Skip to main content
ವಿಡಿಯೋ
1/3
entertainment

ಮಂತ್ರಮಾಂಗಲ್ಯದ ಮೂಲಕ ಮಾದರಿಯಾದ ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್

By Shravanthi R
ಮಂತ್ರಮಾಂಗಲ್ಯದ ಮೂಲಕ ಮಾದರಿಯಾದ ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್

ಸರಿಗಮಪ ಖ್ಯಾತಿಯ ಸಂಗೀತ ಪ್ರತಿಭೆ ಸುಹಾನ ಸೈಯದ್‌ ಅವರು ತಮ್ಮ ಬಹುಕಾಲದ ಗೆಳೆಯ ನಿತಿನ್ ಜೊತೆಗೆ ಸರಳವಾಗಿ ಮಂತ್ರ ಮಾಂಗಲ್ಯ ಮದುವೆ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸುಹಾನ ಸೈಯದ್‌, ತಮ್ಮ 16 ವರ್ಷಗಳ ಪ್ರೀತಿ ಹಾಗೂ ಬಾಂಧವ್ಯದ ಮೂಲಕ ರಂಗಭೂಮಿ ಕಲಾವಿದ ನಿತಿನ್ ಎಂಬುವವರ ಜೊತೆಗೆ ಬಾಳಪಯಣವನ್ನು ನಡೆಸಲಿದ್ದಾರೆ. ಇಂದು ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ. ಬೆಂಗಳೂರಿನವರಾದ ನಿತಿನ್ ಪ್ರಸಿದ್ಧ ನಾಟಕ ಕಂಪನಿಯಾದ ʻನಿನಾಸಂʼ ನಲ್ಲಿ ನಾಟಕ ತರಬೇತಿ ಪಡೆದಿದ್ದಾರೆ. 

ಎರಡು ಮನೆಯವರನ್ನೂ ಒಪ್ಪಿಸಿ, ಅಂತರ್‌ಧರ್ಮೀಯ ವಿವಾಹ ಮಾಡಿಕೊಂಡಿದ್ದು, ಅವರಿಬ್ಬರ ಪ್ರೀತಿಗೆ ಗೆಲುವು ಸಿಕ್ಕಂತಾಗಿದೆ. ಸುಹಾನ ಸೈಯದ್ ಅವರು, ಝೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 13 ರಲ್ಲಿ ಭಾಗವಹಿಸಿದ್ದರು. ತಮ್ಮ ವಿಭಿನ್ನ ಶೈಲಿಯ ಗಾಯನದ ಮೂಲಕ ಗಮನಸೆಳೆದಿದ್ದರು. ಮುಸ್ಲಿಂ ಹುಡುಗಿಯಾಗಿ, ಹಿಂದು ಭಜನೆಗಳನ್ನು ಹಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದರು. ಈ ಬಗ್ಗೆ ವಿವಾದವು ಸೃಷ್ಟಿಯಾಗಿತ್ತು. ಇದಕ್ಕೆ ಹೆದರದೆ ತಮ್ಮ ಸಂಗೀತ ಪ್ರತಿಭೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. Lexton 10 Meter LED Copper String Light | USB Powered Fairy Lights | Warm White Decorative Lights for Diwali, Festival, Home, Balcony & Outdoor Decoration, Pack of 1

ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯ ಸೂತ್ರದ ಮುಖೇನ ಈ ನವಜೋಡಿ ಮಾದರಿಯಾಗಿದ್ದಾರೆ. ಈ ಬಗ್ಗೆ ಅವರು, ಪ್ರತಿಕ್ರಿಯಿಸಿದ್ದು, ನಾವಿಬ್ಬರೂ ಹೈಸ್ಕೂಲ್ ಸ್ನೇಹಿತರು. ಅಂದಿನಿಂದಲೂ ಪರಿಚಿತರು. ಆಗ ಅದು ಸ್ನೇಹವೂ ಪ್ರೀತಿಯೋ ಗೊತ್ತಿರಲಿಲ್ಲ. ಇಬ್ಬರು ಮನೆ ಕಡೆಯಿಂದ ಒಪ್ಪಿಗೆ ಪಡೆದು ಮದುವೆಯಾಗಿದ್ದೇವೆ. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಕರ್ನಾಟಕದ ಜನತೆಯು ಪ್ರೀತಿಯಿಂದ ನಮ್ಮನ್ನು ಹರಸಲಿದ್ದಾರೆ. ನಾವಿಬ್ಬರು ಮಾದರಿಯಾಗಿ ಬದುಕುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Supreme Court Suo motu Action: ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳ ಬಗ್ಗೆ ಆತಂಕ - ಕೇಂದ್ರ, ಸಿಬಿಐಗೆ ನೋಟಿಸ್‌ ಜಾರಿ!