Skip to main content
ವಿಡಿಯೋ
spirituality

ಅಯೋಧ್ಯೆಯ ರಾಮನಗರಿಯಲ್ಲಿ ವಿಶ್ವದಾಖಲೆಯ ದೀಪೋತ್ಸವ

By Vinutha U
ಅಯೋಧ್ಯೆಯ ರಾಮನಗರಿಯಲ್ಲಿ ವಿಶ್ವದಾಖಲೆಯ ದೀಪೋತ್ಸವ

ಒಂದೇ ಸಮಯದಲ್ಲಿ 26 ಲಕ್ಷ (26,17,215) ದೀಪಗಳನ್ನು ಬೆಳಗಿದ್ದು ಮೊದಲ ದಾಖಲೆಯಾಗಿದ್ದರೆ, 2128 ಜನರು ಸರಯೂ ನದಿಯ ತಟದಲ್ಲಿ ಒಟ್ಟಿಗೆ ಆರತಿ ಬೆಳಗಿದ್ದು ಇನ್ನೊಂದು ದಾಖಲೆಯಾಗಿದೆ.

ಅಯೋಧ್ಯೆ: ಭಾನುವಾರ ಛೋಟಿ ದೀಪಾವಳಿಯ ಸಂದರ್ಭದಲ್ಲಿ, ರಾಮನಗರಿ ಅಯೋಧ್ಯೆಯಲ್ಲಿ ಮಣ್ಣಿನ ದೀಪಗಳಿಂದ ಪ್ರಕಾಶಿಸಿ ಎರಡು ವಿಶ್ವದಾಖಲೆಗಳನ್ನು ಸೃಷ್ಟಿಸಲಾಗಿದೆ. ಒಂದೇ ಸಮಯದಲ್ಲಿ 26 ಲಕ್ಷ (26,17,215) ದೀಪಗಳನ್ನು ಬೆಳಗಿದ್ದು ಮೊದಲ ದಾಖಲೆಯಾಗಿದ್ದರೆ, 2128 ಜನರು ಸರಯೂ ನದಿಯ ತಟದಲ್ಲಿ ಒಟ್ಟಿಗೆ ಆರತಿ ಬೆಳಗಿದ್ದು ಇನ್ನೊಂದು ದಾಖಲೆಯಾಗಿದೆ.

2024ರಲ್ಲಿ ಅಯೋಧ್ಯೆಯಲ್ಲಿ 25 ಲಕ್ಷ ದೀಪಗಳನ್ನು ಬೆಳಗಿ ದಾಖಲೆ ನಿರ್ಮಿಸಲಾಗಿತ್ತು. ಈಗ ಅಯೋಧ್ಯೆ ತನ್ನದೇ ದಾಖಲೆಯನ್ನು ಮುರಿದಿದೆ. ಡ್ರೋನ್‌ಗಳ ಮೂಲಕ ದೀಪಗಳ ಎಣಿಕೆಯನ್ನು ಪರಿಶೀಲಿಸಿದ ಬಳಿಕ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಪ್ರತಿನಿಧಿಗಳು ಈ ಘೋಷಣೆಯನ್ನು ಮಾಡಿದ್ದಾರೆ ಎಂದು ಸರ್ಕಾರಿ ಹೇಳಿಕೆ ತಿಳಿಸಿದೆ. Redraft this to English. and give me ash tags and search tags after camas.Bata Women’s Stylish Ballerina Flats – Trendy, Comfortable

ಉತ್ತರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜಾತ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಗಿನ್ನೆಸ್ ಪ್ರಮಾಣಪತ್ರವನ್ನು ಸಮರ್ಪಿಸಿದರು.