ನಿರ್ದೇಶಕ ಜೋಗಿ ಪ್ರೇಮ್ ಅವರು ಬಾಲಿವುಡ್‌ಗೆ ಕಾಲಿಡಲು ಸಿದ್ಧತೆ ನಡೆಸುತ್ತಿದ್ದಾರೆ. ನಟ ಅಜಯ್ ದೇವಗನ್ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಅಲ್ಲಿನ ಕೆಲವು ನಿರ್ಮಾಣ ಸಂಸ್ಥೆಗಳ ಜೊತೆಯೂ ಚರ್ಚಿಸಿದ್ದಾರೆ. ಸದ್ಯದಲ್ಲೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.
ಪ್ರಸ್ತುತ, ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ನಟನೆಯ ‘ಕೆಡಿ' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇದರ ನಡುವೆಯೇ ಅವರು ತಮ್ಮ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಇತ್ತೀಚೆಗೆ ನೆರವೇರಿಸಿದ್ದರು. ಇದರ ಬೆನ್ನಲ್ಲೇ ಬಾಲಿವುಡ್ ಪ್ರವೇಶದ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.Samsung Galaxy S25 Ultra 5G AI Smartphone (Titanium Black, 12GB RAM, 512GB Storage), 200MP Camera, S Pen Included, Long Battery Life
ಬಾಲಿವುಡ್ ಪ್ರವೇಶದ ಬಗ್ಗೆ ಮಾತನಾಡಿದ ಪ್ರೇಮ್, "ನಾನು ಬಾಲಿವುಡ್‌ನಲ್ಲಿ ಕೆಲವು ನಟರನ್ನು ಭೇಟಿ ಮಾಡಿದ್ದೇನೆ. ದಕ್ಷಿಣದ ನಿರ್ದೇಶಕನಾಗಿ ನನಗೆ ಅಲ್ಲಿ ಸಿಗುತ್ತಿರುವ ಪ್ರೋತ್ಸಾಹ ಹೃದಯ ತುಂಬಿ ಬರುವಂತಿದೆ. ಬಲವಾದ ಸ್ಕ್ರಿಪ್ಟ್‌ನೊಂದಿಗೆ ಬಾಲಿವುಡ್ ಪ್ರವೇಶಿಸಲು ಬಯಸುತ್ತೇನೆ," ಎಂದು ಹೇಳಿದ್ದಾರೆ.ಕನ್ನಡ ಬಿಗ್‌ಬಾಸ್-12: ಮನೆಯೊಳಗೆ ಬಂದ್ಲಾ ಮೋಹಿನಿ...ಗೆಜ್ಜೆ ಸದ್ದು ಕೇಳಿ ನಿದ್ದೆಗೆಟ್ಟ ಸ್ಪರ್ಧಿಗಳು!
ಬಾಲಿವುಡ್ ಯೋಜನೆಗಳ ನಡುವೆಯೂ ಜೋಗಿ ಪ್ರೇಮ್ ತಮ್ಮ ಮುಂದಿನ ಕನ್ನಡ ಪ್ರಾಜೆಕ್ಟ್ ಅನ್ನು ನಿರ್ಲಕ್ಷಿಸಿಲ್ಲ. ಬಾಲಿವುಡ್ ಚಿತ್ರದ ಜೊತೆಗೇ, ಅವರು ಕನ್ನಡ ಪ್ರೇಕ್ಷಕರಿಗಾಗಿ ಹೊಸ ಕನ್ನಡ ಚಿತ್ರದ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನು, ನಟ ದರ್ಶನ್ ಜೊತೆಗಿನ ಸಹಯೋಗದ ವದಂತಿಗಳ ಕುರಿತು ಕೇಳಿದಾಗ, ಜೋಗಿ ಪ್ರೇಮ್ ಹೀಗೆ ಪ್ರತಿಕ್ರಿಯಿಸಿದರು: "ಖಂಡಿತವಾಗಿಯೂ, ದರ್ಶನ್ ತಮ್ಮ ಕಾನೂನು ಸಮಸ್ಯೆಗಳಿಂದ ಹೊರಬಂದಾಗ, ನಾನು ಅವರಿಗೆ ಚಿತ್ರವನ್ನು ನಿರ್ದೇಶಿಸುತ್ತೇನೆ. ಅವರು ನಮ್ಮ ಕುಟುಂಬದಂತೆ."