Skip to main content
ವಿಡಿಯೋ
1/2
politics

ಬೆಂಗಳೂರಿನ ರಸ್ತೆ ಗುಂಡಿ, ಕಸ ನೋಡಿ ಶಾಕ್‌ ಆದ ಚೀನಾ ಉದ್ಯಮಿ : ಸರ್ಕಾರಕ್ಕೆ ಈಗಲಾದರೂ ಬುದ್ದಿ ಬರುವುದೆ?

By Vinutha U
ಬೆಂಗಳೂರಿನ ರಸ್ತೆ ಗುಂಡಿ, ಕಸ ನೋಡಿ ಶಾಕ್‌ ಆದ ಚೀನಾ ಉದ್ಯಮಿ : ಸರ್ಕಾರಕ್ಕೆ ಈಗಲಾದರೂ ಬುದ್ದಿ ಬರುವುದೆ?

ಇದರಿಂದ ಅದೆಷ್ಟೋ ಜನರು ಗಾಯಗೊಂಡಿದ್ದಾರೆ ಮತ್ತು ಇನ್ನು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಕಸದ ರಾಶಿ ಎಲ್ಲೆಂದರಲ್ಲಿ ಮನೆಮಾಡಿವೆ, ಆ ಕಸದ ರಾಶಿಯಿಂದ ನಾನಾ ರೀತಿಯ ಖಾಯಿಲೆಗಳು ಉತ್ಪತ್ತಿಯಾಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ರಸ್ತೆ ಗುಂಡಿಗಳು ಹಳ್ಳಬಿದ್ದಿರುವುದು ಸರ್ವೇ ಸಾಮಾನ್ಯವಾಗಿದೆ. ಯೆಲ್ಲಿ ನೋಡಿದರೂ ಕೂಡ ಹಳ್ಳ ಬಿದ್ದಿರುವ ಗುಂಡಿಗಳು, ಹಾಳಾದ ರಸ್ತೆಗಳು ಇವೆಲ್ಲವೂ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನರು ಗಾಯಗೊಂಡಿದ್ದಾರೆ ಮತ್ತು ಇನ್ನು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಕಸದ ರಾಶಿ ಎಲ್ಲೆಂದರಲ್ಲಿ ಮನೆಮಾಡಿವೆ, ಆ ಕಸದ ರಾಶಿಯಿಂದ ನಾನಾ ರೀತಿಯ ಖಾಯಿಲೆಗಳು ಉತ್ಪತ್ತಿಯಾಗುತ್ತಿವೆ.

 

ಚೀನಾದಿಂದ ಬಯೋಕಾನ್‌ ಪಾರ್ಕ್‌ ಗೆ ಬಂದಿದ್ದ ಉದ್ಯಮಿಯು ಬೆಂಗಳೂರಿನ ಇತರೆ ಕೆಲವು ಜಾಗಗಳನ್ನು ನೋಡಿ ಬೇಸರಗೊಡಿದ್ದಾರೆ, ಇದರ ಬಗ್ಗೆ ಚೀನಾ ದೇಶದ ಒಬ್ಬ ಮಹಿಳೆ ಸರ್ಕಾರದ ವಿರುದ್ದ ಟ್ವಿಟರ್ ನಲ್ಲಿ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಯಾಕೆ ಬೆಂಗಳೂರಿನ ರಸ್ತೆಗಳು ಹಾಳಾಗಿವೆ..? ಕಂಡಕಂಡಲ್ಲಿಕಸದ ರಾಶಿಯಾಕೀದೆ..? ಇಲ್ಲಿನ ಸರ್ಕಾರ ಹೂಡಿಕೆದಾರರಿಗೆ ಬೆಂಬಲ ನೀಡುವುದಿಲ್ಲವೇ.?

ಈ ರೀತಿಯಾಗಿ ಸರ್ಕಾರದ ವಿರುದ್ದ ಕಿರಣ್‌ ಮಜುಂದಾರ್‌ ಶಾ ಪೋಸ್ಟ್‌ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಚೀನಾ ಉದ್ಯಮಿ ಅಭಿಪ್ರಾಯವನ್ನ ಪೋಸ್ಟ್ ಮಾಡಿ ಸಿಎಂ, ಡಿಸಿಎಂ, ಪ್ರಿಯಾಂಕ್ ಖರ್ಗೆಗೆ ಟ್ಯಾಗ್ ಮಾಡಿದ ಕಿರಣ್.

ಸರ್ಕಾರ ಇಗಲಾದರೂ ಬುದ್ದಿ ಕಲಿಯುತ್ತದೆಯೇ ಕಾದು ನೋಡಬೇಕಿದೆ.