ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನರ್‌ರಚನೆ ಕುರಿತು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ತಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ, ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ? ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಮ್ಮ ಇಚ್ಛೆಯನ್ನು ಪ್ರಸ್ತುತಪಡಿಸಿದ್ದಾರೆ.
ಸಚಿವ ಸ್ಥಾನದ ಬಗ್ಗೆ ಸಿಎಂ, ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ -
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನೂ ಕೂಡ ಸಚಿವ ಸ್ಥಾನ ಕೇಳಿದ್ದೇನೆ. ಕೇಳೋದ್ರಲ್ಲಿ ತಪ್ಪೇನಿದೆ? ನಾನು ಎಸ್. ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದು ಬಂದವನು. ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ನಮಗೆ ಕೇಳುವ ಹಕ್ಕಿದೆ. ಸಚಿವ ಸ್ಥಾನ ಕೊಟ್ಟರೆ ನಮಗೆ ಖುಷಿಯಾಗುತ್ತದೆ. ಆದರೆ, ಒಂದು ವೇಳೆ ಕೊಡದಿದ್ದರೆ ಯಾವುದೇ ರೀತಿಯ ಭಿನ್ನಮತ ಮಾಡುವುದಿಲ್ಲ" ಎಂದು ತಿಳಿಸಿದ್ದಾರೆ.
ಸಂಪುಟ ವಿಸ್ತರಣೆಗಿಂತ ಪುನಾರಚನೆ ಮಾಡಿದರೆ ಒಳ್ಳೆಯದು. ಪುನಾರಚನೆಯಿಂದ ಒಂದಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಿಎಂ ಸ್ಥಾನದ ಚರ್ಚೆ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದ ಅವರು, "ಸಿಎಂ ಸ್ಥಾನದ ಬಗ್ಗೆ ನಾವು ಚರ್ಚೆ ಮಾಡಲ್ಲ, ಅದು ಸಂಪೂರ್ಣವಾಗಿ ಹೈಕಮಾಂಡ್‌ಗೆ ಬಿಟ್ಟ ವಿಷಯ. ಈ ಬಗ್ಗೆ ಯಾರು ಮಾತನಾಡಿದ್ದಾರೋ ಅವರಿಗೆ ಈಗಾಗಲೇ ನೋಟಿಸ್ ಕೊಡಲಾಗಿದೆ. ಹಿಂದೆಲ್ಲಾ ವರಿಷ್ಠರೇ ಒಮ್ಮತದಿಂದ ಮುಖ್ಯಮಂತ್ರಿ ಆಯ್ಕೆ ಮಾಡುತ್ತಿದ್ದರು. ಹೈಕಮಾಂಡ್ ಏನು ಹೇಳುತ್ತದೋ ಅದನ್ನು ನಾವೆಲ್ಲ ಕೇಳುತ್ತೇವೆ" ಎಂದರು.
'ಆರ್‌ಎಸ್‌ಎಸ್ ಚಟುವಟಿಕೆ ನಿಷೇಧ' ವಿಚಾರ -
ಇದೇ ವೇಳೆ, ಶಾಲಾ-ಕಾಲೇಜುಗಳಲ್ಲಿ ಆರ್‌ಎಸ್‌ಎಸ್ (RSS) ಚಟುವಟಿಕೆಗಳನ್ನು ನಿಷೇಧಿಸುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಯತ್ನಕ್ಕೆ ಅವರು ಬೆಂಬಲ ಸೂಚಿಸಿದ್ದಾರೆ. iQOO Z10 Lite 5G (Titanium Blue, 4GB RAM, 128GB Storage) | 6000 mAh Battery | Dimensity 6300 5G Processor with 433K+* AnTuTu Score | IP64 Rated & Military Grade Shock-Resistance*
"ಮೂಲ ಆರ್‌ಎಸ್‌ಎಸ್‌ನವರ ನಿಷ್ಠೆ ಸರಿಯಿದೆ, ಆದರೆ ಬಿಜೆಪಿ ಅವರು ಚಡ್ಡಿ ಹಾಕಿದ ಮೇಲೆ ಆ ನಿಷ್ಠೆ ಹೋಗಿದೆ. ಬಿಜೆಪಿಯವರು ಚಡ್ಡಿ ಹಾಕಿದ ಮೇಲೆ ಹಾಳಾಗಿದೆ. ಪ್ರಿಯಾಂಕ್ ಖರ್ಗೆ ಹೇಳಿರುವುದರಲ್ಲಿ ತಪ್ಪಿಲ್ಲ. ಅವರು (RSS) ಪರ್ಮಿಷನ್ ತೆಗೆದುಕೊಂಡು ಕಾರ್ಯಕ್ರಮಗಳನ್ನು ಮಾಡಲಿ. ಶಾಲೆ, ಕಾಲೇಜುಗಳಲ್ಲಿ ಸಭೆ ಮಾಡಿದರೆ ನಾಳೆ ಬೇರೆಯವರೂ ಕೇಳುತ್ತಾರೆ. ಇದಕ್ಕಾಗಿ ಬೆದರಿಕೆ ಎಲ್ಲ ಹಾಕೋದಿಕ್ಕೆ ಹೋಗಬಾರದು. ಬೆದರಿಕೆ ಹಾಕುತ್ತಾರೆ ಅಂದರೆ ಇವರೇನು ಭಯೋತ್ಪಾದಕರಾ? ಕೊತ್ವಾಲರಾ? ಅದೆಲ್ಲ ನಡೆಯಲ್ಲ, ಅವರ ಬೆದರಿಕೆಗಲ್ಲ ಬಗ್ಗಲ್ಲ" ಎಂದು ವಾಗ್ದಾಳಿ ನಡೆಸಿದರು ಎನ್ನಲಾಗಿದೆ. ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ಬೆದರಿಕೆ ಕರೆ ವಿಡಿಯೋ ರಿಲೀಸ್ - ನಿವಾಸಕ್ಕೆ ಪೋಲಿಸ್ ಬಿಗಿಭದ್ರತೆ!