Skip to main content
ವಿಡಿಯೋ
1/3
politics

ಮಲ್ಲಿಕಾರ್ಜುನ್‌ ಖರ್ಗೆ ರಾಜ್ಯ ರಾಜಕಾರಣಕ್ಕೆ?; ಬಿಜೆಪಿಯವರು ನವೆಂಬರ್‌ ಕ್ರಾಂತಿಯ ಜಪ ಮಾಡಲಿ! - ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ

By Shravanthi R
ಮಲ್ಲಿಕಾರ್ಜುನ್‌ ಖರ್ಗೆ ರಾಜ್ಯ ರಾಜಕಾರಣಕ್ಕೆ?; ಬಿಜೆಪಿಯವರು ನವೆಂಬರ್‌ ಕ್ರಾಂತಿಯ ಜಪ ಮಾಡಲಿ! - ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಇತ್ತೀಚೆಗಿನ ಬೆಳವಣಿಗೆಗಳ ಕುರಿತಾಗಿ ಗೃಹ ಸಚಿವ ಜಿ. ಪರಮೇಶ್ವರ್‌ ಅವರು ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ರಾಜಕೀಯ ಪಾಳಯದಲ್ಲಿ ಚರ್ಚೆಗೀಡು ಮಾಡಿರುವ ನವೆಂಬರ್‌ ಕ್ರಾಂತಿ ವಿಚಾರವಾಗಿ ಗೃಹ ಸಚಿವರಾದ ಜಿ. ಪರಮೇಶ್ವರ್‌ ಅವರು ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಬಿಜೆಪಿಯವರು ನವೆಂಬರ್‌ ಕ್ರಾಂತಿಯ ಜಪ ಮಾಡಲಿ, ಆದರೆ ನಮ್ಮಲ್ಲಿ ಅಂತಹ ಬೆಳವಣಿಗೆಗಳು ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 

ನವೆಂಬರ್‌ ಇನ್ನೇನು ಸಮೀಪಿಸುತ್ತಿರುವ ನಡುವೆ ಸಚಿವ ಸಂಪುಟ ಪುನರ್‌ರಚನೆ ಸದ್ದು ಜೋರಾಗಿರುವ ಮ‍ಧ್ಯೆ, ರಾಜಕೀಯ ಕೋಲಾಹಲಗಳು ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಈ ಮ‍ಧ್ಯೆ ಎಲ್ಲದಕ್ಕೂ ಸಿದ್ದರಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. 

ಇದರ ಸಲುವಾಗಿ ಬಿಜೆಪಿಯಲ್ಲೂ ನವೆಂಬರ್‌ ಕ್ರಾಂತಿ ಕೂಗು ಕೇಳುತ್ತಲಿದ್ದು, ಇದಕ್ಕೆ ಸಂಬಂಧಿಸಿದಂತೆ ಉತ್ತರವಾಗಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು ನವೆಂಬರ್‌ ಕ್ರಾಂತಿಯೆಂದು ಅವರು ಜಪ ಮಾಡುವುದಾದರೆ ಮಾಡಲಿ. ನಮ್ಮಲ್ಲಿ ಆ ರೀತಿಯ ಬೆಳವಣಿಗೆಗಳೇನು ಆಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. realme 14x 5G Smartphone 8+128GB Golden Glow, 6.67-inch Screen, 120Hz Display, 6000mAh Battery, 80MP, MediaTek Dimensity 6300, ArmorShell Protection, IP69

ರಾಜ್ಯ ರಾಜಕೀಯಕ್ಕೆ ಮಲ್ಲಿಕಾರ್ಜುನ್‌ ಖರ್ಗೆ ಎಂಟ್ರಿ?

ಎಐಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಬರ್ತಾರಾ? ಎಂಬುದರ ಬಗ್ಗೆ ಚರ್ಚೆಯಾಗುತ್ತಿದ್ದು, ಅವರು ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬರುವುದಾದರೆ ಸ್ವಾಗತ ಕೋರಲಿದ್ದೇವೆ. ಅವರು ನಮ್ಮ ದೊಡ್ಡ ನಾಯಕರು ಎಂದಿದ್ದಾರೆ.  

ಖರ್ಗೆಗೆ ಬೆದರಿಕೆ ಕರೆ ಕುರಿತು -

ಆರ್‌ಎಸ್‌ಎಸ್‌ ನಿಷೇಧ ವಿವಾದದ ಸಲುವಾಗಿ ಅವರಿಗೆ ಬೆದರಿಕೆ ಕರೆಗಳು ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ಬೆದರಿಕೆ ಹಾಕಿದವರ ಮಾಹಿತಿ ಪತ್ತೆ ಹಚ್ಚುತ್ತಿದ್ದೇವೆ. ಅಂಥಹವರ ಬಗ್ಗೆ ಕ್ರಮ ಕೈಗೊಳ್ಳುವವರೆಗೆ ಬೆದರಿಕೆ ಕರೆಗಳ ಪ್ರಕರಣ ನಿಲ್ಲುವುದಿಲ್ಲ. ಇದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಪತ್ರದ ಕುರಿತು ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆ. ಈ ಬಗ್ಗೆ ನಾನು ನಿರ್ಧಾರ ಹೇಳಲು ಬರುವುದಿಲ್ಲ ಎಂದರು ಎನ್ನಲಾಗಿದೆ. ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ: ಸಿಎಂ ವಿವೇಚನೆಗೆ ಬಿಟ್ಟ ವಿಷಯ – ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆ..!