Skip to main content
ವಿಡಿಯೋ
1/3
cinema

ತಮಿಳುನಾಡಲ್ಲಿ ಹಿಂದಿ ಸಿನಿಮಾ ಮತ್ತು ಹಿಂದಿ ಹಾಡು ನಿಷೇಧ...ಸ್ಟಾಲಿನ್‌ ಪ್ಲಾನ್‌ ಏನು?

By Ram Chethan
ತಮಿಳುನಾಡಲ್ಲಿ ಹಿಂದಿ ಸಿನಿಮಾ ಮತ್ತು ಹಿಂದಿ ಹಾಡು ನಿಷೇಧ...ಸ್ಟಾಲಿನ್‌ ಪ್ಲಾನ್‌ ಏನು?

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ರಾಜ್ಯಾದ್ಯಂತ ಹಿಂದಿ ಚಲನಚಿತ್ರ, ಬೋರ್ಡ್ ಮತ್ತು ಹಾಡುಗಳ ಹೇರಿಕೆಯನ್ನು ನಿಷೇಧಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಚುನಾವಣೆ ಮುನ್ನ ದ್ರಾವಿಡ ಅಭಿಮಾನ ಮತ್ತು ಭಾಷಾ ಸ್ವಾಭಿಮಾನ ಬಲಪಡಿಸುವ ಉದ್ದೇಶದ ಜೊತೆಗೆ ಈ ನಿರ್ಧಾರದ ಬಗ್ಗೆ ತೀವ್ರ ಚರ್ಚೆಗಳು ನಡೆದಿವೆ.

ತಮಿಳುನಾಡು ಸರ್ಕಾರವು ಹಿಂದಿ ಭಾಷೆಯ ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದೆ. ಈಗ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ಹಿಂದಿ ಚಲನಚಿತ್ರಗಳು, ಬೋರ್ಡ್‌ಗಳು ಮತ್ತು ಹಾಡುಗಳನ್ನು ನಿಷೇಧಿಸಲು ನಿರ್ಧರಿಸಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಈ ಕುರಿತು ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆಯಲು ಮುಂದಾಗಿದೆ. ಈ ನಿರ್ಧಾರಕ್ಕೆ ಪರ-ವಿರೋಧ ಚರ್ಚೆಗಳು ತೀವ್ರಗೊಂಡಿವೆ.Symbol Premium Mens Smart Casual Extralight Leather Sneakers (Extralight Sole)

ಸಾರ್ವಜನಿಕ ಸ್ಥಳಗಳು ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಹಿಂದಿ ಬಳಕೆಯನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಸ್ಟಾಲಿನ್ ಅವರ ನಿವಾಸದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ತಮಿಳುನಾಡಿನಲ್ಲಿ ದ್ರಾವಿಡ ಅಸ್ಮಿತೆಯ ಕೂಗು ಆಗಾಗ ಕೇಳಿಬರುತ್ತಿದ್ದು, "ಭಾಷೆ ಉಳಿದರೆ ಮಾತ್ರ ಜನಾಂಗ ಉಳಿಯುತ್ತದೆ" ಎಂದು ಸ್ಟಾಲಿನ್ ಹೇಳುತ್ತಿದ್ದಾರೆ. "ಡಿಎಂಕೆ ಹಿಂದಿಯನ್ನು ಒಂದು ಭಾಷೆಯಾಗಿ ವಿರೋಧಿಸುವುದಿಲ್ಲ, ಆದರೆ ತಮಿಳುನಾಡಿನಲ್ಲಿ ಅದರ ಹೇರಿಕೆಯನ್ನು ಬಲವಾಗಿ ವಿರೋಧಿಸುತ್ತದೆ" ಎಂದು ಅವರು ಈ ಹಿಂದೆ ಸ್ಪಷ್ಟಪಡಿಸಿದ್ದರು.'ದೇ ದೇ ಪ್ಯಾರ್ ದೇ 2' ಟ್ರೈಲರ್‌ ಬಿಡುಗಡೆ...ಮೊದಲ ಭಾಗಕ್ಕಿಂತ ಏನು ವ್ಯತ್ಯಾಸ ಇದೆ ನೋಡಿ!

ಶೈಕ್ಷಣಿಕ ನೀತಿಗಳ ಮೂಲಕ ಬಿಜೆಪಿ ಹಿಂದಿ ಮತ್ತು ಸಂಸ್ಕೃತವನ್ನು ಪ್ರಚಾರ ಮಾಡುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ಈ ಚರ್ಚೆಗಳ ನಡುವೆ ಸರ್ಕಾರವು ಈ ದೊಡ್ಡ ನಿರ್ಧಾರಕ್ಕೆ ಮುಂದಾಗಿದೆ. ಈ ಕುರಿತು 'ಟೈಮ್ಸ್ ಆಲ್ಜಿಬ್ರಾ' ಅಕ್ಟೋಬರ್ 15, 2025ರಂದು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.

ಇದೇ ಸಂದರ್ಭದಲ್ಲಿ, 2026ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ನಟ ದಳಪತಿ ವಿಜಯ್ ಕೂಡ ತಮ್ಮದೇ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಡಿಎಂಕೆಗೆ ಪ್ರಬಲ ಸ್ಪರ್ಧಿಯಾಗುವ ಸೂಚನೆ ಇದೆ.