ಗೋವಾದ ಕೃಷಿ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ರವಿ ನಾಯ್ಕ ಅವರು ಬುಧವಾರ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ. ಪಣಜಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ತಮ್ಮ ನಿವಾಸದಲ್ಲಿ ಅವರಿಗೆ ಹೃದಯಾಘಾತ ಉಂಟಾಗಿದ್ದು, ತಕ್ಷಣ ಪೊಂಡಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರ ಪ್ರಯತ್ನಗಳೂ ಫಲಿಸದೆ, ರಾತ್ರಿ 1 ಗಂಟೆ ವೇಳೆಗೆ ಅವರು ಕೊನೆಯುಸಿರೆಳೆದರು.ಇದನ್ನೂ ಓದಿ: ರಾಜಸ್ಥಾನದ ಜೈಸಲ್ಮೇರ್-ಜೋಧ್‌ಪುರ ಹೆದ್ದಾರಿಯಲ್ಲಿ ಬಸ್ಸಿಗೆ ಬೆಂಕಿ: ಕನಿಷ್ಟ 20 ಸಾ*ವು
ಮಾಜಿ ಮುಖ್ಯಮಂತ್ರಿ ಅವರ ಪಾರ್ಥಿವ ದೇಹವನ್ನು ಅಂತಿಮ ದರ್ಶನಕ್ಕಾಗಿ ಸ್ವಗೃಹಕ್ಕೆ ತರಲಾಗಿದ್ದು, ಬುಧವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರವಿ ನಾಯ್ಕ ಅವರ ನಿಧನಕ್ಕೆ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. “ರವಿ ನಾಯ್ಕ ಅವರು ಗೋವಾದ ರಾಜಕೀಯಕ್ಕೆ ಕೊಡುಗೆ ನೀಡಿದ ಪ್ರಾಮಾಣಿಕ, ಸರಳ ಹಾಗೂ ಜನಪರ ನಾಯಕರು. ಅವರ ಸೇವೆಯನ್ನು ಗೋವಾ ಎಂದಿಗೂ ಮರೆಯುವುದಿಲ್ಲ,” ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.ಇದನ್ನೂ ಓದಿ: ಮಾಜಿ ಕಾಂಗ್ರೆಸ್ ಶಾಸಕ ಗೋಪಾಲ ಭಂಡಾರಿ ಪುತ್ರ ಆತ್ಮಹತ್ಯೆ..!
ರಾಜಕೀಯ ಕ್ಷೇತ್ರದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಸಕ್ರಿಯರಾಗಿದ್ದ ರವಿ ನಾಯ್ಕ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಏಳು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. 1984ರಲ್ಲಿ ಪೊಂಡಾ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಅವರು, ಆರು ಬಾರಿ ಪೊಂಡಾ ಮತ್ತು ಒಂದು ಬಾರಿ ಮಾರ್ಕೈಮ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.. ಅವರ ನಿಧನಕ್ಕೆ ಮೋದಿ ಸೇರಿ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.SIRIL Women's Chiffon Sequence Embroidery Lace Saree with Unstitched Blouse Piece