ದೀಪಾವಳಿ ಹಬ್ಬದ ಶುಭಾರಂಭದ ಸಂಕೇತವಾದ ಹಬ್ಬವೇ, ಧನ್ತೆರಸ್ ಹಬ್ಬ. ಧನಸಂಪತ್ತು, ಸಂವೃದ್ದಿ. ಆರೋಗ್ಯ ವೃದ್ದಿಯ ಆಶಯದ ಹಬ್ಬ. ಇದಕ್ಕಾಗಿ ಶ್ರೀಲಕ್ಷ್ಮೀ, ಧನ್ವಂತರಿ ಹಾಗೂ ಕುಬೇರ ದೇವರುಗಳನ್ನು ಪೂಜಿಸುವ ಸುಸಂದರ್ಭದಲ್ಲಿ ಈ ಹಬ್ಬದ ಮಹತ್ವವಿದೆ ಎನ್ನಲಾಗಿದೆ.
ಧನ್ತೇರಸ್ ಅಥವಾ ಧನತ್ರಯೋದಶಿ ದಿನದಂದು ಶುಭ ಸಂಕೇತವಾಗಿ ಜನರು ಚಿನ್ನ, ಬೆಳ್ಳಿ ಆಭರಣಗಳ ಖರೀದಿಸುವರು. ವಿಶೇಷ ಮನೆಯಲಂಕಾರದೊಟ್ಟಿಗೆ ಮನಮನಗಳು ಸಂಪದ್ಭರಿತವಾಗಲಿ ಎಂದು ಆಶಿಸುವ ಹಿಂದೆ ಪೌರಾಣಿಕ ಘಟನೆಯೊಂದರ ಪ್ರಾಮುಖ್ಯವಿದೆ. ಸಮುದ್ರ ಮಂಥನದ ಸಮಯದಲ್ಲಿ ಅಮೃತ ಕಲಶದೊಂದಿಗೆ ಸಾಗರದಿಂದ ಹೊರಬಂದ ಆಯುರ್ವೇದ ಹಾಗೂ ಆರೋಗ್ಯ ದೇವನಾದ ಧನ್ವಂತರಿಯ ಆರಾಧನೆ ಸಲುವಾಗಿ ಹಾಗೂ ಸಂಪತ್ತಿನ ಅಧೀನ ದೇವತೆ ಲಕ್ಷ್ಮೀಯನ್ನು ಪೂಜಿಸುವ ದೈವಿಕ ದಿನವಿದಾಗಿದೆ. IIK COLLECTION Watches for Women Round Dial |Analogue Quartz Movemnet Ladies Watch|Long Battery Life|Metal Bracelet Chain Strap|Double Lock Clasp Safety Watches for Girls
ಈ ಒಳ್ಳೆಯ ಸಂದರ್ಭದಲ್ಲಿ ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಅತ್ಯಂತ ಶುಭದಾಯಕ ಹಾಗೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶ್ರೇಯಸ್ಕರ ಮುಹೂರ್ತದಲ್ಲಿ ಈ ಹಬ್ಬವನ್ನು ಸಂಪತ್ತು ಹಾಗೂ ಆರೋಗ್ಯ ಯೋಗಕ್ಷೇಮವನ್ನು ಸ್ವಾಗತಿಸಿ ಸುಖಪ್ರಾಪ್ತವಾಗಲಿ ಎಂದು ಉದ್ದೇಶಿಸಲಾಗಿದೆ ಎನ್ನಬಹುದು. ಇದನ್ನೂ ಓದಿ: ಹೆಚ್ಚು ಹೊಗೆ-ಶಬ್ದ ನಿಷೇಧ: ಅಕ್ಟೋಬರ್ 21-22 ದೀಪಾವಳಿಯಲ್ಲಿ ಹಸಿರು ಪಟಾಕಿ ಬಳಕೆ ಅವಶ್ಯಕ!