Skip to main content
ವಿಡಿಯೋ
1/3
cinema

ಬಿಗ್ ಬಾಸ್ ಕನ್ನಡ 12: ಎಲಿಮಿನೇಶನ್‌ಗೆ ಬದಲಾಗಿ ಅಚ್ಚರಿ ತಿರುವು.. ಮೊದಲ ಫೈನಲಿಸ್ಟ್‌ಗಳು ಪ್ರಕಟ!

By Ram Chethan
ಬಿಗ್ ಬಾಸ್ ಕನ್ನಡ 12: ಎಲಿಮಿನೇಶನ್‌ಗೆ ಬದಲಾಗಿ ಅಚ್ಚರಿ ತಿರುವು.. ಮೊದಲ ಫೈನಲಿಸ್ಟ್‌ಗಳು ಪ್ರಕಟ!

ಈ ವಾರ ‘ಬಿಗ್ ಬಾಸ್ ಕನ್ನಡ 12’ ಮನೆಯಲ್ಲಿ ಎಲಿಮಿನೇಶನ್ ಇಲ್ಲ! ಕಿಚ್ಚ ಸುದೀಪ್ ಘೋಷಣೆಯ ಪ್ರಕಾರ ಮಾಳು ನಿಪನಾಳ ಮತ್ತು ಸ್ಪಂದನಾ ಮೊದಲ ಫೈನಲ್ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ. ಶೋಗೆ ಅಡ್ಡಿಯಾದ ಸವಾಲಿನ ಮಧ್ಯೆಯೇ ಪ್ರೇಕ್ಷಕರಿಗೆ ಅಚ್ಚರಿ ಉಡುಗೊರೆ ದೊರೆಯಿತು.

ಪ್ರತಿ ಭಾನುವಾರ ಬಂತೆಂದರೆ 'ಬಿಗ್ ಬಾಸ್ ಕನ್ನಡ' ಸ್ಪರ್ಧಿಗಳ ಹೃದಯ ಬಡಿತ ಹೆಚ್ಚಾಗುತ್ತದೆ. ನಾಮಿನೇಟ್ ಆದವರಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ದಿನವದು. ಮೊದಲ ವಾರ ಬಾಡಿ ಬಿಲ್ಡರ್ ಕರಿಬಸಪ್ಪ ಮತ್ತು ಆರ್.ಜೆ. ಅಮಿತ್ ಹೊರಬಿದ್ದ ನಂತರ, ಎರಡನೇ ವಾರ ಅನಿರೀಕ್ಷಿತ ತಿರುವು ಎದುರಾಯಿತು.

ಯಾರೂ ಕೂಡ ಈ ವಾರ ಮನೆಯಿಂದ ಹೊರಹೋಗುವುದಿಲ್ಲ ಎಂದು ಕಿಚ್ಚ ಸುದೀಪ್ ಸಂಚಿಕೆಯ ಕೊನೆಯಲ್ಲಿ ಘೋಷಿಸಿದರು. ಇದಲ್ಲದೆ, ಮಾಳು ನಿಪನಾಳ ಮತ್ತು ಸ್ಪಂದನಾ ಮೊದಲ ಫೈನಲ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು. ಈ ವಾರ ಅಶ್ವಿನಿ ಎಸ್.ಎನ್., ಅಭಿಷೇಕ್, ಜಾಹ್ನವಿ, ಸ್ಪಂದನಾ, ಮಾಳು ನಿಪನಾಳ, ರಾಶಿಕಾ ಶೆಟ್ಟಿ, ಮಂಜು ಭಾಷಿಣಿ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮತ್ತು ಧನುಶ್ ನಾಮಿನೇಟ್ ಆಗಿದ್ದರು.TIMEX Jet Mechanical Automatic Watch for Men with Round Dial & Water Resistant Man's Wrist Watches

ಇವರಲ್ಲಿ ಒಬ್ಬರು ಅಥವಾ ಇಬ್ಬರು ಎಲಿಮಿನೇಟ್ ಆಗುತ್ತಾರೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು. ಸುದೀಪ್ ಒಬ್ಬೊಬ್ಬರನ್ನಾಗಿ ಸೇವ್ ಮಾಡುತ್ತಾ ಬಂದರು. ಅಂತಿಮವಾಗಿ ಮಾಳು ನಿಪನಾಳ ಮತ್ತು ಸ್ಪಂದನಾ ಮಾತ್ರ ಉಳಿದುಕೊಂಡಾಗ, ಅವರೇ ಎಲಿಮಿನೇಟ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಸುದೀಪ್ ಅನಿರೀಕ್ಷಿತ ತಿರುವನ್ನು ನೀಡಿದರು.

ಅಸಲಿಗೆ, ಮಾಳು ನಿಪನಾಳ ಮತ್ತು ಸ್ಪಂದನಾ ಎಲಿಮಿನೇಟ್ ಆಗುತ್ತಿಲ್ಲ, ಬದಲಿಗೆ ಅವರು ಮೊದಲ ಫೈನಲ್‌ನ ಫೈನಲಿಸ್ಟ್‌ಗಳಾಗಿದ್ದಾರೆ ಎಂದು ಸುದೀಪ್ ಸ್ಪಷ್ಟಪಡಿಸಿದರು. ಈ ವಾರ ನಾಮಿನೇಷನ್‌ಗಳಿಗೆ ಮತದಾನ ನಡೆದಿದೆ ಎಂದು ಸ್ಪರ್ಧಿಗಳು ಭಾವಿಸಿದ್ದರು. ಆದರೆ, ಕಾರ್ಯಕ್ರಮದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂಬುದಕ್ಕಾಗಿ ಮತದಾನ ನಡೆದಿತ್ತು.ರಿಷಬ್ ಶೆಟ್ಟಿಯ ‘ಕಾಂತಾರ: ಚಾಪ್ಟರ್ 1’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬೇಟೆ..ಇಲ್ಲಿವರೆಗೂ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

ಹೆಚ್ಚು ಮತಗಳನ್ನು ಪಡೆದ ಮಾಳು ನಿಪನಾಳ ಮತ್ತು ಸ್ಪಂದನಾ ಫೈನಲಿಸ್ಟ್‌ಗಳಾಗಿದ್ದಾರೆ. ಇನ್ನುಳಿದವರು ಮುಂದಿನ ವಾರ ತಮ್ಮ ಅಸ್ತಿತ್ವಕ್ಕಾಗಿ ಹೆಚ್ಚು ಶ್ರಮಿಸಬೇಕಾಗಿದೆ. ಈ ನಡುವೆ, ಕಳೆದ ವಾರ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ದೊಡ್ಡ ಸವಾಲು ಎದುರಾಗಿತ್ತು. ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಆವರಣದಲ್ಲಿ ಕೆಲವು ನಿಯಮ ಉಲ್ಲಂಘನೆ ಆಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಟುಡಿಯೋಸ್‌ಗೆ ಬೀಗ ಜಡಿಯಲಾಗಿತ್ತು.

ಇದರಿಂದಾಗಿ ಎರಡು ದಿನಗಳ ಕಾಲ ಎಲ್ಲ ಸ್ಪರ್ಧಿಗಳು ದೊಡ್ಮನೆಯಿಂದ ಹೊರಗುಳಿಯಬೇಕಾಯಿತು. ಈ ಕಾರಣದಿಂದಾಗಿ, ಈ ವಾರ ಸ್ಪರ್ಧಿಗಳಿಗೆ ತಮ್ಮ ಪ್ರದರ್ಶನ ನೀಡಲು ಸರಿಯಾಗಿ ಸಮಯ ಸಿಗಲಿಲ್ಲ. ಹಾಗಾಗಿ, ಈ ವಾರ ಎಲಿಮಿನೇಷನ್‌ನಿಂದ ವಿನಾಯಿತಿ ನೀಡಲಾಗಿದೆ ಎಂದು ಸುದೀಪ್ ವಿವರಿಸಿದರು. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.