ಆಸ್ಟ್ರೇಲಿಯಾ; ಪರ್ತ್‌ನಲ್ಲಿ ನಡೆಯುತ್ತಿರುವ ಮೂರು ಏಕದಿನ ಪಂದ್ಯಗಳ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಹೀಗಾಗಿ ಬ್ಯಾಟಿಂಗ್‌ಗೆ ಇಳಿದ ಭಾರತದ ಓಪನಿಂಗ್ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮ ಮತ್ತು ಶುಭ್‌ಮನ್‌ಗಿಲ್ ಅವರ ವಿಕೆಟ್ಗಳನ್ನು ಕಳೆದುಕೊಂಡಿತು ನಂತರ ಬಂದ ವಿರಾಟ್ ಕೊಹ್ಲಿ ಶೂನ್ಯ ಸುತ್ತಿ ಪೆವಿಲಿಯನ್‌ಗೆ ತೆರಳಿದರು.
ಪಂದ್ಯದ ಆರಂಭಕ್ಕೂ ಮುಂಚೆ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯನ್ನು ಬಲೆ ಜೋಡಿ ಎಂದು ಎಲ್ಲರೂ ಕರೆಯುತ್ತಿದ್ದರು ಆದರೆ ಸತತವಾಗಿ 7 ತಿಂಗಳ ಬಳಿಕ ಮೈದಾನಕ್ಕೆ ಇಳಿದ ಈ ಇಬ್ಬರು ಹಿರಿಯ ಆಟಗಾರರು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಎಂಟು ರನ್ ಗಳಿಸಿ ರೋಹಿತ್ ಶರ್ಮ ಔಟ್ಆದರೆ, ಕೊಹ್ಲಿ ಸ್ಟಾರ್ಕ್ ಬೌಲಿಂಗ್ ನಲ್ಲಿ ಕೂಪರ್‌ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು ಅದು ಕೂಡ ಶೂನ್ಯಕ್ಕೆ..ಇದನ್ನು ಓದಿ: ಶ್ರೀ ಠಾಕೂರ್ ಬಂಕೆ ಬಿಹಾರಿ ದೇವಾಲಯದಲ್ಲಿ 54 ವರ್ಷಗಳ ನಂತರ ತೆರೆಯಲ್ಪಟ್ಟ ಭಂಡಾರ; ಸಿಕ್ಕಿದ್ದೇನು?
ನಾಯಕನ ಜವಾಬ್ದಾರಿ ಹೊತ್ತಿರುವ ಶುಭ್‌ಮನ್‌ಗಿಲ್ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದ್ದರು ಕೇವಲ 10 ರನ್ ಗೆ ಔಟ್ ಆಗಿದ್ದಾರೆ. ಹೀಗಾಗಿ ಶುಭ್‌ಮನ್‌ಗಿಲ್ ಬಲಿಷ್ಠ ತಂಡದ ಎದುರು ಬ್ಯಾಟ್ ಬೀಸುವಲ್ಲಿ ಮತ್ತೊಮ್ಮೆ ವಿಫಲವಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯಗಳಲ್ಲಿ ಸಹ ಸ್ಥಿರ ಪ್ರದರ್ಶನ ನೀಡಿರಲಿಲ್ಲ ಹೀಗಾಗಿ ಬಲಿಷ್ಠ ತಂಡದ ಎದುರು ಮುಗ್ಗರಿಸಿದ್ದು ಅಭಿಮಾನಿಗಳು ಅವರ ಕಾಲಳೆಯುತ್ತಿದ್ದಾರೆ.WEET Cotton T-Shirt and Pyjama Set for Men,Night Wear for Men,Men's Pyjama Set 122
ಸದ್ಯಕ್ಕೆ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಆಡುತ್ತಿದ್ದು ಭಾರತ 11.5 ಓವರುಗಳಲ್ಲಿ 37 ರನ್ನಿಗೆ 3 ವಿಕೆಟ್ ಕಳೆದುಕೊಂಡಿದೆ. ಸದ್ಯ ಮಳೆಯಿಂದ ಪಂದ್ಯ ನಿಂತಿದ್ದು, ಪಂದ್ಯ ಮುಂದುವರೆದ ಮೇಲೆ ಭಾರತದ ಪ್ರದರ್ಶನವನ್ನು ನಿರೀಕ್ಷೆ ಮಾಡಬಹುದು.