Skip to main content
ವಿಡಿಯೋ
1/3
politics

ರಸ್ತೆ ಗುಂಡಿ, ಕಸದ ಬಗ್ಗೆ ಟ್ವೀಟ್‌ ಮಾಡಿದ್ದ ಕಿರಣ್ ಮಜಮ್ದಾರ್ ಶಾಗೆ ಸಚಿವ ಸಂತೋಷ್ ಲಾಡ್ ತಿರುಗೇಟು

By Gireesh Vasishta
ರಸ್ತೆ ಗುಂಡಿ, ಕಸದ ಬಗ್ಗೆ ಟ್ವೀಟ್‌ ಮಾಡಿದ್ದ ಕಿರಣ್ ಮಜಮ್ದಾರ್ ಶಾಗೆ ಸಚಿವ ಸಂತೋಷ್ ಲಾಡ್ ತಿರುಗೇಟು

ಅದಕ್ಕೆ ಪ್ರತಿಕ್ರಿಯಿಸಿದ ಸಂತೋಷ್‌ ಲಾಡ್‌ ಅವರು ನಮ್ಮ ಸರ್ಕಾರ ಪ್ರಜಾಪ್ರಭುತ್ವ ಸರ್ಕಾರ ಯಾರು ಬೇಕಾದರೂ ನಮ್ಮನ್ನು ಕೇಳಬಹುದು, ಆದರೆ ಕಿರಣ್ ಮಜುಮ್ದಾರ್ ಶಾ ಅವರನ್ನು ಕೇಂದ್ರ ಸರ್ಕಾರದ ಜಿಎಸ್‌ಟಿ ಹಣದ ಬಗ್ಗೆ ಕೇಳಲು ಟ್ವೀಟ್ ಮಾಡಿ ಎಂದು ಹೇಳಿ, ನೋಡೋಣ ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು: ಮೊನ್ನೆ ಬಿಸಿನೆಸ್ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದ ಸಮಯದಲ್ಲಿ ಉದ್ಯಮಿ ಕಿರಣ್ ಮಜಮ್ದಾರ್ ಶಾ ಅವರು ಬೆಂಗಳೂರಿನ ರಸ್ತೆ ಮತ್ತು ಗಾರ್ಬೇಜ್ ಅಥವಾ ತ್ಯಾಜ್ಯ ವ್ಯವಸ್ಥೆಯನ್ನು ಕಂಡು ತಮ್ಮ ಎಕ್ಸ್‌ ಖಾತೆಯ ಮೂಲಕ ಅಸಹನೆಯನ್ನು ಹೊರಹಾಕಿದ್ದರು.

ಇದಕ್ಕೆ ಸಂಬಂಧಿಸಿದಂತೆ ಟಿವಿ ಮಾಧ್ಯಮಗಳು ಸಹ ಅವರ ಟ್ವೀಟನ್ನ ಬಳಸಿ ಸಾಕಷ್ಟು ವರದಿಯನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಾತನಾಡುತ್ತಿದ್ದ ಸಮಯದಲ್ಲಿ ಪತ್ರಕರ್ತರೊಬ್ಬರು ಕಿರಣ್ ಮಜಮ್ದಾರ್‌ ಶಾ ಅವರ ಟ್ವೀಟ್ ಬಗ್ಗೆ ಕೇಳಿದ್ದಾರೆ.ಇದನ್ನು ಓದಿ: ₹1.45 ಕೋಟಿ ಹವಾಲಾ ಹಣ ಲೂಟಿ ಆರೋಪ, 11 ಪೊಲೀಸರ ಮೇಲೆ ಪ್ರಕರಣ, 5 ಜನರ ಬಂಧನ

 ಅದಕ್ಕೆ ಪ್ರತಿಕ್ರಿಯಿಸಿದ ಸಂತೋಷ್‌ ಲಾಡ್‌ ಅವರು ನಮ್ಮ ಸರ್ಕಾರ ಪ್ರಜಾಪ್ರಭುತ್ವ ಸರ್ಕಾರ ಯಾರು ಬೇಕಾದರೂ ನಮ್ಮನ್ನು ಕೇಳಬಹುದು, ಆದರೆ ಕಿರಣ್ ಮಜುಮ್ದಾರ್ ಶಾ ಅವರನ್ನು ಕೇಂದ್ರ ಸರ್ಕಾರದ ಜಿ

ಎಸ್ಟಿ ಹಣದ ಬಗ್ಗೆ ಕೇಳಲು ಟ್ವೀಟ್ ಮಾಡಿ ಎಂದು ಹೇಳಿ, ನೋಡೋಣ ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆ ಮತ್ತು ರಸ್ತೆ ಗುಂಡಿಗಳು ಮತ್ತು ತ್ಯಾಜ್ಯ ನಿರ್ವಹಣೆಯ ಸಮರ್ಪಕ ಯೋಜನೆಗಳು ಸದ್ಯಕ್ಕೆ ಆಗುವಂತೆ ಕಾಣುತ್ತಿಲ್ಲ .ಹಣವಿರುವವರೇನೊ ನಾಲ್ಕು ಚಕ್ರದ ವಾಹನದಲ್ಲಿ ಎಸಿಯಲ್ಲಿ ಓಡಾಡುತ್ತಾರೆ. ಆದರೆ ಬಡವರ ಬದುಕು ಮೂರಾಬಟ್ಟೆಯಾಗಿದೆ. ಇದರ ಬಗ್ಗೆ ಯಾವಾಗ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಯೋ ಕಾದು ನೋಡಬೇಕಿದೆ. WEET Cotton T-Shirt and Pyjama Set for Men,Night Wear for Men,Men's Pyjama Set 122


ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿಯಲ್ಲಿ ರಸ್ತೆಗಳನ್ನು ಸರಿಪಡಿಸಿ ಗುಂಡಿಗಳನ್ನು ಮುಚ್ಚುತ್ತಿದ್ದೇವೆ ಎಂದು ಹೇಳಿರುವ ಉಪಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಅವರು ರಸ್ತೆಗಳಿಗೆ ಇಳಿದು ನೋಡುತ್ತಿದ್ದರಾಯೆ, ಇಲ್ಲವೆ ಎಂಬುದೇ ದೊಡ್ಡ ಪ್ರಶ್ನೆಯಾದಂತೆ ಕಾಣುತ್ತಿದೆ. ಎಲ್ಲಿ ನೋಡಿದರು ಗುಂಡಿಗಳಿವೆ. ಅದಕ್ಕೆ ಉತ್ತರ ಸಿಗುವುದು ಕಷ್ಟವಾಗಿದೆ.