Skip to main content
ವಿಡಿಯೋ
1/3
general

ಕಾಡಸಿದ್ದೇಶ್ವರ ಸ್ವಾಮೀಜಿಗೆ ನಿಷೇಧ - ವಿಜಯಪುರ ಪ್ರವೇಶ ನಿರಾಕರಣೆ ಆದೇಶ!

By Shravanthi R
ಕಾಡಸಿದ್ದೇಶ್ವರ ಸ್ವಾಮೀಜಿಗೆ ನಿಷೇಧ - ವಿಜಯಪುರ ಪ್ರವೇಶ ನಿರಾಕರಣೆ ಆದೇಶ!

ಮಹಾರಾಷ್ಟ್ರದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆ, ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆಗೆ ಪ್ರವೇಶ ನಿಷೇಧ ಮಾಡಲಾಗಿದೆ. ಅಕ್ಟೋಬರ್ 16 ರಿಂದ ಡಿಸೆಂಬರ್ 16, 2025 ರವರೆಗೆ, ಈ ಆದೇಶವು ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಜಾರಿ ಮಾಡಲಾಗಿದೆ ಎನ್ನಲಾಗಿದೆ.

ವಿಜಯಪುರ - ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲಾಧಿಕಾರಿಯಿಂದ ಪ್ರವೇಶವನ್ನ ನಿಷೇಧ ಮಾಡಿ ವಿಜಯಪುರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. 

ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ನಾಗರೀಕ ಸುರಕ್ಷಾ ಸಂಹಿತೆ-2023 (BNSS) ಕಲಂ 163(1)(2)(3) ಅಡಿಯಲ್ಲಿ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲೆಗೆ ಪ್ರವೇಶ ನಿಷೇಧ ಆದೇಶ ಹೊರಡಿಸಿದ್ದಾರೆ.

ಹಿನ್ನೆಲೆ -

ಇತ್ತೀಚೆಗೆ ಮಹಾರಾಷ್ಟ್ರದ ಬೀಳೂರು ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿಯವರು ನೀಡಿದ ವಿವಾದಾತ್ಮಕ ಹೇಳಿಕೆಗಳು ಲಿಂಗಾಯತ ಮಠಾಧೀಶರ ಕುರಿತು ಅವಹೇಳನಕಾರಿ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿವೆ ಎಂದು ಪೊಲೀಸರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹೇಳಿಕೆಗಳ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ - ಗದಗ, ಬೀದರ, ದಾವಣಗೆರೆ, ಬಸವಕಲ್ಯಾಣ, ಬೆಳಗಾವಿ ಮೊದಲಾದಡೆ ಪ್ರತಿಭಟನೆಗಳು, ಆಕ್ರೋಶ ವ್ಯಕ್ತಪಡಿಸುವ ಕಾರ್ಯಗಳು ನಡೆದಿವೆ.

ಪೊಲೀಸ್ ವರದಿ ಪ್ರಕಾರ

ಸ್ವಾಮೀಜಿಯವರ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆಯಲಿರುವ ಶ್ರೀ ಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಉತ್ಸವದಲ್ಲಿ ಭಾಗವಹಿಸಲು ಬರುವ ಯೋಜನೆ ಇದ್ದು, ಅವರ ಭೇಟಿಯಿಂದ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪೊಲೀಸರು ವರದಿ ಸಲ್ಲಿಸಿದ್ದರು.

ಆದೇಶದ ವಿವರ

ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ex parte (ಒರಗಡೆ) ಆದೇಶ ಹೊರಡಿಸಲಾಗಿದ್ದು, ದಿನಾಂಕ 16-10-2025 ರಿಂದ 16-12-2025 ರವರೆಗೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿಜಯಪುರ ಜಿಲ್ಲೆ ಪ್ರವೇಶಿಸಲು ನಿಷೇಧಿಸಲಾಗಿದೆ. iQOO Z10x 5G (Titanium, 8GB RAM, 256GB Storage) | 6500 mAh Large Capacity Battery | Dimensity 7300 Processor | Military-Grade Durability

ಉದ್ದೇಶ

ಈ ಕ್ರಮವು ಸಾರ್ವಜನಿಕ ಶಾಂತತೆ, ಧಾರ್ಮಿಕ ಸಹಿಷ್ಣುತೆ ಮತ್ತು ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಆಧಾರ

ಪೊಲೀಸ್ ಅಧೀಕ್ಷಕರ ವರದಿ, ಮಾಧ್ಯಮ ವರದಿಗಳು ಮತ್ತು ವಿಡಿಯೋ ದೃಶ್ಯಗಳನ್ನು ಒಳಗೊಂಡ ಪೆನ್‌ಡ್ರೈವ್ ದಾಖಲೆಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಬೆದರಿಕೆ ಪ್ರಕರಣ: ಸೋಲಾಪುರದ ದಾನೇಶ್ ಬಂಧನಕ್ಕೆ ಬೆಂಗಳೂರಿನ ಪೊಲೀಸರ ಬಲೆ!