈ ಕುರಿತು ಮಾತನಾಡಿದರು.Handcuffs Backpacks Vegan Leather Casual Backpack Multipurpose Travelling Bags Daypacks For Men And Women

 

ಖಂಡ್ರೆ ಅವರು, ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಭಯೋತ್ಪಾದಕರ ನುಸುಳುವಿಕೆ ಪ್ರಯತ್ನಗಳು ಹೆಚ್ಚಾಗುತ್ತವೆ. ಆದ್ದರಿಂದ, ನಾವು ಗಡಿಯಲ್ಲಿ ಕಣ್ಗಾವಲನ್ನು ಬಲಪಡಿಸಿದ್ದೇವೆ ಮತ್ತು ನಮ್ಮ ಸೈನಿಕರು ಹಾಗೂ ಅಧಿಕಾರಿಗಳನ್ನು ಎಚ್ಚರಿಸಿದ್ದೇವೆ ಎಂದು ತಿಳಿಸಿದರು. ಗುಪ್ತಚರ ಮಾಹಿತಿಯ ಪ್ರಕಾರ, ಗಡಿಯಲ್ಲಿ ಈಗಾಗಲೇ ಹಲವಾರು ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳು ಸಕ್ರಿಯಗೊಂಡಿದ್ದು, ಅಲ್ಲಿಂದ ಭಯೋತ್ಪಾದಕರು ಒಳನುಸುಳಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರಸ್ತುತ ಎಷ್ಟು ಉಗ್ರರಿದ್ದಾರೆ ಎಂದು ಅಂದಾಜಿಸುವುದು ಕಷ್ಟ, ಆದರೆ ಕೆಲವು ಚಟುವಟಿಕೆಗಳು ಸಕ್ರಿಯವಾಗಿರುವ ಬಗ್ಗೆ ವರದಿ ಬಂದಿದೆ. ಹಾಗಾಗಿ ನಾವು ಗಡಿಯ ಎಲ್ಲಾ ಭಾಗದಲ್ಲೂ ಸಕ್ರಿಯವಾಗಿದ್ದೇವೆ, ಎಂದು ಅವರು ವಿವರಿಸಿದರು.ಇದನ್ನು ಓದಿ: ಸಿಎಂ ಡಿನ್ನರ್‌ ಮೀಟಿಂಗ್: 12ಕ್ಕೂ ಹೆಚ್ಚು ಸಚಿವರಿಗೆ ಕೊಕ್? ಮತ್ಯಾರಿಗೆ ಲಕ್?

 

ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ, ಸೇನೆ ಮತ್ತು ಬಿಎಸ್‌ಎಫ್ ಜಂಟಿಯಾಗಿ ಗಡಿಯಲ್ಲಿ ಭದ್ರತೆ ಬಿಗಿಗೊಳಿಸಿವೆ. ಎರಡೂ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿದ್ದು, ಜಂಟಿ ಕಣ್ಗಾವಲು ನಿಯೋಜಿಸಲಾಗಿದೆ. ಬಿಎಸ್‌ಎಫ್ ಪ್ರಕಾರ, ನಮ್ಮ ಸೈನಿಕರ ಕಣ್ತಪ್ಪಿಸಿ ಒಳನುಸುಳಲು ಯಾರಿಗೂ ಸಾಧ್ಯವಿಲ್ಲ.