ಕರ್ನಾಟಕದ ಮಟ್ಟಿಗೆ ರಾಜ್ಯ ರಾಜಕೀಯ ಸಚಿವ ಸಂಪುಟ ಪುನರ್‌ರಚನೆ ನಡೆಯುವ ಚರ್ಚೆ ಬಿಸಿ ಬಿಸಿ ಸುದ್ದಿಯಾಗಿದೆ. ಈ ನಡುವೆ ದೇಶದ ರಾಜಕೀಯ ಇತಿಹಾಸದಲ್ಲಿ ಸಂಚಲನ ಉಂಟಾಗುವಂತ ಸುದ್ದಿಯೊಂದು ವರದಿಯಾಗಿದೆ. ಗುರುವಾರ, ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಚಿವ ಸಂಪುಟದ 16 ಸಚಿವರು, ರಾಜೀನಾಮೆ ನೀಡಿದ್ದು, ಇಂದು ಸಚಿವ ಸಂಪುಟದ ಪುನರ್‌ರಚನೆಯಾಗಲಿರುವುದಾಗಿ ವರದಿಯಲ್ಲಿ ತಿಳಿಸಿದೆ.
ಇಂದು ಹೊಸ ಸಚಿವ ಸಂಪುಟದಲ್ಲಿ 22 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಲ್ಲಮೂಲಗಳಿಂದ ತಿಳಿದುಬಂದಿರುವ ಹಾಗೆ ಹಿಂದಿನ ಸಂಪುಟದ ಆರು ಸಚಿವರು ಮುಂದುವರೆಯುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಸಾಮೂಹಿಕವಾಗಿ ರಾಜೀನಾಮೆ ನೀಡಿರುವ ಬೆಳವಣಿಗೆ ನಂತರ, ಇಂದು ಬೆಳಿಗ್ಗೆ 11.30 ರ ಸುಮಾರಿಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಯವರನ್ನು ಹೊರತುಪಡಿಸಿ, ಎಲ್ಲಾ ಸಚಿವರು ರಾಜೀನಾಮೆ ಕೊಟ್ಟಿದ್ದಾರೆಂದು ಎಂದು ತಿಳಿಸಲಾಗಿದೆ. ಇದು ಸಂಪೂರ್ಣ ಸಚಿವ ಸಂಪುಟ ಪುರ್ನಾರಚನೆಗೆ ದಾರಿ ಮಾಡಿಕೊಟ್ಟಿದೆ. ರಾಜ್ಯ ಸಂಪುಟದಲ್ಲಿ 17 ಸಚಿವರಿದ್ದರು. ಇದರಲ್ಲಿ 8 ಸಚಿವರಿಗೆ ಸಂಪುಟ ದರ್ಜೆ ಹಾಗೂ ಉಳಿದವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿತ್ತು. Redmi A4 5G (Sparkle Purple, 4GB RAM, 64GB Storage) | Segment Largest 6.88in 120Hz | 50MP Dual Camera | 18W Fast Charging | Charger in The Box
2022 ಡಿಸೆಂಬರ್‌ನಲ್ಲಿ ಎರಡನೇ ಬಾರಿಗೆ ಭೂಪೇಂದ್ರ ಪಟೇಲ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇಲ್ಲಿನ ವಿಧಾನಸಭೆಯಲ್ಲಿ 182 ಸದಸ್ಯಬಲವನ್ನು ಹೊಂದಿದೆ. ಗರಿಷ್ಠ 27 ಸಚಿವರನ್ನು ನೇಮಿಸಬಹುದಾಗಿದೆ. ಈ ತಿಂಗಳ ಆರಂಭದಲ್ಲಿ ರಾಜ್ಯ ಬಿಜೆಪಿ ಘಟಕದ ಹೊಸ ಅಧ್ಯಕ್ಷರಾಗಿ ಸಚಿವ ಜಗದೀಶ್ ವಿಶ್ವಕರ್ಮ ಅವರನ್ನು ನೇಮಕ ಮಾಡಲಾಯಿತು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಬೆದರಿಕೆ ಪ್ರಕರಣ: ಸೋಲಾಪುರದ ದಾನೇಶ್ ಬಂಧನಕ್ಕೆ ಬೆಂಗಳೂರಿನ ಪೊಲೀಸರ ಬಲೆ!