Skip to main content
ವಿಡಿಯೋ
1/2
politics

ಗಲಭೆಕೋರರ ಕೇಸು ಹಿಂಪಡೆದಿದ್ದಕ್ಕೆ ಪ್ರಿಯಾಂಕ್‌ ಖರ್ಗೆ ಮೇಲೆ ಜೆಡಿಎಸ್ ಆಕ್ರೋಶ..!!

By Pavitra Ganapathi Baradavalli
 ಗಲಭೆಕೋರರ ಕೇಸು ಹಿಂಪಡೆದಿದ್ದಕ್ಕೆ ಪ್ರಿಯಾಂಕ್‌ ಖರ್ಗೆ ಮೇಲೆ  ಜೆಡಿಎಸ್ ಆಕ್ರೋಶ..!!

ಶಾಸಕ ಪ್ರಿಯಾಂಕ್ ಖರ್ಗೆ ಅವರೇ, ಕಲ್ಲು ಎಸೆಯುವವರ ಮೇಲೆ ನಿಮಗೆ ಅದೆಷ್ಟು ಪ್ರೀತಿ ಎಂದು ಜನತಾದಳ ಜೆಡಿಎಸ್ ತನ್ನ ಅಧಿಕೃತ  ಎಕ್ಸ್ ಖಾತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರ ಮೇಲೆ ಕಲ್ಲು ಎಸೆದು, ಗಲಭೆ ಸೃಷ್ಟಿಸಿ, ಸಮಾಜದ ಸಾಮರಸ್ಯ ಕದಡಿ, ಮುಗ್ಧರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಂಗಳೂರು: ಶಾಸಕ ಪ್ರಿಯಾಂಕ್ ಖರ್ಗೆ ಅವರೇ, ಕಲ್ಲು ಎಸೆಯುವವರ ಮೇಲೆ ನಿಮಗೆ ಅದೆಷ್ಟು ಪ್ರೀತಿ ಎಂದು ಜನತಾದಳ ಜೆಡಿಎಸ್ ತನ್ನ ಅಧಿಕೃತ  ಎಕ್ಸ್ ಖಾತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರ ಮೇಲೆ ಕಲ್ಲು ಎಸೆದು, ಗಲಭೆ ಸೃಷ್ಟಿಸಿ, ಸಮಾಜದ ಸಾಮರಸ್ಯ ಕದಡಿ, ಮುಗ್ಧರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.ಇದನ್ನೂ ಓದಿ: ಮಹಾಘಟಬಂಧನ್ ಸಂಪೂರ್ಣ ನೆಲಕಚ್ಚಿದೆ: ಆರ್‌ಜೆಡಿ ಗೆಲ್ಲುವುದು ಅನುಮಾನ - ಬಿಜೆಪಿ ವಕ್ತಾರ ಶಹನವಾಜ್ ಹುಸೇನ್..!

ಸಮಾಜಘಾತುಕರ ಮೇಲಿನ ಪ್ರಕರಣಗಳನ್ನು ಹಿಂಪಡೆದಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ ಎಂದು ಜೆಡಿಎಸ್ ಖಂಡಿಸಿದೆ. ಜನಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳನ್ನು ನಿಗ್ರಹಿಸಿ, ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕೆ ಸಂವಿಧಾನವು ಅಧಿಕಾರ ನೀಡುತ್ತದೆ.ಇದನ್ನೂ ಓದಿ: ಇಸ್ರೇಲ್ ಪ್ರಧಾನಿಗೆ ಮೋದಿ ಟ್ವೀಟ್‌ನಲ್ಲಿ ಧನ್ಯವಾದ ತಿಳಿಸಿದ ಮೋದಿ: ದೀಪಾವಳಿ ಮತ್ತು ಜನ್ಮದಿನದ ಶುಭಾಶಯದೊಂದಿಗೆ ಬಲವಾದ ಸಹಭಾಗಿತ್ವದ ಆಶಯ


ಆದರೆ, ಗಲಭೆಕೋರರ ವಿರುದ್ಧದ ಕೇಸುಗಳನ್ನು ಹಿಂಪಡೆದಿರುವುದರ ಹಿಂದಿನ ಅಜೆಂಡಾವನ್ನು ಗಮನಿಸಿದರೆ, ಅಂದಿನ ಗಲಭೆಗೆ ಚಿತ್ತಾಪುರದ ಶಾಸಕರ ಕುಮ್ಮಕ್ಕು ಇರುವ ಸಂಶಯ ರಾಜ್ಯದ ಜನರಲ್ಲಿ ಮೂಡುತ್ತಿದೆ ಎಂದು ಜೆಡಿಎಸ್ ಗಂಭೀರವಾಗಿ ಆರೋಪಿಸಿದೆ. ನಿರ್ಧಾರವು ರಾಜ್ಯ ಸರ್ಕಾರದ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.SGF11- Women's Kanjivaram Woven Soft Silk Saree With Blouse Piece