ರಾಜ್ಯದಲ್ಲಿ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಇನ್‌ಫೋಸಿಸ್ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಕುಟುಂಬ ಭಾಗವಹಿಸುವುದಿಲ್ಲ ಎಂದು ತಿಳಿದುಬಂದಿದೆ. ನಾವು ಹಿಂದುಳಿದ ವರ್ಗದ ಯಾವ ಜಾತಿಗೂ ಸೇರುವುದಿಲ್ಲ ಎಂದು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಯವರು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ವಯಂ ಘೋಷಣೆಯ ನಮೂನೆ ಸಲ್ಲಿಸಿದ ಅವರು ಅಧಿಕೃತವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಣೆ ತೋರಿದ್ದಾರೆ. ತಾವು ಯಾವುದೇ ಹಿಂದುಳಿದ ವರ್ಗಕ್ಕೆ ಸೇರಿಲ್ಲ. ಇದರಿಂದ ಸಮೀಕ್ಷೆ ಪ್ರಕ್ರಿಯೆ ಪ್ರಯತ್ನಗಳಿಗೆ ಸಹಾಯಕವಾಗುವುದಿಲ್ಲ ಎಂದಿದ್ದಾರೆ. ಕರ್ನಾಟಕದ ನಿವಾಸಿಗಳ ದತ್ತಾಂಶ ಸಂಗ್ರಹಣೆ ಹಾಗೂ ಜೀವನಮಟ್ಟ ಅಳತೆಯ ಗುರಿ ಹೊಂದಿರುವ ಈ ಸಮೇಕ್ಷೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. Lava Bold N1 Pro (Stealth Black, 4 GB RAM, 128 GB Storage)| Bigger 6.67" HD+ IP54 Display | 120 Hz Refresh Rate | 50 MP AI Triple Rear Camera | 8 MP Front Camera| 5000 mAh Battery| Charger in Box
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದಂತೆ, ಕೆಲವು ವೈಯಕ್ತಿಕ ಕಾರಣಗಳಿಂದ ನಾವು ಮಾಹಿತಿ ನೀಡಲು ಸಾಧ್ಯವಿಲ್ಲ.ಹಾಗಾಗಿ ತಾವು ಕುಟುಂಬ ಸಮೇತ ತಮ್ಮ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: RSS ಚಟುವಟಿಕೆ ಬಗ್ಗೆ ವರದಿ ಬಂದ ನಂತರ ನಿರ್ಧಾರ..ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ!