Skip to main content
ವಿಡಿಯೋ
1/3
cinema

ʼಕೆಜಿಎಫ್‌ 3ʼ ಬರ್ತಾ ಇದ್ಯಂತೆ! ನಿಜ ಏನು? ಶಾಕ್‌ ಕೊಟ್ಟ ಪ್ರಶಾಂತ್‌ ನೀಲ್‌ ಪೋಸ್ಟ್!

By Ram Chethan
ʼಕೆಜಿಎಫ್‌ 3ʼ ಬರ್ತಾ ಇದ್ಯಂತೆ! ನಿಜ ಏನು? ಶಾಕ್‌ ಕೊಟ್ಟ ಪ್ರಶಾಂತ್‌ ನೀಲ್‌ ಪೋಸ್ಟ್!

‘ಕೆಜಿಎಫ್ 3’ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್‌ ಬಹುಮಟ್ಟಿಗೆ ಫೇಕ್ ಎಂದು ದೃಢಪಟ್ಟಿದೆ. ಪ್ರಶಾಂತ್ ನೀಲ್ ಅಥವಾ ಹೋಂಬಾಳೆ ಫಿಲ್ಮ್ಸ್ ಅಧಿಕೃತ ಪ್ರಕಟಣೆ ನೀಡುವವರೆಗೂ, ಎಲ್ಲ ಅಪ್‌ಡೇಟ್ಗಳನ್ನು ವಾಸ್ತವ ಎಂದು ಭಾವಿಸಬೇಡಿ.

‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್ 14ರಂದು ತೆರೆಕಂಡು ದಾಖಲೆ ಬರೆದಿತ್ತು. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ‘ಪಾರ್ಟ್ 3’ ಕುರಿತು ಸೂಚನೆ ನೀಡಲಾಗಿದ್ದರಿಂದ ಮುಂದಿನ ಭಾಗದ ಬಗ್ಗೆ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿತ್ತು. ಆದರೆ, ಅದಾದ ನಂತರದಿಂದ ‘ಕೆಜಿಎಫ್ 3’ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದೀಗ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ವೈರಲ್ ಆಗಿದೆ. ಪ್ರಶಾಂತ್ ನೀಲ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಖಾಲಿ ಕಾಗದದ ಮೇಲೆ ‘ಕೆಜಿಎಫ್ 3’ ಎಂದು ಬರೆದಿರುವ ಚಿತ್ರವನ್ನು ಹಂಚಲಾಗಿದೆ. ಅದಕ್ಕೆ “KGF 3 Final Draft” ಎಂಬ ಶೀರ್ಷಿಕೆ ನೀಡಿ, “Are you waiting?” ಎಂಬ ಪ್ರಶ್ನೆ ಹಾಕಲಾಗಿದೆ. ಈ ಪೋಸ್ಟ್‌ ವೈರಲ್ ಆದ ನಂತರ ಅಭಿಮಾನಿಗಳು ಸಿನಿಮಾ ಕುರಿತು ಹೊಸ ಅಪ್‌ಡೇಟ್ ಬಂದಿದೆ ಎಂದು ಭಾವಿಸಿದರು. ಆದರೆ, ಇದರ ಹಿಂದೆ ಇರುವ ಸತ್ಯ ಬೇರೆ.ESBEDA Glitter Top Handle Handbag | Ladies Purse | Stylish Handbag | Gift Bag For Women

ಆ ಖಾತೆ ಪ್ರಶಾಂತ್ ನೀಲ್ ಅವರ ಅಧಿಕೃತ ಖಾತೆಯೇ ಅಲ್ಲ. ನಿರ್ದೇಶಕನ ಹೆಸರಿನಲ್ಲಿ ತೆರೆದ ನಕಲಿ ಖಾತೆಯಿಂದ ಆ ಚಿತ್ರವನ್ನು ಹಂಚಲಾಗಿದೆ ಎಂದು ದೃಢಪಟ್ಟಿದೆ. ಹೀಗಾಗಿ ‘ಕೆಜಿಎಫ್ 3’ ಕುರಿತು ಯಾವುದೇ ಅಧಿಕೃತ ಘೋಷಣೆ ಅಥವಾ ದೃಢವಾದ ಮಾಹಿತಿ ಇನ್ನೂ ಬಂದಿಲ್ಲ.

ನಿರ್ದೇಶಕ ಪ್ರಶಾಂತ್ ನೀಲ್ ಮುಂಚೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು. ತಮ್ಮ ಸಿನಿಮಾಗಳ ಕುರಿತು ಸಮಯಾನುಸಾರ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಆದರೆ ಅವರು ತೆಲುಗು ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ, ಕೆಲವು ಬಳಕೆದಾರರಿಂದ ಬಂದ ನಕಾರಾತ್ಮಕ ಕಾಮೆಂಟ್‌ಗಳು ಮತ್ತು ಹೇಟ್‌ ಮೆಸೇಜ್‌ಗಳ ಕಾರಣದಿಂದ ಸಾಮಾಜಿಕ ಮಾಧ್ಯಮದಿಂದ ದೂರ ಉಳಿದರು.ಬಿಗ್ ಬಾಸ್ ಕನ್ನಡ-12ನಲ್ಲಿ ಫಿನಾಲೆ ಅವಕಾಶ ಕಳೆದುಕೊಂಡ್ರಾ ಕಾವ್ಯಾ? ಅಷ್ಟಕ್ಕೂ ಎಡವಿದ್ದೆಲ್ಲಿ?

ಇದರಿಂದಾಗಿ ಈಗ ‘ಕೆಜಿಎಫ್ 3’ ಕುರಿತಂತೆ ಹರಿದಾಡುತ್ತಿರುವ ಎಲ್ಲಾ ಪೋಸ್ಟ್‌ಗಳು ಅಧಿಕೃತವಾಗಿಲ್ಲ ಎಂಬುದನ್ನು ಅಭಿಮಾನಿಗಳು ಗಮನದಲ್ಲಿರಿಸಬೇಕು. ‘ಹೋಂಬಾಳೆ ಫಿಲ್ಮ್ಸ್’ ಮತ್ತು ನಿರ್ದೇಶಕರಿಂದ ಅಧಿಕೃತ ಪ್ರಕಟಣೆ ಬಂದಾಗ ಮಾತ್ರ ಚಿತ್ರದ ನಿಖರ ಮಾಹಿತಿ ತಿಳಿಯಲಿದೆ.