Skip to main content
ವಿಡಿಯೋ
1/3
general

ಚಿತ್ತಾಪುರದಲ್ಲಿ ಭಗವಾಧ್ವಜ ವಿವಾದ: ಪುರಸಭೆ ರಾತ್ರೋರಾತ್ರಿ ಅಳವಡಿಸಿದ ಬ್ಯಾನರ್‌ಗಳು ತೆರವು!

By Pavitra Ganapathi Baradavalli
ಚಿತ್ತಾಪುರದಲ್ಲಿ ಭಗವಾಧ್ವಜ ವಿವಾದ: ಪುರಸಭೆ ರಾತ್ರೋರಾತ್ರಿ ಅಳವಡಿಸಿದ ಬ್ಯಾನರ್‌ಗಳು ತೆರವು!

ಚಿತ್ತಾಪುರದಲ್ಲಿ ನಡೆದ ಆರ್‌ಎಸ್‌ಎಸ್ ಭಗವಾ ಧ್ವಜ ವಿವಾದ! ರಾತ್ರೋರಾತ್ರಿ ಪುರಸಭೆ ಸಿಬ್ಬಂದಿ ಹಚ್ಚಲಾದ ಕೇಸರಿ ಧ್ವಜಗಳು, ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಚಟುವಟಿಕೆಗಳಿಗೆ ನಿಷೇಧ ಹಾಕುವ ನಿರ್ಧಾರ ಈ ವಿವಾದಕ್ಕೆ ಹಿನ್ನೆಲೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಪಥಸಂಚಲನಕ್ಕೆ ಹಾಕಲಾಗಿದ್ದ ಭಗವಾಧ್ವಜಗಳು, ಬ್ಯಾನರ್‌ಗಳು ಹಾಗೂ ಕೇಸರಿ ಪತಾಕೆಗಳನ್ನು ತೆರವುಗೊಳಿಸಲಾಗಿದೆ. ಅಕ್ಟೋಬರ್ 19 ರಂದು ನಡೆಯಲಿರುವ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಪೂರ್ವಭಾವಿಯಾಗಿ ಇವುಗಳನ್ನು ಅಳವಡಿಸಲಾಗಿತ್ತು.ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿ ಬೆಂಗಳೂರು ರಸ್ತೆಗಳ ದುರಸ್ತಿಗೆ ಮುಂದಾದ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಂಜುದಾರ್‌ ಶಾ..!!

ರಾಜ್ಯ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಯತ್ನಗಳ ನಡುವೆಯೇ ಈ ಘಟನೆ ನಡೆದಿದೆ. ಚಿತ್ತಾಪುರವು ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾಗಿದೆ.

ವಿಜಯದಶಮಿ ಉತ್ಸವ ಮತ್ತು ಆರ್‌ಎಸ್‌ಎಸ್‌ನ 100ನೇ ವರ್ಷದ ಸಂಘ ಶತಾಬ್ದಿ ಸಂಭ್ರಮದ ಸಿದ್ಧತೆಗಾಗಿ, ಸಂಘದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಚಿತ್ತಾಪುರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಕೇಸರಿ ಬಣ್ಣದ ಪತಾಕೆಗಳು, ಬ್ಯಾನರ್‌ಗಳು ಹಾಗೂ ಭಗವಾ ಧ್ವಜಗಳನ್ನು ಹಾಕಿದ್ದರು.ಇದನ್ನೂ ಓದಿ: ರಾಜ್ಯ ಸರ್ಕಾರದ ಒಳಮೀಸಲಾತಿ ನಿರ್ಣಯಕ್ಕೆ ವಿರೋಧ: ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳಿಂದ ಹೈಕೋರ್ಟ್‌ಗೆ ಅರ್ಜಿ

ಆದರೆ, ಪುರಸಭೆಯ ನೌಕರರು ಮತ್ತು ಸಿಬ್ಬಂದಿ ರಾತ್ರೋರಾತ್ರಿ ಬಂದು, ಇವುಗಳನ್ನು ಅಳವಡಿಸಲು ಯಾವುದೇ ಪರವಾನಗಿ ಇಲ್ಲ ಎಂದು ಹೇಳಿ ಎಲ್ಲವನ್ನೂ ತೆಗೆದುಹಾಕಿದ್ದಾರೆ. ಈ ವೇಳೆ ಪೋಸ್ಟರ್‌ಗಳನ್ನು ಹರಿದುಹಾಕಲಾಗಿದೆ.

ಈ ಕ್ರಮಕ್ಕೆ ಆರ್‌ಎಸ್‌ಎಸ್ ಅಭಿಮಾನಿಗಳು ಮತ್ತು ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪುರಸಭೆ ವಿರುದ್ಧ ಧಿಕ್ಕಾರ ಕೂಗಿದರು. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಭಗವಾ ಧ್ವಜಗಳನ್ನು ತೆರವುಗೊಳಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಪಾಕಿಸ್ತಾನದಲ್ಲಿ ವಾಯುದಾಳಿ: 3 ಅಫ್ಘಾನ್ ಕ್ರಿಕೆಟಿಗರ ಸೇರಿ 8 ಸಾವು; ದಕ್ಷಿಣ ಏಷ್ಯಾದ ಶಾಂತಿ ಭವಿಷ್ಯ ಅಂಧಕಾರದಲ್ಲಿ!

ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.SWORNOF Women's Kanjivaram Soft Silk Banarasi Sarees With Unstiched Blouse Piece