Skip to main content
ವಿಡಿಯೋ
1/2
general

ಛತ್ತೀಸ್‌ಗಢದಲ್ಲಿ ಐತಿಹಾಸಿಕ ನಕ್ಸಲ್ ಶರಣಾಗತಿ: ಒಂದೇ ದಿನ 210 ನಕ್ಸಲರು ಶರಣು!

By Vinutha U
 ಛತ್ತೀಸ್‌ಗಢದಲ್ಲಿ ಐತಿಹಾಸಿಕ ನಕ್ಸಲ್ ಶರಣಾಗತಿ: ಒಂದೇ ದಿನ 210 ನಕ್ಸಲರು ಶರಣು!

ಛತ್ತೀಸ್‌ಗಢದಲ್ಲಿ ಸರ್ಕಾರದ ಶಾಂತಿ ಮತ್ತು ನಕ್ಸಲ್ ನಿಯಂತ್ರಣ ಕಾರ್ಯಾಚರಣೆಗಳು ಫಲಪ್ರದವಾಗಿವೆ. ಒಂದೇ ದಿನ 210 ನಕ್ಸಲರು ಶರಣಗೊಂಡು, ರಾಜ್ಯದ ಇತಿಹಾಸದ ಅತಿದೊಡ್ಡ ಏಕದಿನ ಶರಣಾಗತಿಯನ್ನು ದಾಖಲಿಸಿದ್ದಾರೆ. ಶರಣಾದವರಿಂದ 153 ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳಿಗೆ ಹಸ್ತಾಂತರಿಸಲಾಗಿದೆ.

ಛತ್ತೀಸ್‌ಗಢದಲ್ಲಿ ಮಾವೋವಾದಿ ಚಟುವಟಿಕೆಗಳ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳ ಸಕಾರಾತ್ಮಕ ಫಲಿತಾಂಶ ದೊರೆತಿದೆ. ಒಂದೇ ದಿನ 210 ನಕ್ಸಲರು ಶರಣಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದು ಅತಿ ದೊಡ್ಡ ಏಕದಿನ ಶರಣಾಗತಿಯಾಗಿದೆ. ಇದರೊಂದಿಗೆ, ಕಳೆದ ಮೂರು ದಿನಗಳಲ್ಲಿ ಶರಣಾದ ನಕ್ಸಲರ ಸಂಖ್ಯೆ 238ಕ್ಕೆ ಏರಿಕೆಯಾಗಿದೆ.

ಈ ಶರಣಾಗತಿಯ ಸಂದರ್ಭದಲ್ಲಿ, ಮಾವೋವಾದಿಗಳು ಭದ್ರತಾ ಪಡೆಗಳಿಗೆ 19 AK-47 ರೈಫಲ್‌ಗಳು, 17 ಸ್ವಯಂ ಲೋಡಿಂಗ್‌ ರೈಫಲ್‌ಗಳು, 23 INSAS ರೈಫಲ್‌ಗಳು ಸೇರಿದಂತೆ ಒಟ್ಟು 153 ವಿವಿಧ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ. ಶರಣಾದವರಲ್ಲಿ ನಿಷೇಧಿತ ನಕ್ಸಲ್ ಗುಂಪಿನ ಒಬ್ಬ ಕೇಂದ್ರ ಸಮಿತಿ ಸದಸ್ಯ, ದಂಡಕಾರಣ್ಯ ವಿಶೇಷ ವಲಯ ಸಮಿತಿಯ ನಾಲ್ವರು ಸದಸ್ಯರು, 21 ವಿಭಾಗೀಯ ಸಮಿತಿ ಸದಸ್ಯರು ಮತ್ತು 61 ಪ್ರದೇಶ ಸಮಿತಿ ಸದಸ್ಯರು ಸೇರಿದ್ದಾರೆ.

ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಈ ಬೆಳವಣಿಗೆಯನ್ನು ದೇಶಕ್ಕೆ ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದಾರೆ. ನಕ್ಸಲ್ ನಿಗ್ರಹ ಕಾರ್ಯಾಚರಣೆಗಳ ಯಶಸ್ಸು ಮತ್ತು ಸರ್ಕಾರಿ ಉಪಕ್ರಮಗಳ ಪರಿಣಾಮಕಾರಿತ್ವಕ್ಕೆ ಇದು ಸಾಕ್ಷಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ನಕ್ಸಲರಿಗೆ ಶರಣಾಗಿ, ಇಲ್ಲವೇ ಭದ್ರತಾ ಪಡೆಗಳ ದಾಳಿಗೆ ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಯ ನಂತರ ಈ ಮಹತ್ವದ ಶರಣಾಗತಿ ನಡೆದಿದೆ. Redraft this to English. and give me ash tags and search tags after camas.Bata Women’s Stylish Ballerina Flats – Trendy, Comfortable

ಕಳೆದ ಬುಧವಾರ ಛತ್ತೀಸ್‌ಗಢದಲ್ಲಿ 28 ಮಾವೋವಾದಿಗಳು ಶರಣಾಗಿದ್ದರು. ಇದರ ಬೆನ್ನಲ್ಲೇ ಈ ಬೃಹತ್ ಶರಣಾಗತಿ ನಡೆದಿದೆ. ಜಾರ್ಖಂಡ್ ರಾಜ್ಯದಲ್ಲಿಯೂ ಇಬ್ಬರು ನಕ್ಸಲೀಯರು ಶರಣಾಗಿದ್ದಾರೆ ಎಂದು ವರದಿಯಾಗಿದೆ. ಇದು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸರ್ಕಾರಗಳು ಕೈಗೊಳ್ಳುತ್ತಿರುವ ಶಾಂತಿ ಕ್ರಮಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂಬುದನ್ನು ತೋರಿಸುತ್ತದೆ.