Skip to main content
ವಿಡಿಯೋ
1/2
crime

ವಿಮಾನದಲ್ಲಿ "ಬಾಂಬ್" ಎಂದು ಬರೆದು ವ್ಯಕ್ತಿಯ ಹುಚ್ಚಾಟ: ಮಧ್ಯರಾತ್ರಿಯೇ ಲ್ಯಾಂಡ್​ ಆದ ವಿಮಾನ!

By Vinutha U
ವಿಮಾನದಲ್ಲಿ "ಬಾಂಬ್" ಎಂದು ಬರೆದು ವ್ಯಕ್ತಿಯ ಹುಚ್ಚಾಟ: ಮಧ್ಯರಾತ್ರಿಯೇ ಲ್ಯಾಂಡ್​ ಆದ ವಿಮಾನ!

ಶನಿವಾರ (ಅ.18) ಮಧ್ಯರಾತ್ರಿ ನಡೆದ ಈ ಘಟನೆಯಿಂದಾಗಿ ವಿಮಾನವನ್ನು ಮಂಗಳೂರಿನ ಬದಲಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.

ಬೆಂಗಳೂರು, ಅಕ್ಟೋಬರ್ 19: ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನ (6E4814)ದಲ್ಲಿ ಪ್ರಯಾಣಿಕನೊಬ್ಬ ಬಾತ್‌ರೂಮ್‌ನಲ್ಲಿ “ಬಾಂಬ್” ಎಂದು ಬರೆದಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಯಿತು. ಶನಿವಾರ (ಅ.18) ಮಧ್ಯರಾತ್ರಿ ನಡೆದ ಈ ಘಟನೆಯಿಂದಾಗಿ ವಿಮಾನವನ್ನು ಮಂಗಳೂರಿನ ಬದಲಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.

ವಿಮಾನದ ಬಾತ್‌ರೂಮ್‌ನಲ್ಲಿ “ಬಾಂಬ್” ಎಂದು ಬರೆದಿರುವುದನ್ನು ಗಮನಿಸಿದ ಪ್ರಯಾಣಿಕರಲ್ಲಿ ಭಯ ಮತ್ತು ಆತಂಕ ಹರಡಿತು. ಸುರಕ್ಷತೆಯ ದೃಷ್ಟಿಯಿಂದ, ವಿಮಾನವನ್ನು ತುರ್ತಾಗಿ ಬೆಂಗಳೂರಿನಲ್ಲಿ ಲ್ಯಾಂಡ್ ಮಾಡಲಾಯಿತು. 168 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಬಳಿಕ, ವಿಮಾನ ನಿಲ್ದಾಣದ ಸಿಬ್ಬಂದಿ ವಿಮಾನ ಮತ್ತು ಪ್ರಯಾಣಿಕರ ಸಂಪೂರ್ಣ ತಪಾಸಣೆ ನಡೆಸಿದರು. ಪರಿಶೀಲನೆಯಲ್ಲಿ ಯಾವುದೇ ಸ್ಫೋಟಕ ವಸ್ತು ಸಿಗದಿದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟರು. Redraft this to English. and give me ash tags and search tags after camas.Bata Women’s Stylish Ballerina Flats – Trendy, Comfortable

ಈ ಹುಚ್ಚಾಟದಿಂದ ಎಲ್ಲ ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿ, ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿಸಿದ ವ್ಯಕ್ತಿಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆರೋಪಿಯನ್ನು ಗುರುತಿಸಿದರೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.