ಈ ವರ್ಷದ ಧನತ್ರಯೋದಶಿ ಸಂದರ್ಭದಲ್ಲಿ ದೇಶಾದ್ಯಂತ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ದಾಖಲೆಯ ವ್ಯಾಪಾರ ನಡೆದಿದೆ. ಚಿನ್ನ, ಬೆಳ್ಳಿ, ವಾಹನಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿದಂತೆ ವಿವಿಧ ವಸ್ತುಗಳ ಭರ್ಜರಿ ಮಾರಾಟವಾಗಿದ್ದು, ಜೈನ ಸಮುದಾಯವೊಂದು 186 ಐಷಾರಾಮಿ ಕಾರುಗಳನ್ನು ಖರೀದಿಸಿ ಗಮನ ಸೆಳೆದಿದೆ. ಧನತ್ರಯೋದಶಿಯಂದು ದೇಶಾದ್ಯಂತ ಖರೀದಿಯ ಉತ್ಸಾಹ ಜೋರಾಗಿತ್ತು. ಸುಮಾರು 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆದಿದ್ದು, ಇದು ಇತ್ತೀಚಿನ ವರ್ಷಗಳ ಹಬ್ಬದ ಋತುವಿನಲ್ಲಿ ನಡೆದ ಅತಿ ದೊಡ್ಡ ವ್ಯಾಪಾರ ಎಂದು ವ್ಯಾಪಾರಿ ಒಕ್ಕೂಟ ಅಂದಾಜಿಸಿದೆ.
ಆಶ್ವಯುಜ ಮಾಸದ 13ನೇ ದಿನವನ್ನು ‘ಧನತ್ರಯೋದಶಿ’ ಎಂದು ಆಚರಿಸಲಾಗುತ್ತದೆ. ಈ ದಿನ ಆಭರಣ, ವಾಹನ, ಮತ್ತು ಇತರ ವಸ್ತುಗಳ ಖರೀದಿಯಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ವರ್ಷ ಕೇಂದ್ರ ಸರ್ಕಾರವು ಜಿಎಸ್‌ಟಿ ದರವನ್ನು ಇಳಿಕೆ ಮಾಡಿದ್ದರಿಂದ ವಸ್ತುಗಳ ಬೆಲೆ ಕಡಿಮೆಯಾಗಿದ್ದು, ದೇಶಾದ್ಯಂತ ಭರ್ಜರಿ ಖರೀದಿಗೆ ಕಾರಣವಾಯಿತು. Redraft this to English. and give me ash tags and search tags after camas.Bata Women’s Stylish Ballerina Flats – Trendy, Comfortable
60,000 ಕೋಟಿ ರೂ.ಗೂ ಅಧಿಕ ಚಿನ್ನ-ಬೆಳ್ಳಿ ಮಾರಾಟ:
ದೇಶಾದ್ಯಂತ 60,000 ಕೋಟಿ ರೂ.ಗೂ ಹೆಚ್ಚಿನ ಚಿನ್ನ ಮತ್ತು ಬೆಳ್ಳಿ ಮಾರಾಟವಾಗಿದೆ. ದೆಹಲಿಯ ಮಾರುಕಟ್ಟೆಯಲ್ಲಿ 10,000 ಕೋಟಿ ರೂ. ಮೌಲ್ಯದ ಸ್ಥಳೀಯ ಉತ್ಪನ್ನಗಳು ಮಾರಾಡವಾಗಿವೆ, ಇದು ಕಳೆದ ವರ್ಷಕ್ಕಿಂತ ಶೇ.25ರಷ್ಟು ಹೆಚ್ಚು. ಇದರ ಜೊತೆಗೆ 15,000 ಕೋಟಿ ರೂ. ಮೌಲ್ಯದ ಅಡುಗೆ ಪಾತ್ರೆಗಳು ಮತ್ತು ಉಪಕರಣಗಳು, 10,000 ಕೋಟಿ ರೂ.ನ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳು, 3,000 ಕೋಟಿ ರೂ.ನ ಆಲಂಕಾರಿಕ ಮತ್ತು ಪೂಜಾ ಉತ್ಪನ್ನಗಳು, ಹಾಗೂ 12,000 ಕೋಟಿ ರೂ.ನ ಒಣಹಣ್ಣು, ಸಿಹಿತಿಂಡಿಗಳು ಮತ್ತು ವಾಹನಗಳು ಮಾರಾಟವಾಗಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.
75,000 ಕಾರುಗಳ ಮಾರಾಟ:
ಧನತ್ರಯೋದಶಿಯ ಸಂದರ್ಭದಲ್ಲಿ ದೇಶಾದ್ಯಂತ ಕಾರು ಮಾರಾಟ ಭರ್ಜರಿಯಾಗಿ ನಡೆದಿದ್ದು, ಅಕ್ಟೋಬರ್ 18 ಮತ್ತು 19ರಂದು ಒಟ್ಟಾರೆ 75,000 ಕಾರುಗಳು ಮಾರಾಟವಾಗುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ಶನಿವಾರ 40,000ಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದ್ದು, ಭಾನುವಾರ ಇನ್ನೂ 10,000ಕ್ಕೂ ಅಧಿಕ ಕಾರುಗಳ ವಿತರಣೆ ಗುರಿಯನ್ನು ಹೊಂದಿದೆ. ಹುಂಡೈ ಕಂಪನಿಯು ಎರಡು ದಿನಗಳಲ್ಲಿ 15,000ಕ್ಕೂ ಹೆಚ್ಚು ಕಾರುಗಳನ್ನು ವಿತರಿಸುವ ಗುರಿಯನ್ನು ಇಟ್ಟುಕೊಂಡಿದೆ. ಒಟ್ಟಾರೆ, ಇತರ ಕಂಪನಿಗಳ ಕಾರು ವಿತರಣೆಯನ್ನು ಸೇರಿಸಿದರೆ, ಒಟ್ಟು ಮಾರಾಟ 75,000 ದಾಟುವ ಸಾಧ್ಯತೆಯಿದೆ.
ಜೈನ ಸಮುದಾಯದಿಂದ ₹149 ಕೋಟಿಯ 186 ಐಷಾರಾಮಿ ಕಾರು ಖರೀದಿ:
ಗುಜರಾತ್‌ನ ಜೈನ ಸಮುದಾಯವು ಒಂದೇ ದಿನ 149 ಕೋಟಿ ರೂ. ಮೌಲ್ಯದ 186 ಐಷಾರಾಮಿ ಕಾರುಗಳನ್ನು ಖರೀದಿಸಿ ದಾಖಲೆ ಬರೆದಿದೆ. ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ (ಜೆಐಟಿಒ) ಸದಸ್ಯರು ಈ ಕಾರುಗಳನ್ನು ಖರೀದಿಸಿದ್ದು, ಒಂದೇ ಬ್ರೋಕರ್ ಮೂಲಕ ಬುಕ್ಕಿಂಗ್ ಮಾಡಿದ್ದರಿಂದ 21.22 ಕೋಟಿ ರೂ. ರಿಯಾಯಿತಿಯನ್ನು ಪಡೆದಿದ್ದಾರೆ. ಈ ಕಾರುಗಳ ಬೆಲೆ 60 ಲಕ್ಷ ರೂ.ನಿಂದ 1.34 ಕೋಟಿ ರೂ.ವರೆಗಿನವು. ಸಂಸ್ಥೆಯು ಮರ್ಸಿಡಿಸ್, ಬಿಎಂಡಬ್ಲ್ಯೂ ಸೇರಿದಂತೆ 15 ಪ್ರಮುಖ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಈ ಒಪ್ಪಂದವನ್ನು ಕುದುರಿಸಿದೆ. 65,000 ಸದಸ್ಯರನ್ನು ಹೊಂದಿರುವ ಈ ಸಂಸ್ಥೆಯ ಈ ಸಾಧನೆ ಗಮನಾರ್ಹವಾಗಿದೆ.