ಅಮೆರಿಕ: ಭಾರತ ಮೂಲದ ಅಮೆರಿಕದ ವಿದೇಶಾಂಗ ನೀತಿ ಸಲಹೆಗಾರ ಅಶ್ಲಿ ಟೆಲಿಸ್ ಅವರನ್ನು 1,000ಕ್ಕೂ ಹೆಚ್ಚು "ಟಾಪ್ ಸೀಕ್ರೆಟ್" ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಕ್ಕಾಗಿ ಬಂಧಿಸಲಾಗಿದೆ. ಚೀನಾ ಅಧಿಕಾರಿಗಳೊಂದಿಗೆ ಕೆಲ ಬಾರಿ ಭೇಟಿ ನಡೆಸಿದ್ದಾರೆಯೆಂಬ ಆರೋಪವಿದ್ದು, ಭಾರತ-ಅಮೆರಿಕಾ ಸಂಬಂಧಗಳಲ್ಲಿಯೂ ಕಾಳಜಿ ಮೂಡಿಸಿದೆ.
ಅಮೆರಿಕದ ವಿದೇಶಾಂಗ ನೀತಿ ಸಲಹೆಗಾರ ಹಾಗೂ ಭಾರತ ಮೂಲದ ಅಶ್ಲಿ ಟೆಲಿಸ್ ಅವರನ್ನು ಅಮೆರಿಕದ ಫೆಡರಲ್ ತನಿಖಾ ಅಧಿಕಾರಿಗಳು ಬಂಧಿಸಿದ್ದಾರೆ. ರಾಷ್ಟ್ರದ ರಕ್ಷಣಾ ಸಂಬಂಧಿತ ರಹಸ್ಯ ದಾಖಲೆಗಳನ್ನು ಅಕ್ರಮವಾಗಿ ತಮ್ಮ ಬಳಿಯಲ್ಲಿ ಇಟ್ಟುಕೊಂಡಿದ್ದಾರೆಯೆಂಬ ಹಾಗೂ ಚೀನಾ ಅಧಿಕಾರಿಗಳೊಂದಿಗೆ ಹಲವು ಬಾರಿ ಭೇಟಿಯಾದಾರೆಯೆಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಇದನ್ನು ಓದಿ: ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್‌ಗಳ ಜಯ: ಸರಣಿಯನ್ನು 2-0 ಕ್ಲೀನ್ ಸ್ವೀಪ್ ಮಾಡಿದ ಭಾರತ
2001ರಿಂದ ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದ 64 ವರ್ಷದ ಟೆಲಿಸ್ ಅವರ ವಿರುದ್ಧ ಅಕ್ಟೋಬರ್ 13ರಂದು ವರ್ಜೀನಿಯಾ ನ್ಯಾಯಾಲಯದಲ್ಲಿ ಆರೋಪ ಪತ್ರ ದಾಖಲಿಸಲಾಗಿದೆ ಎಂದು ವರದಿ ಮಾಡಿದೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
ಅಮೆರಿಕದ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ್ದಕ್ಕಾಗಿ ಅವರ ವಿರುದ್ಧ ಫೆಡರಲ್ ಕಾನೂನು ಉಲ್ಲಂಘನೆಯ ಆರೋಪ ಹೊರಿಸಲಾಗಿದೆ. ಭಾರತದಲ್ಲಿ ಜನಿಸಿದರೂ, ಬಳಿಕ ಅಮೆರಿಕದ ಪೌರತ್ವ ಪಡೆದಿರುವ ಟೆಲಿಸ್ ಅವರು ಭಾರತ-ಅಮೆರಿಕಾ ನಾಗರಿಕ ಅಣು ಒಪ್ಪಂದದ ಮಾತುಕತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂಬುದು ತಿಳಿದಿದೆ. ಫೆಡರಲ್ ತನಿಖಾ ತಂಡವು ಅಕ್ಟೋಬರ್ 11ರಂದು ವರ್ಜೀನಿಯಾದ ವಿಯೆನ್ನಾದಲ್ಲಿರುವ ಅವರ ನಿವಾಸದಲ್ಲಿ ಶೋಧ ನಡೆಸಿ, ಸುಮಾರು 1,000ಕ್ಕೂ ಹೆಚ್ಚು ರಹಸ್ಯ ಅಥವಾ ಅತ್ಯಂತ ರಹಸ್ಯ ಎಂದು ಗುರುತಿಸಲ್ಪಟ್ಟ ದಾಖಲೆಗಳನ್ನು ಪತ್ತೆಹಚ್ಚಿದೆ ಎಂದು ವರದಿ ತಿಳಿಸಿದೆ.
ಈ ಪ್ರಕರಣ ಈಗ ಅಮೆರಿಕದ ರಕ್ಷಣಾ ಭದ್ರತಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಭಾರತ-ಅಮೆರಿಕಾ ರಾಜತಾಂತ್ರಿಕ ವಲಯದಲ್ಲಿಯೂ ಆತಂಕ ಮೂಡಿಸಿದೆ.